Advertisement
ಸಂಕ್ರಾಂತಿ ಹಬ್ಬವನ್ನು ಸೀಗೆಬಾಗಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವಾಗಿ ಆಚರಿಸುತ್ತಾರೆ. ಹಬ್ಬಕ್ಕೆ ಮೂರು ದಿನದ ಮೊದಲೇ ಗ್ರಾಮದ ಕೆಲವರು ಕಾಡಿಗೆ ಹೋಗಿ ಮೊಲವನ್ನು ಜೀವಂತವಾಗಿ ಹಿಡಿದು ತಂದು ಮೊಲದ ಕಿವಿವೆ ಓಲೆ ಹಾಕುತ್ತಾರೆ. ಸಂಕ್ರಾಂತಿ ಹಬ್ಬದಂದು ವಿಶೇಷವಾಗಿ ಪೂಜಿಸಿ ಜೋಪಾನವಾಗಿ ಹಿಡಿದಿಟ್ಟಿರುತ್ತಾರೆ. ಹಬ್ಬದ ನಂತರದ ದಿನಗಳಲ್ಲಿ ವರದರಾಜಸ್ವಾಮಿ ದೇಗುಲದ ಆವರಣದಿಂದ ವರದರಾಜಸ್ವಾಮಿ ಹಾಗೂ ವಿವಿಧ ದೇವರು ಗಳೊಂದಿಗೆ ಮಂಗಳವಾಧ್ಯ ಸಹಿತ ಉತ್ಸವ ಮಾಡುತ್ತಾರೆ.
ಮೊಲವನ್ನು ಪುನಃ ಕಾಡಿಗೆ ಬಿಡುತ್ತಾರೆ. ಅದು ಯಾವ ದಿಕ್ಕಿಗೆ ಓಡುತ್ತದೆಯೋ ಆ ದಿಕ್ಕಿನಲ್ಲಿ ಉತ್ತಮ ಬೆಳೆಯಾಗುತ್ತದೆ ಎಂಬ ಪ್ರತೀತಿ ಗ್ರಾಮಸ್ಥರಲ್ಲಿದೆ. ಈ ಅಪರೂಪದ ಆಚರಣೆಗೆ ಸೀಗೆಬಾಗಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು, ಶ್ರೀ ವರದರಾಜಸ್ವಾಮಿಯ
ಭಕ್ತರು ಸೇರುತ್ತಾರೆ. ಒಟ್ಟಾರೆ ಇದೊಂದು ಪುಟ್ಟ ಜಾತ್ರೆಯ ರೀತಿ ನಡೆಯುತ್ತಿದ್ದು ಅನಾದಿ ಕಾಲದಿಂದ ನಡೆಸಿಕೊಂಡು ಬರುತ್ತಿದ್ದಾರೆ.
Related Articles
Advertisement