ತಾಲೂಕಿನ ಹನಗೋಡು ಹೋಬಳಿಯ ಗ್ರಾಮದಲ್ಲಿ ಚಿರತೆಯು ನಾಯಿ, ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿರುವ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ, ಡಿ.ಸಿ.ಎಪ್. ಸೀಮಾ ಅವರ ಮಾರ್ಗದರ್ಶನದಲ್ಲಿ ಗ್ರಾಮದ ಚನ್ನಬಸಪ್ಪನವರ ಜಮೀನಿನಲ್ಲಿ ಬೋನ್ ಇರಿಸಿದ್ದರು. ಭಾನುವಾರ ಕರುಗಳನ್ನು ಕೊಂದು ಹಾಕಿದ್ದ ಚಿರತೆಯು ಅರಣ್ಯ ಇಲಾಖೆಯವರು ಬೀನಿನಲ್ಲಿರಿಸಿದ್ದ ನಾಯಿ ತಿನ್ನುವ ಆಸೆಯಿಂದ ಸೋಮವಾರ ರಾತ್ರಿ ಬೋನಿನೊಳಗೆ ಹೊಕ್ಕಿದ್ದ ಸುಮಾರು 5 ವರ್ಷದ ಚಿರತೆಯು ಬೋನಿನಲ್ಲಿ ಬಂಧಿಯಾಯಿತು.
ಡಿಸಿಎಫ್ ಸೀಮಾರ ಮಾರ್ಗದರ್ಶನದಲ್ಲಿ ಸೆರೆ ಸಿಕ್ಕ ಚಿರತೆಯನ್ನು ಅರಣ್ಯದಲ್ಲಿ ಬಂಧಮುಕ್ತಗೊಳಿಸಲಾಗಿದೆ ಎಂದು ಆರ್.ಎಫ್.ಒ. ನಂದಕುಮಾರ್ ತಿಳಿಸಿದರು.
Advertisement