Advertisement
ಒಂದೆಡೆ ಜಿಲ್ಲಾ ಕೇಂದ್ರದ ಕೂಗು ಎದ್ದಿದೆ, ಮತ್ತೊಂದೆಡೆ ಹೆದ್ದಾರಿ ಪಕ್ಕದಲ್ಲೇ ಇರುವ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸುಮಾರು. 50 ಮೀಟರ್ ನಷ್ಟು ರಸ್ತೆ ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ಪರಿಸ್ಥಿತಿಯ ಧ್ಯೋತಕವೇ ಸರಿ?.
Related Articles
ಪಿರಿಯಾಪಟ್ಟಣ,ಕುಶಾಲನಗರ,ಮಡಿಕೇರಿ, ಧರ್ಮಸ್ಥಳ, ವಿರಾಜಪೇಟೆ, ರಾಜ್ಯಕ್ಕೂ ಪ್ರಮುಖ ಸಂಪರ್ಕ ರಸ್ತೆಯಲ್ಲಿರುವ ಈನಿಲ್ದಾಣಕ್ಕೆ ಬರುವ ಬಸ್‌ಗಳಲ್ಲಿ ವೃದ್ದರು, ರೋಗಿಗಳು ಮೈಸೂರಿಗೆ ಬಂದು ಹೋಗಬೇಕಿದ್ದು, ಒಮ್ಮ ಬಸ್ ನಿಲ್ದಾಣಕ್ಕೆ ಬಂದವರು ಮತ್ತೆ ಬಸ್‌ಗಳಲ್ಲಿ ಪ್ರಯಾಣಿಸಲು ಗುಂಡಿ ಬಿದ್ದ ಈ ರಸ್ತೆಯಿಂದ ಅಸಹ್ಯ ಪಡುವಂತಾಗಿದೆ.
Advertisement
ಪ್ರಸವ ಗ್ಯಾರಂಟಿ: ಇನ್ನು ಬಸ್‌ನಲ್ಲೇ ಆಸ್ಪತ್ರೆ ಮತ್ತಿತರ ಕಡೆಗೆ ಹೋಗುವ ಸಂಚರಿಸುವ ಗರ್ಭಿಣಿ, ಬಾಣಂತಿ, ಪುಟ್ಟ ಮಕ್ಕಳ ಸ್ಥಿತಿಯಂತೂ ದೇವರೇ ಕಾಪಾಡಬೇಕಿದೆ. ಆಸ್ಪತ್ರೆಯಲ್ಲಿ ಹೆರಿಗೆಯಾಗುವ ಬದಲು ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುವ ರಸ್ತೆಯಲ್ಲಿ ತೆರಳುವ ಬಸ್ ಹತ್ತಿದರೆ ಬಸ್ ನಲ್ಲೇ ಪ್ರಸವ ವೇದನೆಯಿಂದ ಹೆರಿಗೆಯಾದರೂ ಆಶ್ಚರ್ಯವೇನಿಲ್ಲ.
ಕಲೆದ ನಾಲ್ಕು ವರ್ಷಗಳ ಹಿಂದೆ ಬಿದ್ದ ಬಾರೀ ಮಳೆಯಿಂದ ಈ ರಸ್ತೆಯಲ್ಲಿ ದೊಡ್ಡ ಹೊಂಡಗಳಾಗಿದ್ದು. ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಮಾತ್ರ ಆವರಣದೊಳಗಿನ ಸಂಪರ್ಕ ರಸ್ತೆ ತಮಗೆ ಸಂಬಂಧಿಸಿಯೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದು, ಗುಂಡಿ ಬಿದ್ದ ರಸ್ತೆ ಬಗ್ಗೆ ಹಿಂದಿನ ಡಿಪೋ ಮ್ಯಾನೇಜರ್ ಬಳಿ ಸಾಕಷ್ಟು ಬಾರಿ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಧಿಕಾರಿಗಳೇನಂತಾರೆ :ನಿಲ್ದಾಣದಲ್ಲಿನ ಸಂಚಾರ ನಿಯಂತ್ರಕರಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಪ್ರಶ್ನಿಸಿದರೆ, ಸರ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆನನುತ್ತಾರೆ, ಇನ್ನು ಇತ್ತೀಚೆಗೆ ವರ್ಗಾವಣೆಗೊಂಡು ಬಂದಿರುವ ಡಿಪೋ ಮ್ಯಾನೇಜರ್ ರನ್ನು ಸಂಪರ್ಕಿಸಿದರೆ. ಸಂಸ್ಥೆಯ ತಾಂತ್ರಿಕ ತಜ್ಞರು ವರ್ಗಾವಣೆಗೊಂಡಿದ್ದಾರೆ, ಕೆಲವರು ನಿರ್ವತ್ತಿ ಹೊಂದಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ಸುಬ್ರಮಣ್ಯ, ಡಿಪೋ ಮ್ಯಾನೇಜರ್. ಹುಣಸೂರು. ತಾವು ವಾರದ ಹಿಂದಷ್ಟೆ ಮೈಸೂರಿಗೆ ಬಂದಿದ್ದು, ಇನ್ನೊಂದು ವಾರದಲ್ಲಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು. ಅಶೋಕ್ ಕುಮಾರ್, ಕೆ.ಎಸ್.ಆರ್.ಟಿ.ಸಿ. ಡಿ.ಸಿ. ಗ್ರಾಮಾಂತರ ವಿಭಾಗ. ಮೈಸೂರು. ಸಂಪರ್ಕರಸ್ತೆಯಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಕ್ರಮ ಕೈಗೊಳ್ಳದಿದ್ದಲ್ಲಿ ಜಾಗೃತಿ ಕ್ಲಬ್ ವತಿಯಿಂದ ಸಾರ್ವಜನಿಕರೊಡಗೂಡಿ ಪ್ರತಿಭಟಿಸಲಾಗುವುದು. ಎಚ್.ವೈ.ಕೃಷ್ಣ, ಅಧ್ಯಕ್ಷ, ಜಾಗೃತಿ ಕ್ಲಬ್.ಹುಣಸೂರು. ಈ ರಸ್ತೆ ಗುಂಡಿ ಬಿದ್ದಿರುವ ಬಗ್ಗೆ ಮಾಹಿತಿ ಇದೆ. ಸರಕಾರದಿಂದ ಯಾವುದೇ ಹಣ ಬಿಡುಗಡೆಯಾಗುತ್ತಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವುದಾದರೂ ಅನುದಾನ ತಂದು ಶೀಘ್ರದಲ್ಲೆ ಗುಂಡಿಗಳನ್ನು ಮುಚ್ಚಲಾಗುವುದು. – ಎಚ್.ಪಿ.ಮಂಜುನಾಥ್,ಶಾಸಕ. – ಸಂಪತ್ ಕುಮಾರ್,ಹುಣಸೂರು