Advertisement

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

01:59 PM Dec 16, 2024 | Team Udayavani |

ಹುಬ್ಬಳ್ಳಿ: ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ೧೫೦ ಕೋಟಿ ರೂ. ಆಮೀಷವೊಡ್ಡಿದ್ದಾರೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯು ಒಂದು ವೇಳೆ ನಿಜವಾಗಿದ್ದಾರೆ ಅದರಲ್ಲಿ ಬಿಜೆಪಿಯವರು ಇರಬಹುದೇನೋ? ಆದರೆ ಮಾಣಿಪ್ಪಾಡಿ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೇಳಿಕೆ ನೀಡುವ ಬದಲು ಪ್ರಕರಣವನ್ನು ಸಿಬಿಐಗೆ ಸರಕಾರ ನೀಡಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ಕಬಳಿಕೆ ವಿಚಾರದಲ್ಲಿ ಮಾಜಿ ಅಧ್ಯಕ್ಷ ಮಾಣಿಪ್ಪಾಡಿ ಅವರು ಮೌನವಾಗಿರುವಂತೆ ವಿಜಯೇಂದ್ರ ಅವರು ೧೫೦ ಕೋಟಿ ರೂ. ಆಮೀಷವೊಡ್ಡಿದ್ದರು ಎನ್ನುವ ಆರೋಪ ಗಂಭೀರವಾಗಿದೆ. ಇದರ ಸತ್ಯಾಸತ್ಯತೆ ಜನರಿಗೆ ತಿಳಿಯಬೇಕಾದರೆ ತನಿಖೆ ಅಗತ್ಯವಿದೆ. ಮುಖ್ಯಮಂತ್ರಿ ಸೇರಿದಂತೆ ಸಚಿವರು ಪ್ರಕಣವನ್ನು ಸಿಬಿಐ ನಡೆಸಲಿ ಎಂದು ಹೇಳುತ್ತಿದ್ದು, ಇದು ಕೇವಲ ಹೇಳಿಕೆಗೆ ಸೀಮಿತವಾಗದೆ ಸರಕಾರ ಸಿಬಿಐ ತನಿಖೆಗೆ ನೀಡಲಿ. ಈಗಲಾದರೂ ಕಾಂಗ್ರೆಸ್ಸಿಗರಿಗೆ ಸಿಬಿಐ ಮೇಲೆ ವಿಶ್ವಾಸ ಬಂದಿರುವುದು ಖುಷಿಯ ಸಂಗತಿ. ಆದರೆ ಮಾಣಿಪ್ಪಾಡಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.

ನನ್ನನ್ನು ದ್ರೋಹಿಗಳು ಹೊರಹಾಕಿದರು: ಬಿಜೆಪಿ ನನ್ನ ತಾಯಿ, ಸಾಯುವವರೆಗೂ ತಾಯಿ ಮೇಲೆ ಪ್ರೀತಿ ಇರುತ್ತದೆ. ಯಾವುದೇ ಕಾರಣಕ್ಕೂ ಈ ಪ್ರೀತಿ ಕಡಿಮೆಯಾಗುವುದಿಲ್ಲ. ತಾಯಿ ನನ್ನನ್ನು ಹೊರಹಾಕಿಲ್ಲ. ಅಲ್ಲಿನ ಕೆಲ ದ್ರೋಹಿಗಳು ಪಕ್ಷದಿಂದ ಹೊರ ಹಾಕಿದ್ದಾರೆ ಅಷ್ಟೇ, ಪಕ್ಷಕ್ಕೆ ಪುನಃ ಸೇರ್ಪಡೆ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವನ್ನೂ ಒಮ್ಮೆಲೆ ಹೇಳಿದರೆ ಹೇಗೆ ಎಂದು ಹಾರಿಕೆ ಉತ್ತರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next