Advertisement
ನೀತಿ ರೂಪಣೆಗಾಗಿ ದತ್ತಾಂಶಗಳನ್ನು ಕಲೆ ಹಾಕುವ ಸಲುವಾಗಿ ಕೊಳೆಗೇರಿಗಳ ಸ್ಥಿತಿಗತಿಯ ಅಧ್ಯಯನ ಮಾಡಿದಾಗ ದಯನೀಯವಾದ ಚಿತ್ರಣ ಬಿಚ್ಚಿಕೊಂಡಿದೆ. ಜಗತ್ತಿನಾದ್ಯಂತ ಸುಮಾರು 100 ಕೋಟಿ ಜನರು ಕೊಳೆಗೇರಿಗಳಲ್ಲಿ ವಾಸವಾಗಿದ್ದಾರೆ.
Related Articles
Advertisement
ಕೊಳೆಗೇರಿಗಳಿಗೆ ಶುದ್ಧವಾದ ಕುಡಿಯುವ ನೀರಿನ ಪೂರೈಕೆ ಒಂದು ಶಾಶ್ವತ ಸಮಸ್ಯೆ. ಜನರಿಗೆ ಖಾಸಗಿ ಶೌಚಾಲಯಗಳು ಇರುವುದಿಲ್ಲ. ಹೆಚ್ಚಿನವರು ಸಾರ್ವಜನಿಕ ಶೌಚಾಲಯಗಳನ್ನೇ ಅವಲಂಬಿಸಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪದೇಪದೆ ಕೈತೊಳೆಯುವುದು ಸಾಧ್ಯವಾಗದ ಸಂಗತಿ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಖನ್ನತೆ ಕೊಳೆಗೇರಿಗಳ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಕಾಯಿಲೆಗಳು. ಇಲ್ಲಿನ ಜನರ ರೋಗನಿರೋಧಕ ಶಕ್ತಿಯೂ ಕಡಿಮೆಯಾಗಿರುತ್ತದೆ.
ಬ್ರಜಿಲ್‌ನ ರಿಯೊ ಡಿ ಜನೆರೊ ನಗರದ ಹೊರಭಾಗದಲ್ಲಿರುವ ಜೋಪಡಿಗಳಲ್ಲಿ 67 ಲಕ್ಷ ಮಂದಿ ವಾಸವಾಗಿದ್ದಾರೆ. ಈ ಪೈಕಿ ನೂರಾರು ಮಂದಿಯಲ್ಲಿ ಈಗಾಗಲೇ ಕೋವಿಡ್ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗಳೆಲ್ಲ ಭರ್ತಿಯಾಗಿರುವುದರಿಂದ ಹೊಸದಾಗಿ ಸೋಂಕಿಗೊಳಗಾದವರಿಗೆ ಚಿಕಿತ್ಸೆಯೂ ಸಿಗುತ್ತಿಲ್ಲ.
ನೈಜೀರಿಯದ ಲಾಗೋಸ್ ನಗರ ಕೋವಿಡ್ ವಿರುದ್ಧ ಹೋರಾಡಲಾಗದೆ ಕೈಚೆಲ್ಲಿದೆ. 2.6 ಕೋಟಿ ಜನರು ಈ ನಗರದಲ್ಲಿದ್ದಾರೆ. ಈ ಪೈಕಿ ಮೂರನೇ ಒಂದು ಭಾಗ ಜನರು ವಾಸವಾಗಿರುವುದು 100ಕ್ಕೂ ಅಧಿಕವಿರುವ ಸ್ಲಮ್‌ಗಳಲ್ಲಿ.
ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ ಕೋವಿಡ್ ವೈರಸ್ ಕಾಡ್ಗಿಚ್ಚಿನಂತೆ ಹರಲಾರಂಭಿಸಿದೆ. ಇಲ್ಲಿರುವ ರೋಹಿಂಗ್ಯ ನಿರಾಶ್ರಿತರ ಶಿಬಿರಗಳಲ್ಲಿ ವೈರಸ್‌ನ ಭೀತಿ ದಟ್ಟವಾಗಿದೆ.ಢಾಕಾದ 90 ಲಕ್ಷ ಜನಸಂಖ್ಯೆಯಲ್ಲಿ ಶೇ.40 ಮಂದಿ ವಾಸವಾಗಿರುವುದು ಸ್ಲಮ್‌ಗಳಲ್ಲಿ.
ವಿಯೆಟ್ನಾಂ, ಸಿಯೆರಾ ಲಿಯೋನ್, ಉಗಾಂಡದಂಥ ಕೆಲವು ಬಡ ರಾಷ್ಟ್ರಗಳು ಹಿಂದಿನ ಅನುಭವಗಳಿಂದ ಪಾಠ ಕಲಿತುಕೊಂಡು ವೈರಸ್ ಹಾವಳಿ ಶುರುವಾದಾಗಲೇ ಲಾಕ್‌ಡೌನ್ ಮತ್ತಿತರ ಕ್ರಮಗಳನ್ನು ಅನುಸರಿಸಿದ ಕಾರಣ ಬಚಾವಾಗಿವೆ. ಆದರೆ ಎಲ್ಲ ಬಡ ದೇಶಗಳಿಗೆ ಇದು ಸಾಧ್ಯವಾಗಿಲ್ಲ. ಅಂದಿನ ದುಡಿತ ಅಂದಿನ ತುತ್ತಿಗೆ ಸಾಕಾಗುವಂತಿರುವ ಬಡ ದೇಶಗಳಲ್ಲಿ ಲಾಕ್‌ಡೌನ್ ಹೇರಿದರೆ ಜನಜೀವನ ಇನ್ನೂ ದುಸ್ತರವಾಗುತ್ತಿತ್ತು.
ಹೆಚ್ಚಿನೆಡೆ ಸರಕಾರಗಳು ಸ್ಲಮ್‌ಗಳಲ್ಲಿ ಕೋವಿಡ್ ನಿಗ್ರಹಿಸಲು ಒಂದೋ ಕಠೊರ ಕ್ರಮಗಳನ್ನು ಅನುಸರಿಸುತ್ತಿವೆ ಇಲ್ಲವೇ ಪೂರ್ಣವಾಗಿ ನಿರ್ಲಕ್ಷಿಸಿ ಬಿಟ್ಟಿವೆ.