Advertisement

ಮಾನವ ದೋಷ: ಸಿಂಧು ಕ್ಷಮೆ ಕೇಳಿದ ಬ್ಯಾಡ್ಮಿಂಟನ್‌ ಏಷ್ಯಾ ತಾಂತ್ರಿಕ ಸಮಿತಿ

08:17 AM Jul 06, 2022 | Team Udayavani |

ಹೊಸದಿಲ್ಲಿ: ಕಳೆದ ಎಪ್ರಿಲ್‌ನಲ್ಲಿ ನಡೆದ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ ಪಂದ್ಯದ ವೇಳೆ ರೆಫರಿ ಮಾಡಿದ “ಮಾನವ ದೋಷ’ಕ್ಕಾಗಿ ಬ್ಯಾಡ್ಮಿಂಟನ್‌ ಏಷ್ಯಾ ತಾಂತ್ರಿಕ ಸಮಿತಿಯ ಚೇರ್ಮನ್‌ ಚಿಹ್‌ ಶೆನ್‌ ಚೆನ್‌ ಅವರು ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ಅವರಲ್ಲಿ ಕ್ಷಮೆಯಾಚಿಸಿದ್ದಾರೆ.

Advertisement

ಜಪಾನಿನ ಅಕಾನೆ ಯಮಗುಚಿ ಅವರ ವಿರು ದ್ಧದ ಸೆಮಿಫೈನಲ್‌ ಪಂದ್ಯದ ನಡುವೆ ಅಂಪಾ ಯರ್‌ ಸಿಂಧು ಅವರ ಹೊಡೆತವನ್ನು “ನ್ಯಾಯೋ ಚಿತವಲ್ಲದ್ದು’ ಎಂದು ಕರೆದಾಗ ಸಿಂಧು ಕಣ್ಣೀರಿ ಟ್ಟರು. ಅಂತಿಮವಾಗಿ ಸಿಂಧು ಮೂರು ಗೇಮ್‌ಗಳಲ್ಲಿ ಪಂದ್ಯ ಸೋತರಲ್ಲದೇ ಅಂತಿಮವಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

“ದುರದೃಷ್ಟವಶಾತ್‌ ಈ ಘಟನೆ ನಡೆದಿದೆ. ಆದರೆ ಈ ಸಮಯದಲ್ಲಿ ಯಾವುದೇ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇಂತಹ ಮಾನವ ತಪ್ಪು ಪುನರಾವರ್ತನೆಯಾಗದಂತೆ ನಾವು ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳಲಿದ್ದೇವೆ” ಎಂದು ತಾಂತ್ರಿಕ ಸಮಿತಿಯ ಅಧಿಕಾರಿಯೊಬ್ಬರು ಸಿಂಧು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

“ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇದು ಕ್ರೀಡೆಯ ಭಾಗವಾಗಿದೆ ಮತ್ತು ಅದನ್ನು ಸ್ವೀಕರಿಸುತ್ತೀರಿ ಎಂದು ನಾವು ನಂಬುತ್ತೇವೆ. ಮೊದಲ ಗೇಮ್‌ ಗೆದ್ದ ಅನಂತರ ಸಿಂಧು ಎರಡನೇ ಗೇಮ್‌ನಲ್ಲಿ 14-11 ರಿಂದ ಮುನ್ನಡೆಯಲ್ಲಿದ್ದಾಗ ಸಿಂಧು ಸರ್ವ್‌ ಮಾಡಲು ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕಾಗಿ ಅಂಪಾಯರ್‌ ಒಂದು ಅಂಕ ಪೆನಾಲ್ಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next