Advertisement
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಸಮಾಜ ಸೇವಕ ಆರ್.ಡಿ ಪಾಟೀಲ ಏರ್ಪಡಿಸಿದ್ದ 57 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
Related Articles
Advertisement
ತಮ್ಮ ಸಹೋದರ ಆರ್.ಡಿ. ಪಾಟೀಲ ಬಡವರು ಸಾಲ ಮಾಡಿ ಮಕ್ಕಳ ಮದುವೆ ಮಾಡಿಸುತ್ತಾರೆ. ಅವರ ಆರ್ಥಿಕ ಹೊರೆ ಕಡಿಮೆ ಮಾಡಲು ಸಾಮೂಹಿಕ ವಿವಾಹ ಏರ್ಪಸುವಂತೆ ತಿಳಿಸಿದ್ದರು. ಅವರ ಕನಸಿನಂತೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಮುಖಂಡರಾದ ಶಂಕು ಮ್ಯಾಕೇರಿ, ಲಚ್ಚಪ್ಪ ಜಮಾದಾರ ಮಾತನಾಡಿ, ಕೋವಿಡ್‌ನಿಂದ ಕಂಗೆಟ್ಟಿದ್ದ ಜನರಿಗೆ ಇಂತಹ ಕಾರ್ಯಕ್ರಮಗಳು ವರದಾನವಾಗಿವೆ. ಆರ್.ಡಿ. ಪಾಟೀಲ ಕಾರ್ಯ ಶ್ಲಾಘನೀಯ ಎಂದರು.
ಮಾಶಾಳದ ಶ್ರೀ ಕೇದಾರ ಶಿವಾಚಾರ್ಯರು ಮಾತನಾಡಿ, ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡ ಆರ್.ಡಿ ಪಾಟೀಲ ಪುಣ್ಯದ ಕೆಲಸ ಮಾಡಿದ್ದಾರೆ. ಅವರಿಗೆ ಎದುರಾಗಿರುವ ಕಷ್ಟಗಳು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾದವರ ತಾಳಿಯ ಶಕ್ತಿಯಿಂದ ದೂರವಾಗಲಿದೆ ಎಂದು ಶುಭ ಹಾರೈಸಿದರು.
ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾ ಚಾರ್ಯರು ಮಾತನಾಡಿ, ಅನೇಕ ಜನ ಶ್ರೀಮಂತರಿದ್ದಾರೆ. ಆದರೆ ಇಂತಹ ಕಾರ್ಯ ಕ್ರಮ ಮಾಡಿಲ್ಲ. ನಿಜಕ್ಕೂ ರುದ್ರಗೌಡ ಪಾಟೀಲ ಕಾರ್ಯ ಶ್ಲಾಘನೀಯ ಎಂದರು.
ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಮದುವೆ ರೀತಿಯಲ್ಲೇ ರುದ್ರಗೌಡ ಪಾಟೀಲರು ಸಾಮೂಹಿಕ ವಿವಾಹ ಏರ್ಪಡಿಸಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಆದರೆ ಈಗ ಅವರ ಮೇಲೆ ಕಷ್ಟದ ದಿನಗಳು ಎದುರಾಗಿವೆ. ಶೀಘ್ರವೇ ಅವರು ಎಲ್ಲ ಆರೋಪಗಳಿಂದ ಮುಕ್ತರಾಗಿ ಬರಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಬಡದಾಳದ ಶ್ರೀ ಡಾ| ಅಭಿನವ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ, ಸಮಾಜದಿಂದ ನಾವು ಪಡೆದುಕೊಂಡಿದ್ದನ್ನು ಮರಳಿ ಸಮಾಜಕ್ಕೆ ನೀಡಬೇಕು. ಈ ಕೆಲಸವನ್ನು ಆರ್.ಡಿ ಪಾಟೀಲ ಮಾಡಿದ್ದಾರೆ ಎಂದರು.
ಆತನೂರ, ಹಿಂಚಗೇರಾ, ಚಿನ್ಮಯಗಿರಿ, ಅಳ್ಳಗಿ, ಮಲ್ಲಾಬಾದ, ಉಡಚಣ, ಚಿಂಚೋಳಿ, ಗೋಲಸಾರ ಮಠಗಳ ಶ್ರೀಗಳು, ಆರ್.ಡಿ. ಪಾಟೀಲ ತಾಯಿ ಭಾರತೀಬಾಯಿ ದೇವಿಂದ್ರಪ್ಪ ಪಾಟೀಲ, ಪತ್ನಿ ಶೋಭಾ ಪಾಟೀಲ, ಮುಖಂಡರಾದ ಚಿದಾನಂದ ಮಠ, ಮಕ್ನೂಲ್ ಪಟೇಲ್, ಪಪ್ಪು ಪಟೇಲ್, ಜೆ.ಎಂ ಕೊರಬು, ಶರಣಪ್ಪ ಕಣ್ಮೆàಶ್ವರ, ದಯಾನಂದ ದೊಡ್ಮನಿ, ಮತೀನ್ ಪಟೇಲ್, ಸಿದ್ಧಾರ್ಥ ಬಸರಿಗಿಡ, ಚಂದು ಕರ್ಜಗಿ, ಚಂದು ದೇಸಾಯಿ, ಶ್ರೀಶೈಲ ಮ್ಯಾಳೇಶಿ, ರಮೇಶ ಬಾಕೆ, ತುಕಾರಾಮಗೌಡ ಪಾಟೀಲ, ಶರಣು ಕುಂಬಾರ, ಬಸವರಾಜ ಪಾಟೀಲ, ಮಹಾರಾಯ ಅಗಸಿ, ಮಹಾಂತೇಶ ಬಡಿಗೇರ ಹಾಗೂ ಇನ್ನಿತರರು ಇದ್ದರು.