Advertisement

ಮಾನವೀಯ ಗುಣ ಬೆಳೆಸುವ ಶಿಕ್ಷಣ ಅಗತ್ಯ: ಬೈಕಾಡಿ 

12:58 PM Nov 17, 2017 | Team Udayavani |

ಕೊಡಿಯಾಲ್‌ಬೈಲ್‌: ಮಕ್ಕಳಿಗೆ ಪುಸ್ತಕ ಜ್ಞಾನದ ಜತೆಗೆ ಒಳ್ಳೆಯ ಸಂಸ್ಕಾರ-ಸಂಸ್ಕೃತಿ ಆಧಾರಿತ ಜೀವನ ಶಿಕ್ಷಣ ದೊರಕಬೇಕು ಎಂದು ಹಾಸನದ ಚನ್ನರಾಯಪಟ್ಟಣದ ಮಲಾ°ಡ್‌ ಅಕಾಡೆಮಿ ಪಿ.ಯು. ಕಾಲೇಜಿನ ನಿವೃತ್ತ ಪ್ರಾಚಾರ್ಯ ಬೈಕಾಡಿ ಜನಾರ್ದನ ಆಚಾರ್ಯ ಹೇಳಿದರು.

Advertisement

ಶಾರದಾ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಜರಗಿದ ಹಬ್ಬಗಳ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಮಾತಿನಂತೆ ನಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಪ್ರಕಾಶಕ್ಕೆ ತರುವ, ಗುಣ, ನಡತೆಗಳ ವಿಕಾಸಕ್ಕೆ ನೆರವಾಗುವ ಶಿಕ್ಷಣವೇ ನಿಜವಾದ ಶಿಕ್ಷಣ. ಇಂದಿನ ಮಕ್ಕಳಿಗೆ ಕಲೆ, ಕ್ರೀಡೆ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು, ಸಮಾಜ ಸೇವೆ ಸೇರಿದಂತೆ ನಾನಾ ರಂಗಗಳಲ್ಲಿ ವಿಪುಲವಾದ ಅವಕಾಶಗಳಿದ್ದರೂ ಅದನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದರು.

ಶಾರದಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್‌ ಮಾತನಾಡಿ, ಹಬ್ಬಗಳ ಸಂಗಮ ಎಂಬ ವೈವಿಧ್ಯಪೂರ್ಣ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ, ಗೋಪೂಜೆ, ದೀಪಾವಳಿ, ಭಾರತಮಾತಾ ಪೂಜನ ಕಾರ್ಯಕ್ರಮಗಳ ಹಿನ್ನೆಲೆ, ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎಸ್‌.ಕಲ್ಲೂರಾಯ, ವಿಶ್ವಸ್ತರಾದ ಪ್ರದೀಪ ಕುಮಾರ ಕಲ್ಕೂರ, ಎಚ್‌. ಸೀತಾರಾಮ್‌ ಆಚಾರ್ಯ, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಸುನೀತಾ ವಿ. ಮಡಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಬಲೇಶ್ವರ ಭಟ್‌, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಬಾಲಕೃಷ್ಣ ಭಾರದ್ವಾಜ್‌ ವೇದಿಕೆಯಲ್ಲಿದ್ದರು.

Advertisement

ಪ್ರದೀಪ ಕುಮಾರ ಕಲ್ಕೂರರು ಸ್ವಾಗತಿಸಿ, ಶಿಕ್ಷಕಿ ಮಂಗಳಾ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಶೆಟ್ಟಿ ಹಾಗೂ ಶಿಕ್ಷಕಿಯರಾದ ನಂದಿತಾರಾಣಿ, ರಮ್ಯಾ ರೈ, ಶ್ರುತಿ ನಿರೂಪಿಸಿದರು. ಶಾರದಾ ವಿದ್ಯಾಲಯ ಮತ್ತು ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ, ದೇಶಭಕ್ತಿಗೀತೆ, ಪರಿಸರಗೀತೆ, ದೀಪಾವಳಿ, ಮಕ್ಕಳಹಬ್ಬಕ್ಕೆ ಸಂಬಂಧಪಟ್ಟ ಗೀತೆಗಳ ಜತೆಗೆ ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡಿದರು.

ವೇದಿಕೆಯ ಬಲಭಾಗದಲ್ಲಿ ನಿರ್ಮಿಸಿದ ಗೋಶಾಲೆಯಲ್ಲಿ ಗೋವುಗಳಿಗೆ ತಿಲಕವಿಟ್ಟು ಗೋಗ್ರಾಸ ನೀಡಿ, ಆರತಿ ಬೆಳಗಿ, ಅತಿಥಿಗಳು ಹಾಗೂ ಗಣ್ಯರು ಗೋಪೂಜೆ ನೆರವೇರಿಸಿದರು. ಶಿಕ್ಷಕರಾದ ಶ್ರೀಪತಿ ಭಟ್‌ ಮತ್ತು ನಾಗರಾಜ್‌ ಪೂಜೆಯ ನೇತೃತ್ವ ವಹಿಸಿದರು. ವಿದ್ಯಾಸಂಸ್ಥೆಯ ಕಟ್ಟಡಗಳು, ಆಕರ್ಷಕ ವಿನ್ಯಾಸದ ಬಣ್ಣದ ಗೂಡುದೀಪ ಮತ್ತು ಹಣತೆ ದೀಪಗಳಿಂದ ಭವ್ಯವಾಗಿ ಕಂಗೊಳಿಸಿತು. ಮೈದಾನದಲ್ಲಿ ಕಮಲಕೊಳ ಮತ್ತು ಎತ್ತರದಿಂದ ಜಿಗಿಯುವ ಜಲಪಾತ ಎಲ್ಲರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next