Advertisement

ಸಿಎಂ ಇಬ್ರಾಹಿಂ ಅವರ ಮಗ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ?

11:18 AM Sep 26, 2022 | Team Udayavani |

ಹುಮನಾಬಾದ್: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಮಗ ಸಿಎಂ ಫೈಜ್ ಮೊಹಮ್ಮದ್ ಇಂದು ಸೋಮವಾರ, ಮಂಗಳವಾರ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ವಿವಿಧಡೆ ಸಂಚಾರ ನಡೆಸಲ್ಲಿದ್ದು, ರಾಜಕೀಯವಾಗಿ ವಿವಿಧ ಚರ್ಚೆಗೆ ಗ್ರಾಸವಾಗಿದೆ.

Advertisement

ಬೆಂಗಳೂರಿನಿಂದ ರಸ್ತೆ ಮೂಲಕ ನೇರವಾಗಿ ಸೋಮವಾರ ಬೆಳಿಗ್ಗೆ 11:30ಕ್ಕೆ ಹುಮನಾಬಾದ ಪಟ್ಟಣಕ್ಕೆ ಆಗಮಿಸುತ್ತಿದ್ದು, ಮೊದಲಿಗೆ ಹೊಚ್ಚಕನಳ್ಳಿ ಗ್ರಾಮದಲ್ಲಿನ ದಿವಂಗತ ಮಾಜಿ ಸಚಿವ ಮೆರಾಜೊದ್ದೀನ್ ಪಟೇಲ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ಹುಡಗಿ ಗ್ರಾಮದ ವಿರಕ್ತಮಠದ ಚನ್ನಮಲ್ಲ ಸ್ವಾಮಿಜಿ ಭೇಟಿ, ಪಟ್ಟಣದ ಕುಲ ದೇವ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ, ಮಾಣಿಕನಗರದ ಮಾಣಿಕ ಪ್ರಭುಗಳ ದರ್ಶನ, ಮಧ್ಯಾಹ್ನ ಜೆಡಿಎಸ್ ಪಕ್ಷದ ಮುಖಂಡ ಶೌಕತ್ ಅವರ ಮನೆಯಲ್ಲಿ ಊಟ ಮಾಡಿ ನಂತರಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಲ್ಲಿದ್ದಾರೆ.

ನಂತರ ಪಕ್ಷದ ಕಚೇರಿಗೆ ತೆರಳಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲ್ಲಿದ್ದಾರೆ. ಸಂಜೆ 5:15ಕ್ಕೆ ರಾಜೇಶ್ವರದ ರುದ್ರಮುನಿ ಶಿವಾಚಾರ್ಯರ ಭೇಟಿ, ಹಿರೇನಾಗಂವ ಶಾಂತಲಿಗ ಸ್ವಾಮಿಗಳ ಭೇಟಿ ಮಾಡಲಿದ್ದಾರೆ. ಮಂಗಳವಾರ ಸೆ. 27ರಂದು ಬೆಳಿಗ್ಗೆ ಜೆಡಿಎಸ್ ಮುಖಂಡ ಸುರೇಶ ಸೀಗಿ ಅವರ ಮನೆಯಲ್ಲಿ ಉಪಹಾರ, ಬ್ಯಾಂಕ್ ರೆಡ್ಡಿ ಅವರ ಮನೆಗೆ ಭೇಟಿ, ಹಳ್ಳಿಖೇಡ (ಬಿ) ಚಿಕ್ಕಮಠಕ್ಕೆ ಭೇಟಿ, ಚಿಟಗುಪ್ಪದ ಬುಖಾರಿ ಸಾಹೇಬ್ ಅವರ ಮನೆಗೆ ಬೇಟಿ, ನಾನಾ ಹಜರತ್ ದರ್ಗಾಕ್ಕೆ ಭೇಟಿ ನೀಡಿ ರಾತ್ರೆ ಮರಳಿ ಬೆಂಗಳೂರು ಪ್ರಯಾಣ ನಡೆಸಲ್ಲಿದ್ದಾರೆ.

ಚುನಾವಣೆ ಸ್ಪರ್ಧೆಗೆ ಸಜ್ಜು:

ಸಿಎಂ  ಇಬ್ರಾಹಿಂ ಅವರು ಈ ಹಿಂದೆ ಹುಮನಾಬಾದ ಪಟ್ಟಣಕ್ಕೆ ಬೇಟಿನೀಡಿದ ಸಂದರ್ಭದಲ್ಲಿ ಅನೇಕರು ಅವರನ್ನು ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ ನಡೆಸುವಂತೆ ಒತ್ತಾಯಿಸಿದರು.  ಕೆಲ ಮುಖಂಡರು ಬೆಂಗಳೂರಿಗೆ ತೆರಳಿ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ಕುರಿತು ವಿವರಣೆ ನೀಡಿದ್ದಾರೆ. ವಿವಿಧ ಚುನಾವಣೆಗಳ ಲೆಕ್ಕಾಚಾರಗಳು ವಿವರಿಸಿದ್ದಾರೆ. ಕಾರಣ ಸಿಎಂ ಇಬ್ರಾಹಿಂ ಅವರು ತಮ್ಮ ಮಗನಿಗೆ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸುವುದಾಗಿ ತಿಳಿಸಿದ್ದಾರೆ. ಕಾರಣ ಮತ ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಎರಡು ದಿನಗಳಕಾಲ ಸಂಚಾರ ನಡೆಸಲ್ಲಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.

Advertisement

 

– ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next