Advertisement

ಹುಣಸೂರು: ಒಂದೆಡೆ ಹುಲಿ ಯೋಜನೆಗೆ 50ರ ಸಂಭ್ರಮ, ಮತ್ತೊಂದೆಡೆ ಆದಿವಾಸಿಗಳ ಶೋಕ ದಿನಾಚರಣೆ

08:37 PM Apr 09, 2023 | Team Udayavani |

ಹುಣಸೂರು: ಹುಲಿ ಸಂರಕ್ಷಣೆ ಹೆಸರಿನಲ್ಲಿ ಅರಣ್ಯಇಲಾಖೆಯು ಆದಿವಾಸಿಗಳ ಹಕ್ಕನ್ನು ಮಾನ್ಯ ಮಾಡದೆ ಗಿರಿಜನರನ್ನು ಅತಂತ್ರಗೊಳಿಸಿ, ಹುಲಿ ಸಂರಕ್ಷಣಾ ಸಂಭ್ರಮ ದಿನಾಚರಣೆಯನ್ನು ವಿರೋಧಿಸಿ ಹುಣಸೂರಲ್ಲಿ ಕಾಡುಕುಡಿಗಳು ಶೋಕದಿನ ಆಚರಿಸಿ ಪ್ರತಿಭಟನೆ ದಾಖಲಿಸಿದರು.

Advertisement

ನಗರದ ಸಂವಿದಾನಸರ್ಕಲ್‌ನಲ್ಲಿ ಜಮಾವಣೆಗೊಂಡ ಆದಿವಾಸಿ ಮುಖಂಡರು ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ನಮ್ಮ ನೆಲಸಾದ ಕಾಡನ್ನು ಕಳೆದುಕೊಂಡು ಅದರ ನೆಪದಲ್ಲೇ ಅಸುನೀಗಿದ ಹಿರಿಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಬುಡಕಟ್ಟು ಕೃಷಿಕರಸಂಘದ ಅಧ್ಯಕ್ಷ ಪಿ.ಕೆ.ರಾಮು, ಕಾರ್ಯದರ್ಶಿ ಜಯಪ್ಪ ಮಾತನಾಡಿ ಅರಣ್ಯಇಲಾಖೆಗೆ ಹುಲಿ ಯೋಜನೆಗೆ ೫೦ರ ಸಂಭ್ರಮವಾಗಿದ್ದರೆ, 50 ವರ್ಷಗಳ ಹಿಂದೆ 1972ರ ವನ್ಯಜೀವಿ ಸಂರಕ್ಷಣಾಕಾಯ್ದೆ ಹೆಸರಿನಲ್ಲಿ ಸರಕಾರವೇ ನಮ್ಮನ್ನು ಕಾಡಿನಿಂದ ಹೊರಗಟ್ಟಿದೆ.ಈ ವೇಳೆ ನಮಗೆ ಪುರ್ನವಸತಿ ಕಲ್ಪಿಸದಿರುವುದು ಚಾರಿತ್ರಿಕ ಅನ್ಯಾಯ, ಇದನ್ನು ಸರಿಪಡಿಸಲೆಂದೆ ಜಾರಿಗೆ ತಂದ ಅರಣ್ಯ ಹಕ್ಕುಮಾನ್ಯತಾ ಕಾಯ್ದೆ- 2006 ಯನ್ನು ನ್ಯಾಯಬದ್ಧವಾಗಿ ಅನುಷ್ಠಾನಗೊಳಿಸದೆ ಅನ್ಯಾಯವಾಗಿದೆ.

ನಾಗರಹೊಳೆ ಉದ್ಯಾನದಿಂದ ಹಿಂದೆ ಹೊರಹಾಕಲ್ಪಟ್ಟ 3418 ಕುಟುಂಬಗಳಿಗೆ ಪ್ರೋ.ಮುಜಾಫರ್‌ ಅಸ್ಸಾದಿ ವರದಿಯನ್ವಯ ಪುರ್ನವಸತಿ ಕಲ್ಪಿಸದೆ ಉಚ್ಚ ನ್ಯಾಯಾಲಯ ಆದೇಶವನ್ನೇ ಉಲ್ಲಂಘಿಸಿದ್ದಾರೆ. ಈ ಸಂಬಂಧ ಮೈಸೂರಿಗೆ ಆಗಮಿಸಿದ್ದ ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಲು ಅನುಮತಿ ಸಿಗಲಿಲ್ಲಾ, ಹೀಗಾಗಿ ಈ ದಿನವನ್ನು ಶೋಕದ ದಿನವಾಗಿ ಆಚರಿಸಲಾಗಿದ್ದು, ಕಾಡಿನ ಚಿಂತೆಯಲ್ಲೇ ಅಸುನೀಗಿದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸಿ ಪ್ರತಿಭಟನೆ ನಡೆಸಲಾಗಿದೆ ಎಂದರು.

ದಲಿತಚಳುವಳಿಯ ನವನಿರ್ಮಾಣ ವೇದಿಕೆಯ ಹರಿಹರ ಆನಂದಸ್ವಾಮಿ ಮಾತನಾಡಿ ಪ್ರಧಾನಮಂತ್ರಿಗಳು ೮ಬಾರಿ ರಾಜ್ಯಕ್ಕೆ ಬಂದಿದ್ದರೂ ಒಮ್ಮೆಯೂ ಆದಿವಾಸಿಗಳ ಸಮಸ್ಯೆ ಕುರಿತು ಚರ್ಚಿಸಲಿಲ್ಲ. ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ಗಿರಿಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಆಡಳಿತ ವ್ಯವಸ್ಥೆ ಸತ್ತುಹೋಗಿದೆ. ಇನ್ನು ಮುಂದಾದರೂ ಗಂಭೀರವಾಗಿ ಪರಿಗಣಿಸಬೇಕೆಂದರು.

Advertisement

ಡೀಡ್‌ನ ಡಾ.ಎಸ್.ಶ್ರೀಕಾಂತ್ ಮಾತನಾಡಿ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿಸಿದ್ದಾರೆ. ಬಿರ್ಸಾಮುಂಡಾ ಜಯಂತಿಯನ್ನು ಆಚರಣೆಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ ಕಳೆದ 50 ವರ್ಷಗಳಿಂದ ಆದಿವಾಸಿಗಳು ಪುನರ್ವಸತಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ.

ನ್ಯಾಯಾಲಯವು ಆದಿವಾಸಿಗಳ ಪರವಾಗಿ ನ್ಯಾಯನೀಡಿದೆ. ಆದರೆ ಅರಣ್ಯ ಇಲಾಖೆ, ಸರಕಾರ ಅನ್ಯಾಯ ಮಾಡುತ್ತಲೇ ಬಂದಿದ್ದು, ಇನ್ನಾದರೂ ಆದಿವಾಸಿಗಳಿಗೆ ನ್ಯಾಯ ಸಿಗುವಂತಾಗಲೆಂದು ಒತ್ತಾಯಿಸಿದರು.

ನಂತರ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಕಂದಾಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇನ್ಸ್ಪೆಕ್ಟರ್ ದೇವೇಂದ್ರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಶೋಕಾಚರಣೆ ಪ್ರತಿಭಟನೆಯಲ್ಲಿ ಆದಿವಾಸಿ ಮುಖಂಡರಾದ ಹರ್ಷ, ಶಿವಣ್ಣ, ಪ್ರಕಾಶ್, ವಿಠಲ್, ಅರಪೇಟಯ್ಯ, ಜ್ಯೋತಿ, ಚಂದ್ರ, ಕಲ್ಲುರಯ್ಯ, ಕೀರ್ತಿ, ಚಿತ್ರ, ನಿತ್ಯ, ಮೌನ, ದರ್ಶನ್, ಕಬ್ಬಾಳಯ್ಯ, ಈರಯ್ಯ, ರಕ್ಷಿತ ಸೇರಿದಂತೆ ಅನೇಕರಿದ್ದರು.

ಇದನ್ನೂ ಓದಿ: 2024ರಲ್ಲಿ ಮಹಾರಾಷ್ಟ್ರದಾದ್ಯಂತ ಕೇಸರಿ ಧ್ವಜ ಹಾರಾಟ: Ayodhyaದಲ್ಲಿ ಸಿಎಂ ಶಿಂಧೆ

Advertisement

Udayavani is now on Telegram. Click here to join our channel and stay updated with the latest news.

Next