Advertisement

ಸೋಂಕು ಅಟ್ಟಹಾಸದ ನಡುವೆ ಮಾನವೀಯತೆ

05:27 PM May 02, 2021 | Team Udayavani |

ರಾಮನಗರ: ಸೋಂಕಿತ ಸಂಸ್ಕಾರಕ್ಕೆ ಕುಟುಂಬದವರೇಮುಂದಾಗದ ಹೊತ್ತಿನಲ್ಲಿ ಜಿಲ್ಲೆ ಯಲ್ಲಿ ಜೀವ ರಕ್ಷ ಚಾರಿಟ ಬಲ್‌ ಟ್ರಸ್ಟ್‌, ಎಸ್‌ ಡಿಪಿಐ ಮುಂತಾದ ಸಂಘ ಟ ನೆಗಳು ಸೋಂಕಿ ತರ ಶವ ಗಳ ಅಂತ್ಯ ಸಂಸ್ಕಾರ ನೆರೆ ವೇ ರಿಸಿಮಾನ ವೀ ಯತೆ ಮೆರೆ ದಿವೆ.ಕೋವಿಡ್‌ ಕರ್ಫ್ಯೂ ಸಂದ ರ್ಭ ದಲ್ಲಿ ದಿನ ಗೂಲಿಕಾರ್ಮಿ ಕ ಕುಟುಂಬ ಗ ಳು, ಬಿಕ್ಷುಕರು, ನಿರಾಶ್ರಿತರಿಗೆಆಹಾ ರ ಪೊಟ್ಟ ಣ ಗ ಳನ್ನು ವಿತರಿಸಲು ರೋಟರಿ ಸಿಲ್ಕ್ಸಿಟಿ ಸಂಸ್ಥೆ ಮುಂದಾ ಗಿದೆ.
ಆಶಾ. ವಿ. ಸ್ವಾಮಿ ಮಾನವೀಯತೆ: ಅನಾಥ ಶವ ಗಳವಾರ ಸು ದಾರೆ ಎಂದೇ ಖ್ಯಾತಿ ಯಾ ಗಿ ರುವ ಆಶಾ. ವಿ.ಸ್ವಾಮಿ ಇದೀಗ ಕೋವಿಡ್‌ನಿಂದ ಮೃತ ಪ ಟ್ಟ ವರ ಶವಸಂಸ್ಕಾ ರ ವನ್ನು ನೆರೆ ವೇ ರಿ ಸಲು ಮುಂದಾ ಗಿ ದ್ದಾರೆ.ಅಲ್ಲದೆ, ಕರ್ಫ್ಯೂ ವೇಳೆ ಹಸಿದವರಿಗೆ ಊಟ ವಿತ ರಿಸು ತ್ತಿದ್ದಾರೆ. ಸೋಂಕಿ ತರು ಮೃತ ಪ ಟ್ಟರೆ ಕೆಲವು ಕುಟುಂಬಗಳು ಶವ ಸಂಸ್ಕಾರಕ್ಕೆ ಮುಂದಾಗುವುದಿಲ್ಲ. ಆದರೆಆಶಾ.ವಿ. ಸ್ವಾಮಿ ಇದ್ಯಾ ವು ದನ್ನು ಲೆಕ್ಕಿ ಸು ತ್ತಿಲ್ಲ. ತಾವೇಸ್ವತಃ ಪಿಪಿಇ ಕಿಟ್‌ ಧರಿಸಿ ಸಂಸ್ಕಾರ ನೆರವೇರಿಸುತ್ತಿದ್ದಾರೆ.

Advertisement

ಅಪ ಘಾತದಲ್ಲಿ ಮೃತ ಪಟ್ಟ ವರ ಶವ, ಅನಾಥ ಶವಹೀಗೆ ಅಂತ್ಯ ಸಂಸ್ಕಾ ರಕ್ಕೆ ಪೊಲೀ ಸರು ಮೊದಲು ಕರೆಮಾಡು ವುದೇ ಆಶಾ ಅವ ರಿಗೆ. ಕಳೆದ ಕೆಲವು ವರ್ಷ ಗಳಿಂದ ಆಶಾ ಅವರು ನೂರಾರು ಅನಾಥ ಶವಗಳಅಂತ್ಯ ಸಂಸ್ಕಾರ ನೆರೆವೇರಿಸಿದ್ದಾರೆ. ಕೊರೊನಾವೇಳೆಯಲ್ಲಿ ಇವರ ಕಾರ್ಯ ದ್ವಿಗುಣಗೊಂಡಿದೆ.

ಹಸಿದವರಿಗೆ ಆಹಾರ: ಅನಾಥ ಶವ ಗಳ ಅಂತ್ಯಸಂಸ್ಕಾ ರ ಕ್ಕಷ್ಟೇ ಆಶಾ ಮತ್ತು ಆಕೆಯ ಕುಟುಂಬ ಸೀಮಿತ ವಾ ಗಿಲ್ಲ. ಸ್ವತಃ ಸ್ಥಾಪಿ ಸಿ ರುವ ಜೀವ ರಕ್ಷ ಚಾರಿ ಟ ಬಲ್‌ಟ್ರಸ್ಟ್‌ ಮೂಲಕ ಕೋವಿಡ್‌ ಕರ್ಫ್ಯೂ ವೇಳೆ ಬಿಕ್ಷು ಕರು,ನಿರ್ಗ ತಿ ಕರು, ಬಡ ವ ರಿಗೆ ಆಹಾ ರದ ಪೊಟ್ಟ ಣ ಗ ಳನ್ನುನೀಡುವ ಸೇವೆಯಲ್ಲಿ ತೊಡ ಗಿ ಸಿ ಕೊಂಡಿ ದ್ದಾರೆ.

ಅಂತ್ಯ ಸಂಸ್ಕಾರದಲ್ಲಿ ಪಿಎಫ್ಐ: ಮೊದಲ ಅಲೆ ವೇಳೆಶ್ರಮಿಸಿದ್ದ ಪಾಪ್ಯೂ ಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎ ಫ್ ಐ ) ಕಾರ್ಯ ಕ ರ್ತರು ಶವ ಸಂಸ್ಕಾ ರ ಕ್ಕೆಂದೆಪಿಎ ಫ್ ಐ ತಂಡ ರಚಿ ಸಿ ಕೊಂಡಿ ದ್ದಾರೆ. ಸೋಂಕಿ ತರಕುಟುಂಬ ಗ ಳಿಂದ ಅಥವಾ ಸ್ಥಳೀಯ ಸಂಸ್ಥೆ ಗಳು,ಪೊಲೀ ಸ ರಿಂದ ಕರೆ ಬಂದರೆ ಈ ತಂಡ ಪಿಪಿಇ ಕಿಟ್‌ಧರಿಸಿ ಶವ ಸಂಸ್ಕಾರ ನೆರೆ ವೇ ರಿ ಸಿ ಕೊ ಡು ತ್ತಿ ದ್ದಾರೆ. ಎರಡನೇ ಅಲೆಯ ವೇಳೆ ಯಲ್ಲೂ ತಮ್ಮ ಸೇವೆ ಮುಂದು ವರಿಸಿ ದ್ದಾರೆ.
ಕೋವಿಡ್‌ ಸೋಂಕಿ ನಿಂದ ಮೃತ ಪಟ್ಟವರ ಜಾತಿ, ಧರ್ಮ ತಮಗೆ ಲೆಕ್ಕ ಕ್ಕಿಲ್ಲ ಎನ್ನುವುದೇ ಪಿಎ ಫ್ಐಕಾರ್ಯ ಕ ರ್ತ ರಾದ ಹಿಮಾ ಯುನ್‌ ಷರೀಪ್‌, ಮಹಬೂಬ್‌ ಪಾಷ, ಸೈಯದ್‌ ಮತೀನ್‌ ನಂಬಿಕೆಯಾಗಿದೆ.

ರೋಟರಿ ಸಿಲ್ಕ್ಸಿಟಿ ಸಂಸ್ಥೆ: ಜಿಲ್ಲಾ ಕೇಂದ್ರ ರಾಮ ನ ಗ ರದಲ್ಲಿ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ಕೋವಿಡ್‌ ಕರ್ಫ್ಯೂ ವೇಳೆಅಗ ತ್ಯ ವಿ ರು ವ ವ ರಿಗೆ ಆಹಾರ ಪೊಟ್ಟ ಣ ಗ ಳನ್ನು ನೀಡಲುಮುಂದಾ ಗಿ ದ್ದಾರೆ. ಇತ್ತೀ ಚೆ ಗಷ್ಟೆ ರಾಮ ನ ಗರ ನಗ ರ ಸ ಭೆಯಪೌರ ಕಾರ್ಮಿ ಕ ರಿಗೆ 20 ಸಾವಿರ ರೂ. ಮೌಲ್ಯದ ಮಾಸ್ಕ್,ಸ್ಯಾನಿ ಟೈ ಸರ್‌ ಮುಂತಾದ ಸುರಕ್ಷತಾ ಪರಿ ಕ ರ ಗ ಳನ್ನು ವಿತ ರಿಸಿ ದ್ದರು.
ಇದೀಗ ಕರ್ಫ್ಯೂ ವೇಳೆ ಯಲ್ಲಿ ದಿನಗೂಲಿ ಕುಟುಂಬ, ಬಡ ವರು ಮುಂತಾದ ಕುಟುಂಬಗ ಳಿಗೆಆಹಾರ ವಿತರಣೆಯನ್ನು ಆರಂಭಿಸಿದ್ದಾರೆ.ವೈಯಕ್ತಿಕವಾಗಿ ಹಲವಾರು ವ್ಯಕ್ತಿಗಳು, ಖಾಸಗಿಸಂಘ-ಸಂಸ್ಥೆ ಗಳು ತಮ್ಮ ಸಾಮ ರ್ಥ್ಯಕ್ಕೆ ತಕ್ಕಂತೆ ನೆರ ವಿನಹಸ್ತ ಚಾಚುತ್ತಿದ್ದಾರೆ. ಇವ ರೆ ಲ್ಲರ ಸೇವೆಗೆ ಜಿಲ್ಲೆಯನಾಗ ರೀ ಕರು ಕೃತ ಜ್ಞತೆ ಅರ್ಪಿಸಿದ್ದಾರೆ.

Advertisement

ಬಿ.ವಿ. ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next