Advertisement

Space; ಬಾಹ್ಯಾಕಾಶದಲ್ಲಿ ಮಾನವ ಉಪಸ್ಥಿತಿ ಪ್ರಧಾನಿ ನೀಡಿರುವ ಗುರಿ: ಇಸ್ರೋ

01:38 AM Jan 12, 2024 | Team Udayavani |

ಹೊಸದಿಲ್ಲಿ: ಗಗನಯಾನ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿ ಸುವುದು ಮಾತ್ರ ವಲ್ಲ, ಬಾಹ್ಯಾಕಾ ಶದಲ್ಲಿ ಮಾನವನ ಉಳಿವನ್ನು ಖಾತರಿಪಡಿಸಿಕೊಳ್ಳು ವಂಥ ಗುರಿ ಯನ್ನು ಪ್ರಧಾನಿ ನರೇಂ ದ್ರ ಮೋದಿ ನಮ್ಮ ಮುಂದಿಟ್ಟಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋ ಧನ ಸಂಸ್ಥೆ (ಇಸ್ರೋ ) ಮುಖ್ಯಸ್ಥ ಎಸ್‌.ಸೋಮನಾಥ್‌ ಹೇಳಿದ್ದಾರೆ.

Advertisement

ಗುಜರಾತ್‌ನ ಗಾಂಧೀನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನದಲ್ಲಿ ಮಾತನಾಡಿದ ಸೋಮನಾಥ್‌, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಬೇಕಿರುವ ಗುರಿಗಳ ಕುರಿತಂತೆ ಭಾರತದ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. “ಇತ್ತೀಚಿಗೆನ ನಮ್ಮ ಯಶಸ್ಸು (ಚಂದ್ರಯಾನ-3, ಆದಿತ್ಯ ನೌಕೆ) ಗಳನ್ನೂ ಮೀರಿದ ಗುರಿಯನ್ನೂ ಪ್ರಧಾನಿ ನಮಗೆ ನೀಡಿದ್ದಾರೆ. 2035 ಕ್ಕೆ ದೇಸಿ ಬಾಹ್ಯಾ ಕಾಶ ನಿಲ್ದಾಣ ರಚನೆ ಖಚಿತ ವಾಗಿ ಮಾಡಲಿದ್ದೇವೆ ಎಂದು ಸೋಮ ನಾಥ್‌ ತಿಳಿಸಿದ್ದಾರೆ.

ಬೆಳಕು ಸೆರೆಹಿಡಿದ ಎಕ್ಸ್‌ಪೋ ಸ್ಯಾಟ್‌ ಪೆಲೋ ಡ್‌: ಕಪ್ಪುಕುಳಿಗಳ ಅಧ್ಯಯನಕ್ಕೆಂದು ಇಸ್ರೋ ಇತ್ತೀಚೆಗೆ ಉಡಾವಣೆ ಗೊಳಿಸಿದ್ದ ಎಕ್ಸ್‌ ಪೋ ಸ್ಯಾಟ್‌ ರಾಕೆಟ್‌ನಲ್ಲಿರುವ ಪೆಲೋಡ್‌ ಎಕ್ಸ್‌ ಸ್ಪೆಕ್ಟ್ ತನ್ನ ಕಾರ್ಯ ಆರಂಭಿಸಿದ್ದು, ಅಂತರಿಕ್ಷದ ಗುಪ್ತ ಮೂಲವೊಂದರಿಂದ ಹೊರಹೊಮ್ಮಿದೆ ಬೆಳಕನ್ನು ಸರೆ ಹಿಡಿದಿದೆ ಎಂದು ಇಸ್ರೋ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next