ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದೂಗಳಿಗೆ ಅವಮಾನ ಮಾಡುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಹೇಳಿದರು.
ಅವರು ಈದ್ಗಾ ಮೈದಾನದಲ್ಲಿ ದೇಶದ ಎಲ್ಲರೂ ಕಾರ್ಯಕ್ರಮ ಮಾಡಲು ಅವಕಾಶವಿದೆ. ಅಲ್ಲಿ ಕೇವಲ ಎರಡು ಬಾರಿ ನಮಾಜ್ ಮಾಡಲು ಅವಕಾಶವಿದೆ. ಉಳಿದ ದಿನದಲ್ಲಿ ಯಾರ ಬೇಕಾದರೂ ಕಾರ್ಯಕ್ರಮ ಮಾಡಬಹುದು ಎಂದರು.
ನಮ್ಮ ಶಾಸಕರು ಹೋರಾಟ ಮಾಡಿದ್ದಾರೆ. ಇವತ್ತು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಸಿಕ್ಕಿದೆ. ನ್ಯಾಯಾಲಯಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ನಾವು ಪಾಕಿಸ್ತಾನ ಪರ ಘೋಷಣೆ ಹಾಕುತ್ತೇವೆ, ಶೋಕಾಚರಣೆ ಮಾಡುತ್ತೇವೆ ಎಂದರೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈದ್ಗಾ ಮೈದಾನ ಯಾರಪ್ಪನ ಆಸ್ತಿ ಅಲ್ಲ, ದೇಶದ ಆಸ್ತಿ. ಸುಮ್ಮನೆ ನಮಾಜ್ ಮಾಡಲು ಅವಕಾಶ ಕೊಟ್ಟಿದೆ. ಏನಾದರೂ ಮಾಡಿದರೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರ ಅವರಿಗೆ ಸಹಕಾರ ಕೊಟ್ಟರೆ ನಾವು ಏನ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಏನೇ ಆಗಿದ್ದರೂ ಅದು ಬಿಜೆಪಿಯಿಂದ. ಶೆಟ್ಟರ ಅವರಿಂದ ಬಿಜೆಪಿಗೆ ಏನೂ ಆಗಿಲ್ಲ. ಶೆಟ್ಟರ ಅವರು ದುಡಿದವರು ಅಲ್ಲ ದುಃಖ ಪಟ್ಟವರು ಅಲ್ಲ ಎಂದು ಯತ್ನಾಳ ಟಾಂಗ್ ನೀಡಿದರು.
ಅನಿವಾರ್ಯ ಕಾರಣಕ್ಕೆ ಅವರು ಮುಖ್ಯಮಂತ್ರಿಯಾದರೂ, ಮಂತ್ರಿಯಾದರೂ ಎಲ್ಲ ಸ್ಥಾನ ಅವರು ಅನುಭವಿಸಿದ್ದರು. ಅವರು ಮುಖ್ಯಮಂತ್ರಿ ಆಗಿ ದುರ್ದೈವ ಮಂತ್ರಿಯಾದರು. ಬಿಜೆಪಿಗೆ ಬೈಯಲು ಅವರ ನೈತಿಕತೆ ಇಲ್ಲ. ಸುಮ್ಮನೆ ಜಗದೀಶ ಶೆಟ್ಟರ ಏನೇನೋ ಮಾತನಾಡುತ್ತಿದ್ದಾರೆ. ಅವರೊಂದಿಗೆ ಯಾವ ಲಿಂಗಾಯತರೂ ಇಲ್ಲ. ಜಗದೀಶ ಶೆಟ್ಟರ ಅವರು ಲಿಂಗಾಯತರಿಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಜಗದೀಶ ಶೆಟ್ಟರ ವಿರುದ್ಧ ತನಿಖೆ ವಿಚಾರಕ್ಕೆ ಮಾತನಾಡಿದ ಅವರು, ಒಂದಲ್ಲ ಬಹಳ ಹಗರಣ ಇವೆ ತನಿಖೆ ಮಾಡ್ತೀವಿ ಎಂದರು.
ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗಿದ್ದಾರೆ.ಯಡಿಯೂರಪ್ಪ ಹಿರಿಯ ನಾಯಕರು ಪಕ್ಷ ಮತ್ತು ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಕೆಲಸ ಮಾಡಲು ಯಾರದೂ ತೊಂದರೆ ಇಲ್ಲ. ಅವರು ಸಂಘಟನೆ ಮಾಡುತ್ತೇನೆಂದರೆ ತಪ್ಪಲ್ಲ, ಅವರು ಮಾಡಬಹುದು, ಅವರು ನಮ್ಮ ಹಿರಿಯ ನಾಯಕರು ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಹೇಳಿದರು.