ಅಸ್ಸಾಂ:“ಸಾವಿರ ಕಾಲ ಬದುಕಿದರೆ ಸಾವಿರ ಚೋದ್ಯ ನೋಡಬಹುದುʼʼ ಎಂಬ ಮಾತಿದೆ. ಇದಕ್ಕೆ ಅನುಗುಣವಾದ ಘಟನೆಯೊಂದು ಆಸ್ಸಾಂನ ಚಾಹರ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ರೈತರೊಬ್ಬರ ಮನೆಯಲ್ಲಿ ಸಾಕಿದ್ದ ಕುರಿ ಮನುಷ್ಯನನ್ನು ಹೋಲುವ ಮರಿ ಹಾಕಿರುವುದು ಈ ಭಾಗದಲ್ಲಿ ತೀವ್ರ ವಿಸ್ಮಯ ಸೃಷ್ಟಿಸಿದೆ.
ದಹೋಲಿ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ವಿಚಿತ್ರ ಕುರಿಮರಿ ಜನಿಸಿದೆ. ಈ ಮರಿಯ ಕಣ್ಣು, ಮೂಗು , ಬಾಯಿ ಸೇರಿದಂತೆ ಮುಖದ ಭಾಗಕ್ಕೆ ಬಹುತೇಕ ಮನುಷ್ಯನ ಹೋಲಿಕೆ ಇದೆ. ಅದೇ ರೀತಿ ಎರಡೇ ಕಾಲುಗಳು ಇದೆ. ಜನಿಸುವಾಗಲೇ ಸತ್ತು ಹೋಗಿದ್ದರೂ ಈ ವಿಚಿತ್ರ ಕುರಿಮರಿಯನ್ನು ನೋಡುವುದಕ್ಕೆ ಜನ ಮುಗಿ ಬಿದ್ದು ಹಳ್ಳಿಗೆ ಆಗಮಿಸಿದ್ದರು.
ಪ್ರಪಂಚದಲ್ಲಿ ಆಗಾಗ ಈ ಬಗೆಯ ವಿಚಿತ್ರ ಸೃಷ್ಟಿಯ ಜನನವಾಗುತ್ತಲೇ ಇರುತ್ತದೆ. ಈ ಹಿಂದೆ ಇಂಡೋನೇಶಿಯಾದ ಮೀನುಗಾರನ್ನೊಬ್ಬ ಮಾನವ ಮುಖವನ್ನು ಹೋಲುವ ಶಾರ್ಕ್ ನ್ನು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದ.
ಇಂಡೋನೇಶ್ಯಾದ ಅಬ್ದುಲ್ ನ್ಯೂರೇನ್ ಎಂಬ ಮೀನುಗಾರನ ಬಲೆಗೆ ಗರ್ಭ ಧರಿಸಿದ ಶಾರ್ಕ್ ಬಿದ್ದಿತ್ತು. ಅದನ್ನು ಕತ್ತರಿಸಿದಾಗ ಹೊಟ್ಟೆಯಲ್ಲಿ ಮೂರು ಮರಿಗಳಿದ್ದವು. ಎರಡು ಮರಿಗಳು ಶಾರ್ಕ್ ರೀತಿಯಲ್ಲೇ ಇದ್ದರೆ, ಒಂದು ಮಾತ್ರ ಮನುಷ್ಯನ ಮುಖವನ್ನು ಹೋಲುತ್ತಿತ್ತು.
ಮನುಷ್ಯಾಕೃತಿಯನ್ನು ಹೋಲುವ ಈ ಶಾರ್ಕ್‌ನ್ನು ಖರೀದಿಸುವುದಕ್ಕೆ ಜನರು ನನ್ನ ಮನೆಗೆ ಮುಗಿ ಬಿದ್ದಿದ್ದರು. ಆದರೆ ನಾನು ಮಾರಾಟ ಮಾಡಿರಲಿಲ್ಲ. ಇದು ನನಗೆ ಒಳ್ಳೆಯ ಅದೃಷ್ಟ ತರಲಿದೆ ಎಂದು ಸುರಕ್ಷಿತವಾಗಿ ಸಲಹುದಾಗಿ ಅಬ್ದುಲ್ ಶೇರ್ ಮಾಡಿದ ಶಾರ್ಕ್ ಪೋಟೋ ಜಾಲತಾಣದಲ್ಲಿ ವೈರಲ್ ಆಗಿತ್ತು.