Advertisement

ಹುಣಸಗಿಗೆ ಬಂದ ಕೂಲಿ ಕಾರ್ಮಿಕರ ತಂಡ

03:59 PM May 13, 2020 | Naveen |

ಹುಣಸಗಿ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕೂಲಿಕಾರ್ಮಿಕರು ಮರಳಿದ್ದಾರೆ. ಕೂಲಿ ಕಾರ್ಮಿಕರನ್ನು ಸುರಪುರ ಕ್ಷೇತ್ರಕ್ಕೆ ಸಾರಿಗೆ ಬಸ್‌ ವ್ಯವಸ್ಥೆ ಮೂಲಕ ತಂದು ಬಿಡಲಾಗಿದೆ. ಸೋಮವಾರ, ಮಂಗಳವಾರ ಸೇರಿ ಎರಡು ದಿನಗಳಲ್ಲಿ 600 ಕಾರ್ಮಿಕರು ಹುಣಸಗಿಗೆ ಬಂದು ಇಳಿದಿದ್ದಾರೆ.

Advertisement

ಇನ್ನು ಕಾರ್ಮಿಕರು ಬರುವ ನಿರೀಕ್ಷೆ ಇದೆ. ಕಾರ್ಮಿಕರನ್ನು ಕರೆತರಬೇಕೆಂಬ ಉದ್ದೇಶದೊಂದಿಗೆ ಸಿಎಂ ಅವರನ್ನು ಭೇಟಿಯಾಗಿ ಶಾಸಕ ನರಸಿಂಹನಾಯಕ(ರಾಜುಗೌಡ)ಅವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಸುಮಾರು 600 ಜನ ಕೂಲಿ ಕಾರ್ಮಿಕರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವ-ಗ್ರಾಮ ಹಾಗೂ ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದಾರೆ.

ತಪಾಸಣೆ: ಹುಣಸಗಿಗೆ ಆಗಮಿಸಿದ ಬಹುತೇಕ ಕಾರ್ಮಿಕರನ್ನು ವೈದ್ಯರು ಸೂಕ್ತ ತಪಾಸಣೆಯೊಂದಿಗೆ ಗೆದ್ದಲಮಾರಿ, ರಾಜನಕೋಳೂರ, ಹುಣಸಗಿ ಮೊರಾರ್ಜಿ ಶಾಲೆ ಹಾಗೂ ಬಾಲಕರ ವಸತಿ ನಿಲಯಗಳಲ್ಲಿ ಸ್ಥಾಪಿಸಲಾದ ಕ್ವಾರಂಟೈನ್‌ನಲ್ಲಿ ಸೂಕ್ತ ಸೌಲಭ್ಯದೊಂದಿಗೆ 14 ದಿನಗಳವರೆಗೆ ಕಾಯ್ದಿರಿಸಲಾಗಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ.ಧರ್ಮರಾಜ ಹೊಸಮನಿ ತಿಳಿಸಿದ್ದಾರೆ.

ಸರಕಾರದ ಸೇವಾಸಿಂಧು ನಿಯಮಗಳೊಂದಿಗೆ ವಲಸೆ ಕಾರ್ಮಿಕರನ್ನು ಕರೆತರಲಾಗಿದೆ. ಬಹುತೇಕವಾಗಿ ಸುರಪುರ ಕ್ಷೇತ್ರದವರಾಗಿದ್ದಾರೆ. ಅನ್ನ-ನೀರು ಇಲ್ಲದೆ ಅನೇಕ ದಿನಗಳಿಂದ ಪಜೀತಿ ಅನುಭವಿಸುವಂತಾಗಿತ್ತು. ಈ ಕುರಿತು ಸರಕಾರ ಮನಸ್ಸು ಮಾಡಿದ್ದರಿಂದ ಅವರೆಲ್ಲರೂ ತವರಿಗೆ ಬಂದಿದ್ದಾರೆ. ಕೆಲವು ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ ಎಂದು ಶಾಸಕ ರಾಜುಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next