Advertisement

ಹೂವು ಅರಳಿದರೂ ರೈತನ ಮೊಗ ಬಾಡಿತು!

03:34 PM Sep 29, 2019 | Naveen |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಮಳೆ ಅಭಾವದ ಮಧ್ಯದಲ್ಲೂ ಚಂಡು ಹೂವಿನ ಫಸಲು ಉತ್ತಮವಾಗಿಯೇ ಬಂದಿದೆ. ದಸರಾ ಹಬ್ಬದಲ್ಲಿ ಬಂಪರ್‌ ದರ ಸಿಗುತ್ತಿದ್ದ ರೈತರಿಗೆ ಈ ಬಾರಿ ದರ ಕುಸಿತದ ಹೊಡೆತ ಬಿದ್ದಿದೆ. ಇದು ರೈತರಿಗೆ ಕಹಿ ತಂದರೆ ಗ್ರಾಹಕರು ಮಾತ್ರ ಖುಷಿಯಲ್ಲಿದ್ದಾರೆ.

Advertisement

ದಸರಾ ಬಂತು ಎಂದರೆ ರೈತರಿಗೆ ಕೈ ತುಂಬಾ ಕಾಸು ಎಂಬ ಮಾತು ಈ ಬಾರಿ ಸುಳ್ಳಾಗಿದೆ. ನವರಾತ್ರಿ ಹಬ್ಬದ ದಿನಗಳಲ್ಲಿ ಹೂವು ಮಾರಾಟ ಜೋರಾಗಿಯೇ ನಡೆದು ರೈತನ ಜೀವನಕ್ಕೆ ಆಸರೆ ಆಗುತ್ತಿತ್ತು. ಚಂಡು ಹೂವು ಬೆಳೆ ಉತ್ತಮವಾಗಿ ಬಂದಿದ್ದರೂ ರೈತರಿಗೆ ಮಾತ್ರ ಅದರ ಲಾಭ ಮಾತ್ರ ಸಿಗದಂತಾಗಿದೆ. ಪ್ರತಿ ವರ್ಷ ಚಂಡು ಹೂವಿಗೆ 60-80 ರೂ. ಸಿಗುತ್ತಿದ್ದ ದರ ಈ ಬಾರಿ ಅರ್ಧದಷ್ಟು ಕಡಿಮೆ ಆಗಿದೆ. ಇದರಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

‘ಒಂದು ಎಕರೆ ಪ್ರದೇಶದಲ್ಲಿ ಚಂಡು ಹೂ ಬೇಸಾಯ ಮಾಡಲು ಕನಿಷ್ಠ 45-50 ಸಾವಿರ ರೂ. ಖರ್ಚಾಗುತ್ತದೆ. ಹೂವು ಕಟಾವಿಗಾಗಿ ದಿನ ಒಂದಕ್ಕೆ 2 ಕ್ವಿಂಟಲ್‌ ಹೂವು ಕೀಳಲು ಕಾರ್ಮಿಕರು 200 ರೂ. ನೀಡಬೇಕು. ಈ ಬೇಸಾಯ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಇರುತ್ತದೆ. ಒಂದುವರೆ ತಿಂಗಳು ಬೆಳೆಯಲು ಹಾಗೂ ಒಂದುವರೆ ತಿಂಗಳಲ್ಲಿ ಕಾಟಾವು ಹಾಗೂ ಮಾರಾಟ ನಡೆಯುತ್ತದೆ. ಈ ಅವಧಿಯಲ್ಲಿ 4-5 ಬಾರಿ ಕೀಳಬಹುದಾದ ಹೂ ಇದಾಗಿದೆ. ಎಕರೆ ಪ್ರದೇಶದಲ್ಲಿ ಮಾಡುವ ಈ ಬೇಸಾಯದಿಂದ ಕನಿಷ್ಠ 1ಲಕ್ಷ, ಗರಿಷ್ಠ 1.5ಲಕ್ಷ ರೂ. ಆದಾಯ ಬರುತ್ತದೆ. ಆದರೆ ಅದರ ನಿರ್ವಹಣೆ ಸಹ
ಅತ್ಯಂತ ಸೂಕ್ಷ್ಮ ಎನ್ನುತ್ತಾರೆ ತಾಲೂಕಿನ ಕನಕಟ್ಟಾ ಗ್ರಾಮದ ಪ್ರಗತಿಪರ ರೈತ ಅಮರಕುಮಾರ ಹಂದ್ರಾಳೆ. “ಕಳೆದ ಬಾರಿ ಪ್ರತಿ ಕೆಜಿ ಚಂಡು ಹೂವಿಗೆ 60-80 ರೂ. ದರವಿದ್ದ ಕಾರಣ ಲಾಭ ಸಿಗುತ್ತಿತ್ತು.
ಆದರೆ ಈ ಬಾರಿ ಹೂವಿನ ಬೆಲೆ ಸಂಪೂರ್ಣ ಕುಸಿತ ಕಂಡಿದೆ. ಕೆ.ಜಿ ಹೂವಿಗೆ ಅನ್ಯ ವ್ಯಾಪಾರಿಗಳ ಜೊತೆಗೆ 30-40ರೂ. ಹೇಳಿದರೂ ಗ್ರಾಹಕರು ಚೌಕಾಸಿ ಮಾಡಿ ರೂ.25-30ರೂ.ಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಹೂವು ಕೀಳದೆ ಹಾಗೆ ಬಿಟ್ಟರೆ ಹಾಳಾಗುತ್ತವೆ ಎಂಬ ಕಾರಣ ಅನಿವಾರ್ಯವಾಗಿ ಬಂದಷ್ಟು ದರಕ್ಕೆ ಮಾರಾಟ ಮಾಡುತ್ತಿದ್ದು, ಹೊಲಕ್ಕೆ ಹಾಕಿದ ಹಣವೂ ಕೈಗೆ ಬರುತ್ತಿಲ್ಲ. ಇದರಿಂದಾಗಿ ಸಹಜವಾಗಿಯೇ ನಷ್ಟ ಅನುಭವಿಸುತ್ತಿದ್ದೇವೆ’ ಎನ್ನುತ್ತಾರೆ ಪ್ರಕಾಶ ಮಣಗಿರೆ, ಮಹಾದೇವರೆಡ್ಡಿ, ಶಿವಕುಮಾರ, ಮಹೇಶ ಸೇಡೋಳ ಇತರರು.

ಗ್ರಾಹಕ ಖುಶ್‌: ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೂವಿನ ದರ ಅತ್ಯಂತ ಕಡಿಮೆ ಇದೆ. ಪ್ರತಿ ವರ್ಷ ಕೇವಲ ಅರ್ಧ ಕೆ.ಜಿ ಖರೀದಿಸುವವರು ಈ ಬಾರಿ ನಾಲ್ಕೆ çದು ಕೆ.ಜಿ ಖರೀದಿಸಿದ್ದೇವೆ. ಕಡಿಮೆ ದರಕ್ಕೆ ಹೂವು ಸಿಗುತ್ತಿರುವುದು ನಮಗೆ ಸಂತಸ ತಂದಿದೆ. ಮತ್ತೂಂದೆಡೆ ಸಕಾಲಕ್ಕೆ ಸಮರ್ಪಕ ಮಳೆ ಬಾರದೆ ಬರದಿಂದ ತತ್ತರಿಸಿರುವ ರೈತರಿಗೆ ಈ ದರದಿಂದ ಅನ್ಯಾಯವಾಗುತ್ತಿದೆ ಎಂಬ ನೋವೂ ಇದೆ ಎಂದು ಶನಿವಾರ ಹೂವು ಖರೀದಿಗೆ ಬಂದ ಗ್ರಾಹಕರಾದ ಡಾ| ಚಂದ್ರಕಾಂತ ಬಿರಾದಾರ, ಕಾಳಿದಾಸರಾವ ಪೇಣೆ, ಮಡೆಪ್ಪ ಕುಬಾರ, ರಮೇಶ ನಾಯಕ್‌, ಗಣೇಶಸಿಂಗ್‌ ತಿವಾರಿ, ಸಿದ್ದುಸ್ವಾಮಿ ಚಕಪಳ್ಳಿ, ಶ್ರೀಕಾಂತ ಸೂಗಿ, ಪ್ರಭು ದಾಸಪಳ್ಳಿ ಮತ್ತು ಶಶಿಕಾಂತ ಯಲಾಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next