ನಿರ್ಮಾಣ ಕಾಮಗಾರಿಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪಾದಚಾರಿಗಳಿಗೆ ಯವುದೇ ತೊಂದರೆ ಆಗದಿರಲಿ ಎನ್ನುವ ಉದ್ದೇಶದಿಂದ ರಸ್ತೆ ಅಂತ್ಯಕ್ಕೆ ಚರಂಡಿಗಳಿಗೆ ಹೊಂದಿಕೊಂಡು ಪಾದಚಾರಿ ರಸ್ತೆ ನಿರ್ಮಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ರಾಜ್ಯದ ಬೇರೆಲ್ಲೂ ಈವರೆಗೆ ಕೈಗೊಳ್ಳದ ರೀತಿ, ನೋಡಿರದ ರೀತಿ, ಅತ್ತ ಸಂಪೂರ್ಣ ರಸ್ತೆ
ಅಂತ್ಯದ ಚರಂಡಿಗೂ ಹೊಂದಿಕೊಂಡಿರದೇ ಇತ್ತ ಸಂಪೂರ್ಣ ರಸ್ತೆ ವಿಭಜಕಕ್ಕೂ ಹೊಂದಿಕೊಳ್ಳದೇ ಚರಂಡಿಯಿಂದ 15ಅಡಿ ಅಂತರದಲ್ಲಿ
ನಿರ್ಮಿಸುತ್ತಿರುವ ಯಾವುದೇ ಪ್ರಯೋಜನಕ್ಕೆ ಬಾರದೇ ಇರುವ ಈ ಫುಟ್‌ಪಾತ್ ನಿರ್ಮಾಣದಿಂದ ಸರ್ಕಾರದ ಲಕ್ಷಾಂತರ ಹಣ ಅನಗತ್ಯವಾಗಿ ವ್ಯಯಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಾಪಾರಿಗಳು ಸಾರ್ವಜನಿಕರು ಗಂಭೀರ ಚರ್ಚೆ ನಡೆಸುತ್ತಿದ್ದಾರೆ.
Advertisement
ಎಚ್‌ಕೆಆಡಿಬಿ ಯೋಜನೆ ಅಡಿ 10 ಲಕ್ಷ ರೂ. ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಫುಟ್‌ಪಾತ್‌ಗೆ ಬಳಸುವ ಸಿಮೆಂಟ್ ಕಲ್ಲು ಬಳಸಿಕಾಮಗಾರಿ ಕೈಗೊಳ್ಳುತ್ತಿದೆ. ಈ ಫುಟ್‌ಪಾತ್ ಅತ್ತ ಸಂಪೂರ್ಣ ರಸ್ತೆ ವಿಭಜಕಕ್ಕೂ ಇತ್ತಕಡೆ ಚರಂಡಿಗೂ ಹೊಂದಿಕೊಳ್ಳದೇ ಇರುವಂತಹ ಸಾರ್ವಜನಿಕರಿಗೆ
ಉಪಯೋಗವಿಲ್ಲದ ಕಾಮಗಾರಿ ಕೈಗೊಳ್ಳುವ ಬದಲು ಡಾಂಬರೀಕರಣ ಮಾಡಬಹುದಾಗಿತ್ತಲ್ಲ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
Related Articles
ಅವೈಜ್ಞಾನಿಕವಾದ ಈ ರಸ್ತೆ ನಿರ್ಮಾಣ ಮಾಡುವುದರಿಂದ ಪಾದಚಾರಿಗಳಿಗೂ, ವಾಹನ ಸವಾರರೂ ಸೇರಿದಂತೆ ಯಾರಿಗೂ
ಪ್ರಯೋಜನವಿಲ್ಲ. ಈ ಕಾಮಗಾರಿ ಕುರಿತು ಜಿಲ್ಲಾ ಧಿಕಾರಿ ಖುದ್ದು ಸ್ಥಳಕ್ಕೆ ಭೇಟಿನೀಡಿ, ಪರಿಶೀಲಿಸಬೇಕು.
. ಮಹೇಶ ಅಗಡಿ, ಪುರಸಭೆ ಹಿರಿಯ ಸದಸ್ಯ
Advertisement
ಎಚ್‌ಕೆಆರ್‌ಡಿಬಿಯ 10ಲಕ್ಷ ರೂ. ಅನುದಾನದಲ್ಲಿ ಈ ಕಾಮಗಾರಿಕೈಗೊಳ್ಳಲಾಗುತ್ತಿದೆ. ಡಾಂಬರೀಕರಣ ರಸ್ತೆ ಕೈಗೊಂಡರೇ ಭವಿಷ್ಯದಲ್ಲಿ ಅಗೆಯುವ ಸಂದರ್ಭ ಬಂದರೇ ಹಣ ವ್ಯರ್ಥ ಪೋಲಾಗುತ್ತದೆ. ಸರ್ಕಾರದ ಅನುದಾನ ವ್ಯರ್ಥ ಪೋಲಾಗಿಸುವುದನ್ನು ತಪ್ಪಿಸಲು ಸಿಮೆಂಟ್ ಕಲ್ಲು ಬಳಸಲಾಗಿದೆ. ಒಂದು ರೀತಿ ಫುಟ್‌ಪಾತೂ ಹೌದು, ರಸ್ತೆಯೂ ಹೌದು.
. ರಾಜಕುಮಾರ ಕಲಬುರ್ಗಿ, (ಪಿಡಬ್ಲ್ಯೂಡಿ)
ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಶಶಿಕಾಂತ ಕೆ.ಭಗೋಜಿ