Advertisement

ಮ್ಯಾನ್ಮಾರ್‌: ಸಮುದ್ರದಲ್ಲೇ ಎರಡು ತಿಂಗಳು ವಾಸ

04:49 PM Apr 20, 2020 | sudhir |

ಮಣಿಪಾಲ: ಕೋವಿಡ್ ವೈರಸ್‌ ತಡೆಯಲು ಲಾಕ್‌ಡೌನ್‌ ಹೇರಲಾಗಿದೆ. ಈ ನಡುವೆ ಹಲವರು ಸಮುದ್ರದಲ್ಲಿ ಬಾಕಿಯಾಗಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ದೋಣಿ ಮೂಲಕ ತೆರಳಿದ ಸುಮಾರು 400 ರೋಹಿಂಗ್ಯಾ ನಿರಾಶ್ರಿತರನ್ನು ಸಮುದ್ರದಲ್ಲಿ ರಕ್ಷಿಸಲಾಗಿದೆ ಎಂದು ಬಾಂಗ್ಲಾದೇಶ ಕೋಸ್ಟ್‌ ಗಾರ್ಡ್‌ ಹೇಳಿದೆ. ಆದರೆ ಈ ಪ್ರಯಾಣದಲ್ಲಿ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ.

Advertisement

ಈ ತಂಡದಲ್ಲಿ ಫೆಬ್ರವರಿ ಮಧ್ಯದಲ್ಲಿ ದೊಡ್ಡ ಮೀನುಗಾರಿಕಾ ಟ್ರಾಲರ್‌ನಲ್ಲಿ ಬಂಗಾಲಕೊಲ್ಲಿಯಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಗುಂಪು ಇದು. ಇವರು ಮಲೇಷ್ಯಾವನ್ನು ತಲುಪಲು ಪ್ರಯತ್ನಿಸಿದ್ದರು. ರಕ್ಷಿಸಲಾದ ನಿರಾಶ್ರಿತರು ನೀಡುವ ಮಾಹಿತಿಯಂತೆ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟ ದೇಹಗಳನ್ನು ಸಮುದ್ರಕ್ಕೆ ಎಸೆಯಲಾಗಿದೆ. ಕೆಲವರು ಆಹಾರದ ಕೊರತೆಯಿಂದ ಸಾವನ್ನಪ್ಪಿದರೆ ಮತ್ತೂ ಕೆಲವರು ವಿವಿಧ ಕಾಯಿಲೆಗಳಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ದೋಣಿ ಮಲೇಷಿಯಾದ ಕರಾವಳಿಯನ್ನು ತಲುಪುತ್ತಿದ್ದಂತೆ ಅದನ್ನು ಅಧಿಕಾರಿಗಳು ಹಿಂದಕ್ಕೆ ತಿರುಗಿಸಿದ್ದರು. ಅನಂತರ ಮ್ಯಾನ್ಮಾರ್‌ಗೆ ಪ್ರಯಾಣಿಸಲು 2 ಬಾರಿ ಪ್ರಯತ್ನಿಸಿದ್ದು, ಮ್ಯಾನ್ಮಾರ್‌ ನೌಕಾಪಡೆ ಪ್ರವೇಶವನ್ನು ನಿರಾಕರಿಸಿತ್ತು.

ಬಳಿಕ ಅವರನ್ನು ಬಾಂಗ್ಲಾ ಸರಕಾರ ರಕ್ಷಿಸಿದೆ. ರಕ್ಷಿಸಲ್ಪಟ್ಟ ನಿರಾಶ್ರಿತರು ಹಸಿವಿನಿಂದ ಮತ್ತು ನಿರ್ಜಲೀಕರಣಗೊಂಡಿದ್ದನ್ನು ಗಮನಿಸಿ ಸೂಕ್ತ ಆಹಾರ ನೀಡಲಾಗಿದೆ. 14 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ಕೋವಿಡ್‌-19ರ 84 ಸಾವುಗಳಾಗಿವೆ ಎಂದು ಜಾನ್ಸ್‌ ಹಾಪಿRನ್ಸ್‌ ವಿಶ್ವವಿದ್ಯಾನಿಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next