Advertisement
ಬೆಂಗಳೂರಿನಿಂದ ಆರಂಭವಾದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಬಸವ ಕಲ್ಯಾಣದಲ್ಲಿ ಮುಕ್ತಾಯವಾಗಿದ್ದು ಸುಮಾರು 5 ಸಾವಿರಕ್ಕೂ ಹೆಚ್ಚಿನ ವಿವಿಧ ಶೀರ್ಷಿಕೆ ಗಳ ಪುಸ್ತಕಗಳ ಮಾರಾಟವಾಗಿವೆ. ಸುಮಾರು 35ಲಕ್ಷ ರೂ.ಗಳ ಖರೀದಿ ವಹಿವಾಟು ನಡೆದಿದೆ.
Related Articles
Advertisement
ರಿಯಾಯ್ತಿ ಪುಸ್ತಕ ಮಾರಾಟದಲ್ಲಿ ಸ್ನಾತಕೋತ್ತರ ಮತ್ತು ಪದವೀಧರ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಕನ್ನಡ ಪುಸ್ತಕಗಳನ್ನು ಖರೀದಿಸಿದ್ದಾರೆ. ಜತೆಗೆ ಕಾಲೇಜು ಉಪನ್ಯಾಸಕರು, ಸಾಹಿತ್ಯಆಸಕ್ತರು ಕೂಡ ಅಕಾಡೆಮಿ ಹೊರತಂದಿರುವ ವಿವಿಧ ಕೃತಿಗಳನ್ನು ಮಾರಾಟ ಕೇಂದ್ರಕ್ಕೆ ಬಂದು ಕೊಂಡುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಅಕಾಡೆಮಿ ಅಧಿಕಾರಿಗಳು ಹೇಳುತ್ತಾರೆ.
345 ಪುಸ್ತಕಗಳ ಒಳಗೊಂಡ ಸೆಟ್ಬಾಕ್ಸ್ಅಕಾಡೆಮಿ ರಿಯಾಯ್ತಿ ಪುಸ್ತಕ ಮಾರಾಟಕ್ಕಾಗಿ 15,435 ರೂ. ಮುಖ ಬೆಲೆಯ 345 ಪುಸ್ತಕಗಳ ಒಳಗೊಂಡ ಸೆಟ್ ಸಿದ್ಧಪಡಿಸಿತ್ತು. ಇದರಲ್ಲಿ ಸುಮಾರು 22 ಸೆಟ್ ಬಾಕ್ಸ್‌ಗಳು ಮಾರಾಟವಾಗಿದೆ. ಬಹುತೇಕ ಸೆಟ್ ಬಾಕ್ಸ್ ಪುಸ್ತಕಗಳನ್ನು ವಿವಿಗಳು ಮತ್ತು ಕಾಲೇಜುಗಳು ಖರೀದಿ ಮಾಡಿವೆ. ಈ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಆಯೋಜನೆಯಿಂದಾಗಿ ಅಕಾಡೆಮಿಯಲ್ಲಿ ಉತ್ತಮ ಪುಸ್ತಕಗಳು ಇವೆ ಎಂಬುವುದು ಕಾಲೇಜು ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಗಮನಕ್ಕೆ
ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅಕಾಡೆಮಿ ರಾಜ್ಯದ 75 ಸ್ಥಳಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ರಿಯಾಯ್ತಿ ದರದಲ್ಲಿ ಪುಸ್ತಕಗಳ ಮಾರಾಟವನ್ನು ಹಮ್ಮಿಕೊಂಡಿತ್ತು. 35 ಲಕ್ಷ ರೂ. ಖರೀದಿ ವಹಿವಾಟು ನಡೆದಿದ್ದು, ಇದು ಕನ್ನಡ ಪುಸ್ತಕ ಓದುಗರಿಗೆ ಬರವಿಲ್ಲ ಎಂಬುವುದನ್ನು ತೋರಿಸುತ್ತದೆ.
● ಡಾ.ಬಿ.ವಿ. ವಸಂತಕುಮಾರ್,
ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ *ದೇವೇಶ ಸೂರುಗುಪ್ಪ