ನವದೆಹಲಿ: ಆದಾಯ ಸಂಗ್ರಹಕ್ಕಾಗಿ ಒಂದೊಂದೇ ರಾಜ್ಯಗಳು ತೈಲದ ಮೇಲೆ ತೆರಿಗೆ ಏರಿಸುತ್ತಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಅದೇ ದಾರಿ ಹಿಡಿದಿದೆ. ಜಗತ್ತಿನ ಎಲ್ಲಕಡೆ ತೈಲಬೆಲೆ ಕುಸಿದಿದ್ದರೂ ಭಾರತ ಮಾತ್ರ ಏರಿಸುತ್ತಲೇ ಹೋಗುತ್ತಿದೆ. ಸದ್ಯ ಕೇಂದ್ರ ಸರ್ಕಾರ, ಪೆಟ್ರೋಲ್ ಮೇಲೆ 10 ರೂ., ಡೀಸೆಲ್ ಮೇಲೆ 13 ರೂ. ಅಬಕಾರಿ ಸುಂಕ ಏರಿಸಿದೆ. ಈ ಏರಿಕೆ ಇದುವರೆಗಿನ ಅತಿ ಗರಿಷ್ಠ ಏರಿಕೆ ಎಂದು ಬಣ್ಣಿಸಲಾಗಿದೆ. ಆದರೆ ಈ ಮೊತ್ತ ಗ್ರಾಹಕರ ಮೇಲೆ ಬೀಳುವುದಿಲ್ಲ, ಇದನ್ನು ತೈಲ ಕಂಪನಿಗಳೇ ಭರಿಸುತ್ತವೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಈ ಹಿಂದೆಯೂ ತೈಲಬೆಲೆ ಕಡಿಮೆಯಿದ್ದಾಗ ಅಬಕಾರಿ ಸುಂಕವನ್ನು ಏರಿಸಿತ್ತು. ಇದರಿಂದ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಸಿಗುತ್ತದೆ. ಆದರೆ ಅಂತಿಮ
ವಾಗಿ ಈ ಹೆಚ್ಚುವರಿಯನ್ನು ಕಂಪನಿಗಳು ಗ್ರಾಹಕರ ಮೇಲೆಯೇ ಹಾಕುತ್ತವೆ ಎಂಬದು ಸಾಮಾನ್ಯ! ಅರ್ಥಾತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಕುಸಿದ
ಕೂಡಲೇ ಕೇಂದ್ರ ಸುಂಕ ಏರಿಸುತ್ತದೆ. ಆಗ ಬೆಲೆ ಎಂದಿನಂತೆಯೇ ಇರುತ್ತದೆ. ಪರಿಣಾಮ ಗ್ರಾಹಕರಿಗೆ ಇಳಿಕೆಯ ಲಾಭ ಸಿಗುವುದಿಲ್ಲ.
ತೈಲದ ಮೇಲೆ ಜಗತ್ತಿನಲ್ಲೇ ಗರಿಷ್ಠ ಶೇ.69 ತೆರಿಗೆ ದೆಹಲಿ ಲೆಕ್ಕಾಚಾರವನ್ನೇ ಹಿಡಿದುಕೊಂಡರೆ ಭಾರತದಲ್ಲಿ ತೈಲದ ಮೇಲೆ ಶೇ.69ರಷ್ಟು ತೆರಿಗೆ ವಿಧಿಸಲಾಗಿದೆ. ಇದು ಇಡೀ ಜಗತ್ತಿನಲ್ಲೇ ಗರಿಷ್ಠ. ನಂತರದ ಸ್ಥಾನದಲ್ಲಿ ಶೇ.63ರಷ್ಟು ತೆರಿಗೆ ಹೇರಿರುವ ಫ್ರಾನ್ಸ್ ಇದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 71.26 ರೂ. ಇದ್ದರೆ, ತೆರಿಗೆ 49.42 ರೂ. ಆಗಿದೆ. ಇನ್ನು ಲೀಟರ್ ಡೀಸೆಲ್ ದರ 69.39 ರೂ. ಇದ್ದರೆ, ತೆರಿಗೆ 48.09 ರೂ.ಇದೆ.