Advertisement
ಮಂಗಳವಾರದಂದು ನಗರದ ಬ್ರಾಹ್ಮಣರ ಬಡಾವಣೆಯ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀರಾಮವಿಠಲ ದೇವರ ಸಂಸ್ಥಾನ ಪೂಜೆ ನಡೆಸಿದ ನಂತರ ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿ, ಆಶೀರ್ವಚನ ನೀಡಿದ ಸ್ವಾಮಿಜಿಗಳು ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಇಲ್ಲಿನ ಜನರು ಗೋಶಾಲೆ ತೆರೆಯಬೇಕೆಂಬ ಬೇಡಿಕೆ ಇಟ್ಟಿದ್ದು, ಇಲ್ಲಿ ಸಾಮಾಜಿಕ,ಸಾಮರಸ್ಯ ನೆಲೆಯಾಗಿಸುವ ನಿಟ್ಟಿನಲ್ಲಿ ಗೋಶಾಲೆ ಅವಶ್ಯವಿದೆ. ಹಾಗೆಯೇ ಪುರಾಣದಲ್ಲಿ ಮಹತ್ವ ವಿರುವ ಲಕ್ಷ್ಮಣತೀರ್ಥನದಿ ಸಂಪೂರ್ಣ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಅನೈರ್ಮಲ್ಯ ತಾಂಡವವಾಡುತ್ತಿದ್ದು, ತಕ್ಷಣಕ್ಕೆ ನದಿ ಶುದ್ದೀಕರಣ ಕಾರ್ಯಕೈಗೊಳ್ಳಬೇಕೆಂದು ಆಶಿಸಿದರು.
Related Articles
Advertisement
ಆರ್ಥಿಕ ಸಮಾನತೆ ಇಂದಿನ ಅವಶ್ಯ: ಇತ್ತೀಚಿನ ವರ್ಷಗಳಲ್ಲಿ ಹಿಂದೂ ಧರ್ಮದಿಂದ ಮತಾಂತರ ಹೆಚ್ಚುತ್ತಿದ್ದು, ಹಿಂದೂ ಧರ್ಮದಲ್ಲಿನ ಅಸಮಾನತೆಯೇ ಕಾರಣವಲ್ಲವೇ ಎಂಬ ಪ್ರಶ್ನೆಗೆ, ದೇಶದಲ್ಲಿ ದುರ್ಬಲರು ಆರ್ಥಿಕವಾಗಿ ಹಿಂದುಳಿದಿರುವುದನ್ನೇ ಬಂಡವಾಳ ಮಾಡಿಕೊಂಡು ನೆರವಿನ ನೆಪದಲ್ಲಿ ಮತಾಂತರಗೊಳಿಸುತ್ತಿದ್ದಾರೆ. ನಿಯಂತ್ರಣಕ್ಕಾಗಿ ದುರ್ಬಲರಿಗೆ ಆರ್ಥಿಕ ಸಮಾನತೆ ನೀಡಬೇಕು. ಹಿಂದೂ ದೇವಾಲಯಗಳಿಂದ ಬರುವ ಆದಾಯವನ್ನು ಆ ವರ್ಗದ ಜನರ ಕಲ್ಯಾಣಕ್ಕೆ ಮೀಸಲಿಡಬೇಕು. ಈ ಬಗ್ಗೆ ಮಠಮಾನ್ಯಗಳು ಕೂಡ ಅವ್ಯಾಹತವಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿವೆ. ಇವರನ್ನು ಘರ್ ವಾಪ್ಸಿ ಮೂಲಕ ಕರೆತರುವ ಪ್ರಯತ್ನವಿದೆಯೇ ಎಂಬ ಪ್ರಶ್ನೆಗೆ ಅದೂ ಸಹ ನಡೆಯುತ್ತಿದೆ ಎಂದರು.
ದೇವಸ್ಥಾನ ಪ್ರವೇಶ ನಿಷೇಧ ಖಂಡನೆ: ಕೊಪ್ಪಳ ಜಿಲ್ಲೆಯಲ್ಲಿ ದಲಿತ ಮಗುವಿನ ದೇವಾಲಯ ಪ್ರವೇಶ ವಿರೋಧಿಸಿರುವುದು ಖಂಡನೀಯ, ಇದು ಅಕ್ಷಮ್ಯ ಅಪರಾಧವೂ ಹೌದು, ಇಂತಹ ಕಾರ್ಯಕ್ಕೆ ಯಾರೂ ಕೈ ಹಾಕಬಾರದು. ದೇವಾಲಯಗಳಲ್ಲಿ ಮುಕ್ತ ಅವಕಾಶವಿರಲಿ ಎಂದು ಸಲಹೆ ನೀಡಿದರು.
ಈ ವೇಳೆ ಪೇಜಾವರ ಮಠದ ಪಿ.ಆರ್.ಓ.ಗಳಾದ ವಿಷ್ಟು, ಕೃಷ್ಣಭಟ್, ವ್ಯವಸ್ಥಾಪಕ ವಾದಿರಾಜಭಟ್, ಅರ್ಚಕ ನಾರಾಯಣಮೂರ್ತಿ, ಕೃಷ್ಣ, ಸತೀಶ್, ಮೈಸೂರುಪ್ರಕಾಶ್ ಸೇರಿದಂತೆ ಭಕ್ತ ವೃಂದ ಭಾಗವಹಿಸಿದ್ದರು.