Advertisement

ಹುಲುಗಪ್ಪನ ಮಾನವೀಯ ಕಾರ್ಯಕ್ಕೆ ಸಲಾಂ

11:43 AM Jun 19, 2021 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳನ್ನು ಮುಟ್ಟೋಕೆ ಹಿಂಜರಿಯುತ್ತಿರುವ ಸಂಕಷ್ಟದ ಸಮಯದಲ್ಲಿ ಇಲ್ಲೊಬ್ಬ ಹುಲುಗಪ್ಪ ಎಂಬ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟ ನೂರಾರು ಶವಗಳನ್ನು ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುವುದರ ಜತೆಗೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಮಹಾಮಾರಿ ಕೋವಿಡ್‌ ಸೋಂಕು ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೋವಿಡ್‌ಸೋಂಕು ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಕುಟುಂಬದ ಮುಖ್ಯಸ್ಥರನ್ನು ಬಲಿ ಪಡೆದು ಮಕ್ಕಳನ್ನು, ಅವಲಂಬಿತರನ್ನು ಬೀದಿಪಾಲು ಮಾಡಿರುವ ಕೋವಿಡ್‌ ಸೋಂಕು ಜನಸಾಮಾನ್ಯರಲ್ಲಿ ಆತಂಕ, ಭಯವನ್ನು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿರುವ ಬಹುತೇಕ ಶವಗಳನ್ನು ಕುಟುಂಬಸ್ಥರು ಪಡೆದು ಅಂತ್ಯಸಂಸ್ಕಾರ ಮಾಡದೆ ಬಿಟ್ಟುಹೋಗಿರುವ ಹಾಗೂ ಅಂತ್ಯ ಸಂಸ್ಕಾರ ಮಾಡಲು ಮುಂದೆ ಬಂದ ಸಂಘ ಸಂಸ್ಥೆಗಳಿಗೆ ನೀಡಿರುವ ಹಲವಾರು ಉದಾಹರಣೆಗಳಿವೆ. ಅಂತಹದ್ದರಲ್ಲಿ ಕೋವಿಡ್‌ ಸೋಂಕಿನ ಯಾವುದೇ ಭಯ, ಆತಂಕ ಪಡದ ಹುಲುಗಪ್ಪ ಸುಮಾರು 440 ಕೋವಿಡ್‌ ಶವಗಳನ್ನು ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಗರದ ರೂಪನಗುಡಿ ರಸ್ತೆಯಲ್ಲಿ ಆರ್ಯವೈಶ್ಯ ಅಸೋಸಿಯೇಷನ್‌ನವರು ನಿರ್ಮಿಸಿರುವಹರಿಶ್ಚಂದ್ರ ಘಾಟ್‌ನಲ್ಲಿ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿರುವ ಹುಲುಗಪ್ಪನವರು, ಶವಗಳನ್ನು ಸಹ ಸಂಸ್ಕಾರ ಮಾಡುತ್ತಿದ್ದಾರೆ. ಶವಗಳನ್ನು ಹೊತ್ತೂಯ್ಯುವ ವಾಹನದ ಚಾಲಕನಾಗಿಯೂ ಕಾರ್ಯನಿರ್ವಹಿಸುವ ಇವರು, ಈವರೆಗೆ ಸರಿ ಸುಮಾರು ಒಂದು ಸಾವಿರ ಶವಗಳನ್ನು ಸಂಸ್ಕಾರ ಮಾಡಿದ್ದು, ಈ ಪೈಕಿ ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಲ್ಲಿ (ಕಳೆದ 2020 ಜುಲೆ„ 31 ರಿಂದ 2020 ಇಲ್ಲಿವರೆಗೆ) 440 ಕೋವಿಡ್‌ ಶವಗಳನ್ನು ಸಂಸ್ಕಾರ ಮಾಡಿದ್ದಾರೆ.

ಅನಾಥ ಶವಗಳ ಸಂಸ್ಕಾರ: ಕೋವಿಡ್‌ ಸೋಂಕಿನಿಂದ ಮೃತಪಟ್ಟ ಶವವನ್ನು ಸಂಬಂಧಿ ಕರು ಸೇರಿ ಯಾರೂ ಮುಟ್ಟುವುದಿಲ್ಲ. ಕೇವಲ ದೂರದಿಂದಲೇ ನೋಡಿ ಹಿಂದೆ ಸರಿಯುತ್ತಾರೆ. ಕೆಲವೊಮ್ಮೆ ಶವ ಸಂಸ್ಕಾರ ಮಾಡಲು ಶವ ಹಿಂದೆಯೂ ಯಾರೂ ಬರಲ್ಲ. ಇಂಥ ಸಂದರ್ಭದಲ್ಲಿ ಸಂಬಂಧಿಕರು ಬರುವಿಕೆಯನ್ನು ನೋಡದೆ ಹುಲುಗಪ್ಪ ಅವರೇ ಶವವನ್ನು ಎತ್ತಿಕೊಂಡು ವಾಹನದೊಳಕ್ಕೆ ಹಾಕಿಕೊಂಡು ಶವ ಸಂಸ್ಕಾರ ಮಾಡಿದ್ದಾರೆ. ಮನೆಯಲ್ಲಿ ನಾಲ್ವರು ಮಕ್ಕಳು ಇದ್ದಾರೆ ಎಂಬ ಆತಂಕವೂ ಇಲ್ಲದೇ ಶವ ಸಂಸ್ಕಾರ ಮಾಡುತ್ತಿರುವ ಹುಲುಗಪ್ಪರ ನಿಸ್ವಾರ್ಥ ಸೇವೆಗೆ ಆರ್ಯವೈಶ್ಯ ಅಸೋಸಿಯೇಷನ್‌, ಮುಖಂಡರು, ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ವ್ಯಾಸಂಗ: ಶವ ಸಂಸ್ಕಾರದಲ್ಲಿ ತೊಡಗಿರುವಹುಲುಗಪ್ಪ ಓದಿದ್ದು ಕೇವಲ ಎಸ್ಸೆಸ್ಸೆಲ್ಸಿ ಮಾತ್ರ. ನಗರದ ಮುನಿಸಿಪಲ್‌ ಕಾಲೇಜಿನಲ್ಲಿ 10ನೇ ತರಗತಿ ಪೂರ್ಣಗೊಳಿಸಿರುವ ಹುಲುಗಪ್ಪ, ನಂತರ ವಿದ್ಯಾಭ್ಯಾಸ ಮುಂದುವರೆಸಲು ಆಸಕ್ತಿಯಿಲ್ಲದೇ ಅಲ್ಲಿಗೆ ಮುಗಿಸಿದ್ದಾರೆ. ನಂತರ 1992 ರಿಂದ ಟ್ಯಾಕ್ಸಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, 2004ರಲ್ಲಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಂಬ್ಯುಲೆನ್ಸ್‌ ಚಾಲಕನಾಗಿ ಸೇರಿ 2012ರ ವರೆಗೆ ಕಾರ್ಯನಿರ್ವಹಿಸಿದ್ದಾರೆ. ನಂತರ ಆರ್ಯವೈಶ್ಯ ಅಸೋಸಿಯೇಷನ್‌ನ ಹರಿಶ್ಚಂದ್ರ ಘಾಟ್‌ ಗೆ ಸೇರಿದ ಇವರು, ಅಂದಿನಿಂದ ಶವಗಳನ್ನು ಸಾಗಿಸುವ ವಾಹನ ಚಾಲಕರಾಗಿ, ಘಾಟ್‌ ನಿರ್ವಹಿಸುವ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಲೇ ಶವ ಸಂಸ್ಕಾರ ಮಾಡುವಂತಹ ಪುಣ್ಯದ ಕೆಲಸಗಳನ್ನು ಸಹ ಮಾಡುತ್ತಾ ಬಂದಿದ್ದಾರೆ.

Advertisement

 

ಸಿಗದ ಬಾಡಿಗೆ ಮನೆ :

ಆರ್ಯವೈಶ್ಯ ಹರಿಶ್ಚಂದ್ರ ಘಾಟ್‌ನಲ್ಲಿ ನಿತ್ಯ ಶವಸಂಸ್ಕಾರಗಳನ್ನು ಮಾಡುವ ಹುಲುಗಪ್ಪಗೆ ಮೂವರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾರೆ. ಆದರೂ, ಕೋವಿಡ್‌ ಸೇರಿ ಶವಗಳನ್ನು ಸಂಸ್ಕಾರ ಮಾಡುತ್ತಾನೆ ಎಂದು ಇವರಿಗೆ ಬಾಡಿಗೆಮನೆ ನೀಡಲು ನಿರಾಕರಿಸಿದ್ದಾರೆ. ಮೊದಲುಇದ್ದ ಮನೆಯಿಂದಲೇ ಹೊರ ಹಾಕಿದ್ದ ಹುಲುಗಪ್ಪರಿಗೆ ಬೇರೆ ಕಡೆ ಬಾಡಿಗೆ ಕೇಳಲುಹೋದಾಗ ನಾನು ಮಾಡುವ ವೃತ್ತಿಯನ್ನುಕೇಳುತ್ತಿದ್ದಂತೆ ಮಾಲೀಕರು ಮನೆ ಬಾಡಿಗೆ ನೀಡದೆ ನಿರಾಕರಿಸುತ್ತಿದ್ದರು. ಸಮಾಜ ಎಂದರೆ,ಒಳ್ಳೆಯವರು, ಕೆಟ್ಟವರು ಇಬ್ಬರೂ ಇರುತ್ತಾರೆ. ಅದರಲ್ಲೂ ಒಬ್ಬರು ಮುಂದೆ ಬಂದು ನನಗೆ ಮನೆಬಾಡಿಗೆ ನೀಡಲು ಮುಂದೆ ಬಂದಿದ್ದಾರೆ ಎಂದು ಹುಲುಗಪ್ಪ ತನ್ನ ಅಳಲು ತೋಡಿಕೊಂಡಿದ್ದಾರೆ. ಹೀಗೆ ಶವಗಳನ್ನು ಸಂಸ್ಕಾರ ಮಾಡುತ್ತಿರುವ ಹುಲುಗಪ್ಪನನ್ನು ಫ್ರಂಟ್‌ಲೆçನ್‌ ವಾರಿಯರನ್ನಾಗಿ ಗುರುತಿಸುವುದು ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next