Advertisement

ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಭಾರಿ ಹೆಚ್ಚಳ; ಮತ್ತೆ ಮಹಾ ಪ್ರವಾಹದ ಭೀತಿ !

07:24 PM Jul 24, 2021 | Team Udayavani |

ಬನಹಟ್ಟಿ : ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ಸುಮಾರು ೨೦ ಜಲಾಶಯಗಳ ಒಳ ಹರಿವು ಹೆಚ್ಚಾಗುತ್ತಿದ್ದು ಇದರಿಂದ ರಬಕವಿ-ಬನಹಟ್ಟಿ ತಾಲೂಕಿನ ನದಿ ಪಾತ್ರದ ಹಳ್ಳಿಗಳಲ್ಲಿ ಮಹಾಪ್ರವಾಹದ ಭೀತಿ ಮತ್ತೋಮ್ಮೆ ಆವರಿಸತೊಡಗಿದೆ.

Advertisement

ಶನಿವಾರ 6 ಟಿಎಂಸಿ ಸಾಮರ್ಥ್ಯದ ಹಿಪ್ಪರಗಿ ಜಲಾಶಯಕ್ಕೆ  ೨ ಲಕ್ಷ ೮೪ ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದು, ೨ ಲಕ್ಷ ೮೩ ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬೀಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ ೫೨೪.೮೫ ಮೀ ನಷ್ಟಾಗಿದೆ. ಎಂದು ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಹಾಬಳೇಶ್ವರನಲ್ಲಿ ೨೮೭ ಮಿ. ಮೀ, ನೌಜಾ ೨೦೭ ಮಿ. ಮೀ, ಕರಾಡ ೧೨೪ ಮಿ. ಮೀ, ಸಾಂಗಲಿ ೫೬ ಮಿ. ಮೀ, ಕೊಲ್ಲಾಪುರ ೨೦೯ ಮಿ. ಮೀ ನಷ್ಟು ಮಳೆಯಾದ ವರದಿಯಾಗಿದೆ.

ಪ್ರವಾಹ ಮುನ್ನೆಚ್ಚರಿಕೆ ಪರಿಣಾಮವಾಗಿ ಆಯಾ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ನದಿ ಪಾತ್ರದ ಜನರು ನದಿಯ ಸಮೀಪ ಬಟ್ಟೆ, ಹಾಗೂ ಜಾನುವಾರುಗಳನ್ನು ತೆಗೆದುಕೊಂಡು ಹೋಗುವುದು ಮಾಡಬಾರದು. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ತಾಲೂಕು ಆಡಳಿತ ಈಗಾಗಲೇ ಕಾಳಜಿ ಕೇಂದ್ರ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಿದೆ. ಹಾಗೂ ನೀರಿನಿಂದ ಬಾದಿತವಾಗುವ ಎಲ್ಲ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತಾಲುಕೂ ಆಡಳಿತದ ಜೊತೆ ಸಹಕಾರವಿರಲಿ ಎಂದು ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next