ಹುಣಸೂರು : ನಗರದಲ್ಲಿ ಬೀದಿನಾಯಿ ಹಾವಳಿಯ ಬಗ್ಗೆಯೇ ನಗರಸಭೆ ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾಗುತ್ತಿತ್ತು. ಇದರಿಂದ ಎಚ್ಚೆತ್ತ ಪೌರಾಯುಕ್ತ ರವಿಕುಮಾರ್ ನೇತೃತ್ವದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿದ್ದು. ಸೋಮವಾರ ಮುಂಜಾನೆಯಿಂದಲೇ ಅಧಿಕಾರಿಗಳು, ಸಿಬ್ಬಂದಿಗಳು, ಗುತ್ತಿಗೆ ಸಿಬ್ಬಂದಿಗಳ ಸಹಕಾರದಲ್ಲಿ ನಾಯಿಗಳನ್ನು ಹಿಡಿಯುವ ಕಾರ್ಯ ನಡೆಸಿದರು.
ಪ್ರತಿ ಬಾರಿಯ ಸಾಮಾನ್ಯ ಸಭೆಗಳಲ್ಲಿ ಆರಂಭದಿಂದ ಕೊನೆವರೆಗೂ ಸದಸ್ಯರು, ನಗರದಲ್ಲಿ ಕಜ್ಜಿ ನಾಯಿ, ಹುಚ್ಚು ನಾಯಿಗಳ ಹಾವಳಿಯ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರು.
ಉದಯವಾಣಿಯಲ್ಲಿ ನಗರದಲ್ಲಿ ಹಂದಿ, ನಾಯಿ, ಕೋತಿಗಳ ಕಾಟದ ಬಗ್ಗೆ ವಿಶೇಷ ವರದಿಯೂ ಪ್ರಕಟವಾಗಿತ್ತು.
ಸೋಮವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಿದರು.
ಇದನ್ನೂ ಓದಿ : ಚೂರಿಯಿಂದ ಇರಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು, ಪೋಷಕರ ಪ್ರತಿಭಟನೆ