Advertisement
ಪೈವಳಿಕೆ ಬಳಿಯ ಆಝಾದ್ ನಗರದಲ್ಲಿ ನಡೆದ ಓಣಂ ಆಚರಣೆ ಮತ್ತು ನೂತನವಾಗಿ ಇ.ಕೆ. ನಾಯನಾರ್ ಸ್ಮಾರಕ ವಾಚನಾಲಯ ಮತ್ತು ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿ ಮನಸ್ಸು ಮನಸ್ಸುಗಳನ್ನು ಬೆಸೆಯುವ ಯತ್ನಗಳಾಗಬೇಕು. ವಿಶಾಲ ಮನೋಭಾವಗಳನ್ನು ಬೆಳೆಸುವ ಓದುವ ಹವ್ಯಾಸ ವ್ಯಾಪಕ ಸಂಬಂಧಗಳನ್ನು ಗ್ರಹಿಸಲು, ಸಾಮಾಜಿಕ ಸ್ಥಿತಿಗಳೊಡನೆ ಹೆಜ್ಜೆಹಾಕಲು ನೆರವಾಗುತ್ತದೆ ಎಂದರು. ಮೌಡ್ಯ, ಪಿಡುಗುಗಳಿಂದ ಹೊರಬಂದು ಆಧುನಿಕ ಪ್ರಪಂಚದೊಡನೆ ವ್ಯವಹರಿಸು ವಲ್ಲಿ ಯುವ ಜನಾಂಗವನ್ನು ರೂಪಿಸು ವಲ್ಲಿ ಉತ್ತಮ ಮಾಧ್ಯಮವಾಗಿ ಪುಸ್ತಕ ಪ್ರಪಂಚ ಬೆಸೆಯುತ್ತದೆ ಎಂದರು.
ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಪ್ರಸಾಧನ ಕಲಾವಿದ ದೇವಕಾನ ಕೃಷ್ಣ ಭಟ್‌ಮತ್ತು ನಿವೃತ್ತ ಶಿಕ್ಷಣಾಧಿಕಾರಿ ಇಬ್ರಾಹಿಂ ಎನ್. ಅವರನ್ನು ಗೌರವಿಸಲಾಯಿತು. ಅಂಬುಜಾಕ್ಷನ್ ವಿಶೇಷ ಉಪನ್ಯಾಸ ನೀಡಿದರು. ಸ್ವಾಗತ ಸಮಿತಿ ಉಪಾಧ್ಯಕ್ಷ ಶ್ಯಾಮ್ ಭಟ್ ಮಾಸ್ತರ್ ಸ್ವಾಗತಿಸಿದರು, ಸಂಚಾಲಕ ಬಾಲಕೃಷ್ಣ ಅಂಬಿಕಾನ ವಂದಿಸಿದರು. ಬಳಿಕ ಓಣಂ ಔತಣ ಕೂಟ ನಡೆಯಿತು.