ಹುಣಸೂರು: ತಂಬಾಕು ದರ ಕುಸಿತದಿಂದ ಆಕ್ರೋಶಿತರಾದ ರೈತರು ಹರಾಜು ಪ್ರಕ್ರಿಯೆಗೆ ಅಡ್ಡಿ ಪಡಿಸಿ. ಪ್ರತಿಭಟಿಸಿದರು.
ಹುಣಸೂರು ತಾಲೂಕಿನ ಕಟ್ಟೆ ಮಳವಾಡಿಯಲ್ಲಿ 3 ಹಾಗೂ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2 ಹರಾಜು ಫ್ಲಾಟ್ ಫಾರಂಗಳಿದ್ದು. ದಿನೇ ದಿನೇ ದರ ಕುಸಿಯುತ್ತಿದೆ.
ಕಳೆದ 15 ದಿನಗಳ ಹಿಂದೆ ಕೆ.ಜಿ.ಗೆ 250 ರೂ ಇದ್ದ ಉತ್ತಮ ದರ್ಜೆ ತಂಬಾಕಿಗೆ ಸೋಮವಾರ 205 ರೂಗೆ ಇಳಿದಿರುವುದು ಹಾಗೂ ಲೋಗ್ರೇಡ್ ಗೆ 155 ರೂಗೆ ಇಳಿದಿದ್ದರಿಂದ ಆಕ್ರೋಶಿತರಾದ ಬೆಳೆಗಾರರು ಮಂಡಳಿ ಅಧಿಕಾರಿಗಳು. ಬೈಯರ್ ಗಳ ವಿರುದ್ದ ಹಾಗೂ ಜನಪ್ರತಿನಿಧಿಗಳ ವಿರುದ್ದ ದಿಕ್ಕಾರ ಮೊಳಗಿಸಿ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಮಾರುಕಟ್ಟೆಯಲ್ಲಿ ದಿನೇ ದಿನೇ ದರ ಕುಸಿಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ. ಜನಪ್ರತಿನಿಧಿಗಳ ಸುಳಿವೇ ಇಲ್ಲ. ಇನ್ನು ಬೈಯರ್ ಗಳು ರೈತರ ಬದುಕನ್ನು ಬರ್ ಬಾತ್ ಮಾಡುತ್ತಿದ್ದಾರೆ. ಇದೇರೀತಿ ಮುಂದುವರೆದರೆ ಸಾಲದ ಸುಳಿಗೆ ಸಿಲುಕುವ ರೈತರು ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆಂದು ಎಚ್ಚರಿಸಿ. ಇನ್ನೂ ಸುಮಾರು 10 ,ರಿಂದ 15 ಮಿಲಿಯನ್ ಕೆ.ಜಿ.ಯಷ್ಟು ತಂಬಾಕು ಹರಾಜಿಗೆ ಬಾಕಿ ಇದ್ದು. ಇನ್ನಾದರೂ ಬೆಲೆ ಕೊಡಿಸುವತ್ತ ಸಂಸದರು ಗಮನ ಹರಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಕೇಂದ್ರ ಸರಕಾರವು ಸಂಸತ್ತನ್ನು ರಬ್ಬರ್ ಸ್ಟ್ಯಾಂಪ್ ಮಾಡಿಕೊಂಡಿದೆ: ಖರ್ಗೆ ಕಿಡಿ