Advertisement

ಹುಂಡೇಕರ್‌ ವರದಿ: ತಾಲೂಕು ಕೇಂದ್ರ ಎಲ್ಲಿ ಆಗಬೇಕೆಂಬ ಪ್ರಸ್ತಾಪ ಇಲ್ಲ

04:34 PM Mar 28, 2017 | |

ಕುಂದಾಪುರ: ಹುಂಡೇಕರ್‌ ಸಮಿತಿ ವರದಿಯಲ್ಲಿ ದೊಡ್ಡ ತಾಲೂಕುಗಳಲ್ಲಿ ಸಂಪರ್ಕದ ವ್ಯವಸ್ಥೆಗಳು ಅಂದು ಕಡಿಮೆ ಇರುವ ಹಿನ್ನೆಲೆಯಲ್ಲಿ ಜನರಿಗೆ ಹತ್ತಿರದಲ್ಲೇ ಸೌಲಭ್ಯಗಳು ದೊರಕಲಿ ಎನ್ನುವ ಅಭಿವೃದ್ಧಿ  ದೃಷ್ಟಿಕೋನದಲ್ಲಿ ಅಂತಹ ತಾಲೂಕನ್ನು  ಒಡೆದು  ಎರಡು ತಾಲೂಕನ್ನಾಗಿ ಮಾಡಬೇಕೆಂದು ಸೂಚಿಸಿದ್ದರು. ಆದರೆ ಈ ವರದಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ  ಎಂದು ನ್ಯಾಯವಾದಿ  ಟಿ.ಬಿ. ಶೆಟ್ಟಿ ಹೇಳಿದರು.

Advertisement

ಅವರು ರವಿವಾರ ಸಂಜೆ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ  ನಡೆದ ವಂಡ್ಸೆ ಹೋಬಳಿ ಹಿತರಕ್ಷಣಾ ವೇದಿಕೆಯ  ನೇತೃತ್ವದಲ್ಲಿ  ನಡೆದ ಸಭೆೆಯಲ್ಲಿ ಮಾತನಾಡಿದರು. ಹುಂಡೇಕರ್‌ ವರದಿಯಲ್ಲಿ ತಾಲೂಕು  ಕೇಂದ್ರ  ಎಲ್ಲಿ ಆಗಬೇಕೆಂಬ ಪ್ರಸ್ತಾಪ  ಇಲ್ಲ.  ಬೈಂದೂರು ತಾಲೂಕು ರಚನೆಯಾದಲ್ಲಿ  ಬೈಂದೂರೇ ಕೇಂದ್ರವಾಗಬೇಕೆಂದು ವರದಿಯಲ್ಲಿ ಹೇಳಿಲ್ಲ.  ಎ.ಬಿ. ಪ್ರಕಾಶ್‌  ಸಮಿತಿಯಲ್ಲಿದ್ದ  ಚಿರಂಜೀವಿ ಸಿಂಗ್‌ ಕೂಡಾ ಮುಂದೆ  ರಾ.ಹೆ.ಕೇಂದ್ರಿತ ತಾಲೂಕು ಕೇಂದ್ರಗಳಾಗಿ  ಮಾಡುವುದು ಸರಿಯಲ್ಲ ಎಂದಿದ್ದರು.   ಇದುವರೆಗೆ ಯಾವ ಸರಕಾರವೂ ಕೂಡ ತಾಲೂಕು ರಚನೆಗೆ ಸಂಬಂಧಿಧಿಸಿದ ಯಾವುದೇ ವರದಿಗೂ ಗೌರವ ಕೊಟ್ಟಿಲ್ಲ. ಆಡಳಿತ ಪಕ್ಷದ ಸ್ಥಳೀಯ ಶಾಸಕರು ಹೇಳಿದಂತೆ ತಾಲೂಕು ರಚನೆ ನಡೆಯುತ್ತಿದೆೆ ಹೊರತು ಜನರ ಅನುಕೂಲಕ್ಕೆ ನಡೆಯುತ್ತಿಲ್ಲ.

ಬೈಂದೂರು ಹೋಬಳಿಯನ್ನೇ ತಾಲೂಕು ಮಾಡುವುದಾದರೆ ಸ್ವಾಗತ. ವಂಡ್ಸೆ ಹೋಬಳಿಯನ್ನು ಸೇರಿಸಿದರೆ ಎಲ್ಲ ರೀತಿಯ ಹೋರಾಟ ನಡೆಸಲಾಗುವುದು ಎಂದು ನ್ಯಾಯವಾದಿ ಟಿ.ಬಿ. ಶೆಟ್ಟಿ   ಹೇಳಿದರು.

ಸಭೆಯನ್ನುದ್ದೇಶಿಸಿ ತಲ್ಲೂರು ತಾ.ಪಂ. ಸದಸ್ಯ ಕರಣ್‌ ಕುಮಾರ್‌, ಬೈಂದೂರು ಬಿಜೆಪಿ ಬ್ಲಾಕ್‌ ಅಧ್ಯಕ್ಷ ಸದಾನಂದ, ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ , ಕೆರಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಬ್ಲಾಡಿ ನಾರಾಯಣ ಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಟಿ.ಕೆ. ಕೋಟ್ಯಾನ್‌ ತಲ್ಲೂರು ಮಾತನಾಡಿದರು.

ಸಭೆಯಲ್ಲಿ ವಂಡ್ಸೆ ಹೋಬಳಿಯನ್ನು  ಬೈಂದೂರು ತಾಲೂಕಿಗೆ ಸೇರಿಸುವುದರ ಕುರಿತು ಕ್ಷೇತ್ರದ ಶಾಸಕರು ಮತ್ತು  ಸರಕಾರ  ಸ್ಪಷ್ಟ ನಿರ್ಧಾರ ಪ್ರಕಟಿಸದೇ ಇದ್ದಲ್ಲಿ  ವಂಡ್ಸೆ ಹೋಬಳಿ ಮಟ್ಟದಲ್ಲಿ ಜನರ ಸಹಿ ಸಂಗ್ರಹ ಅಭಿಯಾನ, ಬಂದ್‌ ಆಚರಣೆ, ಪ್ರತಿಭಟನಾ ಸಭೆ ಹಾಗೂ  ಮುಂದುವರಿದ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ

Advertisement

ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿದ 43 ತಾಲೂಕುಗಳ ರಚನೆಗೆ 30 ಕೋಟಿ ರೂ. ಹಣ ಮೀಸಲಿಡಲಾಗಿತ್ತು. ಈಗಿನ ಕಾಂಗ್ರೆಸ್‌ ನೇತೃತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ  ಸರಕಾರ  49 ತಾಲೂಕುಗಳ ಘೋಷಣೆ ಮಾಡಿ ಕೇವಲ 10 ಕೋಟಿ ರೂ. ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಅಂದರೆ ಒಂದು ತಾಲೂಕಿಗೆ ಕೇವಲ 20 ಲಕ್ಷ ರೂ. ಮೊತ್ತವನ್ನು ಮೀಸಲಿಟ್ಟ ಹಾಗಾಯಿತು. ಅಭಿವೃದ್ಧಿ ದೃಷ್ಟಿಯಲ್ಲಿ ಬೈಂದೂರು  ಹೋಬಳಿಯನ್ನೇ ತಾಲೂಕು ಮಾಡುವುದು ಸ್ವಾಗತಾರ್ಹ. ಆದರೆ ವಂಡ್ಸೆ ಹೋಬಳಿ ಕುಂದಾಪುರ ತಾಲೂಕಿನ ಅತಿ ದೊಡ್ಡ ಹೋಬಳಿ. ನಿಜಕ್ಕೂ ವಂಡ್ಸೆಯನ್ನೇ ತಾಲೂಕು ಮಾಡಬೇಕಿತ್ತು.
ಬಿ.ಎಂ. ಸುಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next