Advertisement
ನಾಗರಹೊಳೆ ಉದ್ಯಾನವನದಂಚಿನ ತಾಲೂಕಿನ ಹನಗೋಡು ಹೋಬಳಿಯ ಕೋಣನಹೊಸಹಳ್ಳಿ ಬಳಿಯ ಲಕ್ಷ್ಮಣ ತೀರ್ಥ ನದಿ ಅಂಚಿನಲ್ಲಿ ನಿರ್ಮಿಸಿದ್ದ ಸುಮಾರು ೧೫ ಮೀಟರ್‌ನಷ್ಟು ಉದ್ದದ ರೈಲ್ವೆ ಕಂಬಿ ತಡೆಗೋಡೆ ಮಣ್ಣು ಸಹಿತ ಕುಸಿದು ಬಿದ್ದಿದೆ. ಕೊಡಗಿನ ಕುಟ್ಟ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸತತ ಮಳೆಯಿಂದಾಗಿ ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚಿದ್ದು, ಎರಡು ವರ್ಷಗಳ ಹಿಂದೆ ಇದೇ ರೀತಿ ತಡೆಗೋಡೆ ಕುಸಿದಿತ್ತು. ಮತ್ತಷ್ಟು ತಡೆಗೋಡೆ ಕುಸಿಯುವ ಸಂಭವವಿದೆ.
ತಡೆಗೋಡೆ ಕುಸಿದು ಬಿದ್ದಿದ್ದರಿಂದ ಕಾಡಾನೆಗಳು ಈ ಭಾಗದಿಂದ ಸರಾಗವಾಗಿ ಹೊರಬಂದು ಬೆಳೆಗಳನ್ನು ನಾಶಪಡಿಸುವ ಆತಂಕ ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮವು ಹತ್ತಿರದಲ್ಲೇ ಇರುವುದರಿಂದ ಕಾಡಾನೆಗಳು ಸರಾಗವಾಗಿ ಊರಿನೊಳಕ್ಕೂ ಬರುವ ಸಂಭವವಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆ ಭೀತಿಯಲ್ಲಿ ಜನರು: ಕಳೆದ ಅವಧಿಯಲ್ಲಿ ತಡೆಗೋಡೆ ಬಿದ್ದ ಸಂದರ್ಭದಲ್ಲಿ ಹೊರ ದಾಟಿದ್ದ ಕಾಡಾನೆಗಳು ಬೆಳೆ ನಾಶದ ಜೊತೆಗೆ ಊರೊಳಗೆ ಲಗ್ಗೆ ಸಲಗವು ವ್ಯಕ್ತಿಯೊಬ್ಬರನ್ನು ತಿವಿದು ಸಾಯಿಸಿತ್ತು. ಅಲ್ಲದೆ ಟ್ರಾö್ಯಕ್ಟರ್‌ನ್ನು ಉರುಳಿಸಿ, ಬೈಕ್ ಹಾಗೂ ಮನೆಗಳಿಗೆ ಹಾನಿಮಾಡಿದ್ದನ್ನು ಸ್ಮರಿಸಬಹುದು. ಶೀಘ್ರ ತಡೆಗೋಡೆ ಮರು ನಿರ್ಮಾಣಕ್ಕೆ ರೈತರು ಆಗ್ರಹಿಸಿದ್ದಾರೆ.
Related Articles
Advertisement