Advertisement

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

04:30 PM May 04, 2024 | Team Udayavani |

ಉದಯವಾಣಿ ಸಮಾಚಾರ
ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಶ್ರೀ ಸಂಗಮಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ಹೇಳಿದರು.

Advertisement

ಪಟ್ಟಣದ ಬಸವ ಮಂಟಪದಲ್ಲಿ ಶ್ರೀಶೈಲ ಪಾದಯಾತ್ರಾ ಸೇವಾ ಸಮಿತಿಯು ಬೋರಮ್ಮತಾಯಿ ಪೂಜೆ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಸ್ಥಾನ ಸಮಿತಿಗಳು ಮತ್ತು ಟ್ರಷ್ಟಿಗಳು ನಡೆಸುವ ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ಸಾಕ್ಷಾತ್‌ ಶಿವನ ಸಮ್ಮುಖದಲ್ಲಿ ವಿವಾಹ ಆದಂತೆ ಎಂದರು. ಹಿರಿಯರು ಹಾಕಿದ ನಡೆ-ನುಡಿ ಸಂಸ್ಕಾರ ಮತ್ತು ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ಬಾದವಾಡಗಿ ತಿಳಿಸಿದರು.

ಪಾದಯಾತ್ರಾ ಸೇವಾ ಸಮಿತಿ ಅಧ್ಯಕ್ಷ ವೀರೇಶ ಕುರ್ತಕೋಟಿ ಮಾತನಾಡಿ, ಪ್ರತಿವರ್ಷವೂ ಹುನಗುಂದ ಮಾರ್ಗವಾಗಿ ಶ್ರೀಶೈಲಕ್ಕೆ ಹೋಗುವ ಪಾದಯಾತ್ರಾರ್ಥಿಗಳಿಗೆ ಅವಶ್ಯಕ ಮೂಲ ಸೌಕರ್ಯಗಳನ್ನು ಒದಗಿಸುವ ಜೊತೆಗೆ ನಂತರದ ದಿನಗಳಲ್ಲಿ ಬೋರಮ್ಮತಾಯಿ ಮಹಾಪೂಜೆಯಲ್ಲಿ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಈ ಸಾಮಾಜಿಕ ಸೇವೆಯಲ್ಲಿ ಪ್ರತಿಯೊಬ್ಬರ ಪಾತ್ರವು ಮುಖ್ಯವಾಗಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಈ ಸಾಮೂಹಿಕ ವಿವಾಹದ ಜೊತೆಗೆ ಸಮಾಜಕ್ಕೆ ಅನ್ವಯಿಸುವ ಹೆಚ್ಚಿನ ಕಾರ್ಯ ಮಾಡುವುದೇ ಸಮಿತಿ ಉದ್ದೇಶವಾಗಿದೆ ಎಂದರು.

ಸಮಿತಿ ಕಾರ್ಯದರ್ಶಿ ಮಹಾಂತೇಶ ಹೊದ್ಲೂರ ಮಾತನಾಡಿದರು. ವೀರೇಶ ಶಾಸ್ತ್ರೀಮಠ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿದ್ದರು. ಶೇಖಯ್ಯ ಪುರದಯ್ಯನಮಠ ಬೊರಮ್ಮತಾಯಿ ಮಹಾಪೂಜೆ ನೆರವೇರಿಸಿದರು.

ಸಮಿತಿ ಉದಾಧ್ಯಕ್ಷ ಕಿಡಿಯಪ್ಪ ಹೋಲಗೇರಿ, ಜಗಧೀಶ ಬಳ್ಳೊಳ್ಳಿ, ಮುತ್ತಣ್ಣ ಹವಾಲ್ದಾರ, ಬಸವರಾಜ ಜಮಾದಾರ, ಶರಣಯ್ಯ
ತಾವರಗೇರಿಮಠ, ಪರಸಪ್ಪ ಮಜ್ಜಗಿ, ಮಲ್ಲಪ್ಪ ಪಲ್ಲೇದ, ನಾಗಪ್ಪ ತ್ಯಾಪಿ, ಮುತ್ತಪ್ಪ ಪಲ್ಲೇದ, ಮುತ್ತಣ್ಣ ಹಳಪೇಟಿ, ಶಿವಪ್ಪ ಬಾದವಾಡಗಿ, ಈರಪ್ಪ ಮೇಳಿ, ಮಲ್ಲನಗೌಡ ಪಾಟೀಲ, ಪ್ರಭು ಬೆಳ್ಳಿಹಾಳ, ಮುತ್ತು ಜವಳಗೇರಿ, ಶರಣಪ್ಪ ಹಳಪೇಟಿ, ಶಿವನಗೌಡ ಹಿರೇವೆಂಕನಗೌಡ್ರ, ವಿಜಯಕುಮಾರ ಬೆಳ್ಳಿಹಾಳ, ಶಾಂತಪ್ಪ ಹೊಸಮನಿ, ಚೇತನ ಹಳಪೇಟಿ, ನಾಗನಗೌಡ ನಾಡಗೌಡ್ರ, ಹಿರಿಯ ಪತ್ರಕರ್ತ ಮಲ್ಲು ದರಗಾದ, ಸಂಗಣ್ಣ ಕರಂಡಿ, ಶಿವಪ್ಪ ನಾಗೂರ, ಮುತ್ತಣ್ಣ ಮನ್ನಾಪೂರ, ಮಲ್ಲು ತಾರಿವಾಳ, ಸಂಗಮೇಶ ವೀರಾಪೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next