Advertisement
ಒತ್ತಡದ ಬದುಕಿನ ನಡುವೆ ನಮ್ಮ ಆರೋಗ್ಯದ ಕಡೆಗೆ ಗಮನ ನೀಡಲು ಸಮಯವೇ ಇಲ್ಲದಾಗುತ್ತದೆ. ಹಾಗಾಗಿ ಚಿಕ್ಕ ತಪ್ಪುಗಳಿಂದಲೇ ದೊಡ್ಡ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದು ಕೋಣೆಯ ತೇವಾಂಶ ಶೇ. 45- 65 ಇರಬೇಕು. ತೇವಾಂಶದಲ್ಲಿ ಏರುಪೇರಾದಲ್ಲಿ ಚರ್ಮದ ತೊಂದರೆ, ನಿದ್ರೆ ಸಮಸ್ಯೆ, ಉಸಿರಾಟದ ತೊಂದರೆಗಳು ಆವರಿಸಿಕೊಳ್ಳುತ್ತದೆ. ಇದನ್ನು ನಿರ್ಲಕ್ಷಿಸಿದರೆ ಮುಂದೆ ಗಂಭೀರ ಕಾಯಿಲೆಗಳು ಬರಬಹುದು. ಈ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಮಾಡಿ ಅದನ್ನು ನಿಯಂತ್ರಿಸುವ ಕೆಲಸಗಳಾಗುತ್ತಿವೆ.
Related Articles
ಕೋಣೆಯಲ್ಲಿ ಗಾಳಿಯನ್ನು ಸಮವಾಗಿ ತೇವಗೊಳಿಸಲು ನೆಲದಿಂದ 50- 100 ಸೆ.ಮೀ. ದೂರದಲ್ಲಿ ಹ್ಯೂಮಿಡಿಫೈಯರ್ ಸಾಧನವನ್ನು ಇರಿಸಬೇಕು. ಆಗ ಅದು ಕೊಠಡಿಯೊಳಗೆ ಪಸರಿಸುತ್ತದೆ. ಹ್ಯೂಮಿಡಿಫೈಯರ್‌ನ್ನು ನೇರವಾಗಿ ವಸ್ತುಗಳ ಮೇಲೆ ಅಂದರೆ ಪೀಠೊಪಕರಣ, ಪುಸ್ತಕ, ವಿದ್ಯುತ್ ಉಪಕರಣಗಳ ಮೇಲೆ ಬಿದ್ದಲ್ಲಿ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೋಣೆಯಲ್ಲಿ ಗಾಳಿಯ ತೇವಾಂಶವನ್ನು ಸರಿಯಾಗಿ ಇರಿಸಿಕೊಳ್ಳಲು ಈ ಸಾಧನ ಸಹಕರಿಸುತ್ತದೆ. ಇದು 100 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹೈಪೋಲಾರ್ಜನಿಕ್ ಆವಿಯನ್ನು ಉತ್ಪತ್ತಿ ಮಾಡುತ್ತದೆ. ಇದಕ್ಕಾಗಿ ಈ ಸಾಧನವನ್ನು ಮನೆ, ಕಚೇರಿ ಮತ್ತು ಹಸುರು ಮನೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
Advertisement
ಇದು ಸಾಕಷ್ಟು ವಿದ್ಯುತ್ ಅನ್ನು ಬಳಸಿಕೊಳ್ಳುತ್ತದೆ. ಅಲ್ಟ್ರಾಸಾನಿಕ್‌ನ ತರಂಗಗಳ ಕ್ರಿಯೆಗಳಿಂದಾಗಿ ಇದರಲ್ಲಿರುವ ನೀರು ಆವಿಯಾಗುತ್ತದೆ. ನವಜಾತ ಶಿಶುಗಳು ಮತ್ತು ಮಕ್ಕಳು ಇರುವ ಜಾಗದಲ್ಲಿ ಈ ಸಾಧನವನ್ನು ಹೆಚ್ಚು ಇಡಬಹುದು. ಯಾಕೆಂದರೆ ಧೂಳು ಅಥವಾ ಇನ್ನಿತರ ಕಾರಣಗಳಿಂದ ಉಂಟಾಗುವ ಅಲರ್ಜಿಯನ್ನು ಇದು ತಡೆಗಟ್ಟುತ್ತದೆ.
ಆರ್ದ್ರತೆ ಕಾಪಾಡುತ್ತದೆಬಳಕೆದಾರರ ಸ್ನೇಹಿ ಎಂದು ಹೆಸರು ಪಡೆದುಕೊಂಡಿರುವ ಹ್ಯೂಮಿಡಿಫೈಯರ್ ಮನೆ ಅಥವಾ ಕೊಠಡಿಯಲ್ಲಿ ಅಗತ್ಯವಿರುವ ಮಟ್ಟಕ್ಕೆ ಗಾಳಿಯನ್ನು ಆರ್ದ್ರತೆಗೊಳಿಸುತ್ತದೆ. ಇದು ವಿದ್ಯುತ್ ನಿಯಂತ್ರಕವನ್ನು ಹೊಂದಿದೆ. ಈ ಸಾಧನವನ್ನು ಹೆಚ್ಚಾಗಿ ಅಪಾರ್ಟ್‌ಮೆಂಟ್ ಗಳಲ್ಲಿ ಬಳಸಲಾಗುತ್ತದೆ. ಹೆಚ್ಚಿನ ಬೇಡಿಕೆ
ಒತ್ತಡಯುತ ಜೀವನದಲ್ಲಿ ಮನೆ ಮಂದಿಯ ಆರೋಗ್ಯವನ್ನು ಗಮನಿಸಲು ಸಮಯಾವಕಾಶದ ಕೊರತೆ ಇರುತ್ತದೆ. ಇದಕ್ಕಾಗಿ ಹೆಚ್ಚು ಮಂದಿ ವೈದ್ಯರ ಸಲಹೆಗಳನ್ನು ಪಡೆದು ಆರೋಗ್ಯಯುತವಾಗಿರಲು ಸುಲಭ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಚರ್ಮದ ತೊಂದರೆ ಹಾಗೂ ಇತರ ಸಾಮಾನ್ಯ ತೊಂದರೆಗಳನ್ನು ದೂರ ಮಾಡಲು ಕೆಲವು ಮಾರ್ಗೋಪಾಯಗಳನ್ನು ಮಾಡುತ್ತಾರೆ. ಅವುಗಳಲ್ಲಿ ಹ್ಯೂಮಿಡಿಫೈಯರ್ ಸಾಧನ ಬಹಳ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಈ ಸಾಧನ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಹ್ಯೂಮಿಡಿಫೈಯರ್ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಮಾತ್ರವಲ್ಲದೆ ಆನ್‌ಲೈನ್ ಗಳಲ್ಲೂ ಲಭಿಸುತ್ತದೆ. ವಿವಿಧ ವಿನ್ಯಾಸ, ಕಂಪೆನಿಗಳ ದರ ವ್ಯತ್ಯಸ್ಥವಾಗಿರುತ್ತದೆ. ಈ ಸಾಧನದ ಬೆಲೆ ಸುಮಾರು 1,800 ರೂ. ನಿಂದ ಆರಂಭವಾಗಿ 6,000 ರೂ. ವರೆಗೂ ಇದೆ. ಸಾಧನದ ಗಾತ್ರ, ಗುಣಲಕ್ಷಣಗಳನ್ನು ಹೊಂದಿ ಅದರ ದರ ಬದಲಾವಣೆಗಳು ಉಂಟಾಗುತ್ತದೆ. ಮಕ್ಕಳ ಕೋಣೆಗೂ ಸೂಕ್ತ
ಮಕ್ಕಳ ಕೋಣೆಯಲ್ಲಿ ಆರ್ದ್ರತೆಯ ಮಟ್ಟ ಶೇ.50ಕ್ಕಿಂತ ಕಡಿಮೆಯಾದಾಗ ಮಾತ್ರ ಈ ಸಾಧನವನ್ನು ಬಳಸಬೇಕು. ಕೊಠಡಿಯ ನೀರನ್ನು ಸಂಪೂರ್ಣವಾಗಿ ಆವಿಯನ್ನಾಗಿಸಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಈ ಸಾಧನ ಯಾವುದೇ ಶಬ್ದವನ್ನು ಮಾಡದೆ ಇರುವುದರಿಂದ ಮಕ್ಕಳು ಹಾಯಾಗಿ ಮಲಗುತ್ತಾರೆ. ಪ್ರಜ್ಞಾ ಶೆಟ್ಟಿ