Advertisement

ಹುಮನಾಬಾದ್ : ಬೇಡ ಜಂಗಮರ ಹೋರಾಟಕ್ಕೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಲಿ

06:34 PM Jul 07, 2022 | Team Udayavani |

ಹುಮನಾಬಾದ: ಬೇಡ ಜಂಗಮರ ಹೋರಾಟಕ್ಕೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟದ ಮಾದರಿಯಲ್ಲಿ ಸಮುದಾಯದ ಜನರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಬೀದರ ಜಿಲ್ಲಾ ಮಠಾಧೀಶರ ಒಕ್ಕೂಡ ಮುಖಂಡರು ಹಾಗೂ ತಡೋಳ ಗುರುಕುಲ ಆಶ್ರಮದ ರಾಜೇಶ್ವರ ಶಿವಾಚಾರ್ಯರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

Advertisement

ಪಟ್ಟಣದ ತಹಶೀಲ್ದಾರ ಕಚೇರಿ ಎದುರಿಗೆ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆ ವತಿಯಿಂದ ಮೀಸಲಾತಿಗಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಗುರುವಾರ ಭೇಟಿನೀಡಿ ಮಾತನಾಡಿದ ಅವರು, ಮಾಂಸಹಾರಿಗಳೇ ಬೇಡಜಂಗಮರು ಎಂಬುದು ತಪ್ಪು. ಎಲ್ಲರ ಆಹಾರ ಪದ್ಧತಿ ಒಂದೇ ಇರಲು ಸಾಧ್ಯವಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರೂಪಿಸಿದ ಕಾನೂನು ಅಡಿಯಲ್ಲಿಯೇ ಜಂಗಮರು ನ್ಯಾಯ ಕೇಳುತ್ತಿದ್ದಾರೆ. ವರ್ಷಕ್ಕೆ ಕೆಲ ದಿನಗಳು ಜಂಗಮರ ಪಾದ ತೋಳೆದು ಪೂಜೆಮಾಡಿ ಗೌರವ ನೀಡಿದರೆ ಸಾಲದು. ಜಂಗಮ ಸಮುದಾದಯಲ್ಲಿ ಕೂಡ ಬಹುತೇಕರು ಕಡು ಬಡವರಿದ್ದಾರೆ. ತುತ್ತು ಅನ್ನಕ್ಕೂ ಕೂಡ ಇಂದಿಗೂ ಭಿಕ್ಷೆ ಬೇಡುವ ಸ್ಥಿತಿ ಇದೆ ಎಂಬುವುದು ಸರ್ಕಾರ ತಿಳಿದುಕೊಂಡು ಬೇಡ ಜಂಗಮ ಭೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ಪೊಲೀಸ್‌ರ ಮೂಲಕ ಹೋರಾಟಗಾರರ ಬಂಧನ ಮಾಡಿಸುತ್ತಿರುವುದು ಸೂಕ್ತವಾದ ಕ್ರಮವಲ್ಲ. ಸಂವಿಧಾನದದಲ್ಲಿ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ ಎಂದ ಅವರು, ಸರ್ಕಾರದ ಸಚಿವರಲ್ಲಿ ದಂದ್ವನೀತಿಗಳು ಇರಬಾರದು. ಎಲ್ಲರೂ ಸೇರಿ ಬೇಡ ಜಂಗಮ ಸಮುದಾಯಕ್ಕೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರಗಳು ತೆಗೆಕೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ದಿನ ಕಳೆದಂತೆ ಬೇರೆ ಸ್ವರೂಪ ಪಡೆಯಬಹುದಾಗಿದೆ. ತೆಲಂಗಾಣ ರಾಜ್ಯಕ್ಕಾಗಿ ಅಲ್ಲಿನ ಮುಖಂಡರು ನಡೆಸಿದ ಪ್ರತಿಭಟನೆ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಪ್ರತಿಭಟನೆಯ ಕಿಚ್ಚು ಹೆಚ್ಚಲ್ಲಿದೆ ಎಂದುವುದು ಸರ್ಕಾರ ಗಮನದಲ್ಲಿ ಇರಿಸಿಕೊಳ್ಳಬೇಕು ಎಂದರು.

ನೇರೆಯ ಮಹಾರಾಷ್ಟ ಹಾಗೂ ತೆಲಂಗಾಣದಲ್ಲಿ ಬೇಡ ಜಂಗಮರಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ. ಮೀಸಲಾತಿ ನೀಡಲ್ಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಮೀಸಲಾತಿಯಿಂದ ದೂರ ಉಳಿಯುವಂತೆ ಮಾಡಲಾಗುತ್ತಿದೆ. ಇದರಿಂದ ಇಂದು ಬೇಡ ಜಂಗಮರ ಸ್ಥಿತಿ ಗತಿ ಹಾಳಾಗುತ್ತಿದೆ ಎಂದು ನೋವು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಸವರಾಜ ಸ್ವಾಮಿ ಟೆಂಗಿನ್, ಸಿದ್ದು ಚಕ್ಕಪಳ್ಳಿ, ಸಿದ್ದು ಹಿರೇಮಠ, ಬಸವ ಹಿರೇಮಠ, ಬಸವರಾಜ ಸ್ವಾಮಿ, ಸುಭಾಷ ಕೆನ್ನಡೆ, ರವಿಸ್ವಾಮಿ ನಿರ್ಣಾ, ಶಿವಕುಮಾರ ನಿಟ್ಟೂರ್, ಶಾಂತಯ್ಯಾ ಸ್ವಾಮಿ, ರಾಮಲಿಂಗ ಸ್ವಾಮಿ, ಶರಣ್ಣಯ್ಯ ಸ್ವಾಮಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next