ಹುಣಸೂರು: ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ನೂತನ ಉಪಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಪಿ.ಎ.ಸೀಮಾ ಅಧಿಕಾರವಹಿಸಿಕೊಂಡರು.
ಈ ಹಿಂದೆ ಮಡಿಕೇರಿ ಜಿಲ್ಲೆಯ ಅರಣ್ಯ ಸಂಚಾರಿ ದಳದ ಡಿಸಿಎಫ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಸರಕಾರ ಹುಣಸೂರು ಪ್ರಾದೇಶಿಕ ವಿಭಾಗಕ್ಕೆ ವರ್ಗಾವಣೆಗೊಳಿಸಿದ್ದು, ಅಧಿಕಾರವಹಿಸಿಕೊಂಡರು. ಕಳೆದ ೪೦ ವರ್ಷದಿಂದ ಇದೇ ಪ್ರಥಮ ಬಾರಿಗೆ ಮಹಿಳಾ ಡಿ.ಎಫ್.ಒ.ರನ್ನು ನೇಮಿಸಿದೆ. ನೂತನ ಡಿಸಿಎಫ್ ಪಿ.ಎ.ಸೀಮಾರನ್ನು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನುಷಾರವರು ಹೂಗುಚ್ಚ ನೀಡಿ ಸ್ವಾಗತಿಸಿದರು.
ಹಿಂದೆ ಡಿಸಿಎಫ್ ಆಗಿದ್ದ ಪ್ರಶಾಂತ್ ಕುಮಾರ್ ವರ್ಗಾವಣೆ ನಂತರ ನಾಗರಹೊಳೆ ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಮಹೇಶ್‌ಕುಮಾರ್ ಪ್ರಭಾರವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಖಾಲಿ ಇದ್ದ ಹುದ್ದೆಗೆ ಪಿ.ಎ.ಸಿಮಾರವರನ್ನು ನೇಮಿಸಿ ಆದೇಶಿಸಿದೆ.
ಈ ಸಂದರ್ಭದಲ್ಲಿ ಹುಣಸೂರು ವಲಯ ಅರಣ್ಯ ಅಧಿಕಾರಿ ನಂದಕುಮಾರ್, ಪಿರಿಯಾಪಟ್ಟಣ ವಲಯ ಅರಣ್ಯಾಧಿಕಾರಿ ರತನ್ ಹಾಗೂ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಇಬ್ಬರು ಮಹಿಳಾ ಅಧಿಕಾರಿಗಳು : ಇದೀಗ ಅರಣ್ಯ ಇಲಾಖೆ ಹುಣಸೂರು ವಿಭಾಗದಲ್ಲಿ ಡಿಸಿಎಫ್ ಪಿ.ಎ.ಸೀಮಾ ಹಾಗೂ ಎಸಿಎಫ್ ಅನುಷಾ ಇಬ್ಬರೂ ಮಹಿಳಾ ಅಧಿಕಾರಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.