Advertisement

ಹುಣಸೂರು: ಇಬ್ಬರಿಗೆ ಸೋಂಕು

08:39 AM Jul 15, 2020 | Suhan S |

ಹುಣಸೂರು: ತಾಲೂಕಿನಲ್ಲಿ ಮಂಗಳವಾರ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹುಣಸೂರು ಬಸ್‌ ಡಿಪೋದ 36 ವರ್ಷದ ಚಾಲಕ, ಮೂಲತಃ ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದವರಾಗಿದ್ದು, ಬೆಂಗಳೂರು, ರಾಯಚೂರು ಮಾರ್ಗಗಳ ಬಸ್‌ಗಳಲ್ಲಿ ಚಾಲಕರಾಗಿದ್ದರು. ಅನಾರೋಗ್ಯ ದಿಂದ ಬಳಲುತ್ತಿದ್ದ ಈತನನ್ನು ಪರೀಕ್ಷೆಗೊಳಪಡಿಸಿದಾಗ ಕೋವಿಡ್ ಸೋಂಕು ದೃಢಪಟ್ಟಿದ್ದದೆ. ಮೈಸೂರಿನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಗ್ರಾಮದಲ್ಲಿ ಓಡಾಡಿರುವ ರಸ್ತೆಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕಿತ 9 ಮಂದಿಯನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಸೋಂಕಿತ ನೌಕರರೊಂದಿಗೆ ಕೆಲಸ ಮಾಡಿರುವ ನೌಕರರ ಕೋವಿಡ್‌ ಪರೀಕ್ಷೆಗೆ ಸೂಚಿಸಲಾಗಿದೆ. ರೈಲ್ವೆ ನೌಕರನಿಗೆ ಸೋಂಕು: ಹುಣಸೂರು ನಗರದ ಮಾರುತಿ ಬಡಾವಣೆ ವಾಸಿ 35 ವರ್ಷದ ರೈಲ್ವೆ ಇಲಾಖೆ ನೌಕರ ಹೊಳೆನರಸೀಪುರದಲ್ಲಿ ಕೆಲಸ ಮಾಡುತ್ತಿದ್ದು, ಮೈಸೂರಿಗೆ ವರ್ಗವಾಗಿದ್ದರು. ಕಳೆದ ಶನಿವಾರ ಡ್ನೂಟಿ ರಿಪೋರ್ಟ್‌ ಮಾಡಿಕೊಳ್ಳುವ ವೇಳೆ ಅನಾರೋಗ್ಯರಾಗಿದ್ದರಿಂದ ಕೋವಿಡ್‌ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಸೋಮವಾರ ವರದಿಯಲ್ಲಿ ಪಾಸಿಟಿವ್‌ ಬಂದ ಮೇರೆಗೆ ಮಾರುತಿ ಬಡಾವಣೆಯ ರಸ್ತೆ ಸೀಲ್‌ಡೌನ್‌ ಮಾಡಿ, ಪ್ರಾಥಮಿಕ ಸಂಪರ್ಕಿತ 6 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್‌ ಬಸವರಾಜು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next