ಬೇರೂತ್ : ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಇಂದು ಬೆಳಗ್ಗೆ ಭಾರೀ ಸ್ಫೋಟದ ಸದ್ದು ಕೇಳಿ ಬಂದಿರುವುದಾಗಿ ವಿಚಕ್ಷಣ ಸಮೂಹವು ತಿಳಿಸಿದೆ. ಆದರೆ ಸ್ಫೋಟದ ಸದ್ದು ಕೇಳಿ ಬರಲು ಕಾರಣವೇನೆಂದು ತಿಳಿಸಿಲ್ಲ. ಸಾವು ನೋವಿನ ಯಾವುದೇ ವರದಿಗಳು ಬಂದಿಲ್ಲ.
ಸ್ಫೋಟದ ಸದ್ದು ಭಯಂಕರವಾಗಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ಡಮಾಸ್ಕಸ್ ವರೆಗೂ ಅದು ಕೇಳಿ ಬರುವಂತಿತ್ತು ಎಂದು ಮಾನವ ಹಕ್ಕುಗಳ ಸಿರಿಯ ವಿಚಕ್ಷಣದ ದಳದ ಮುಖ್ಯಸ್ಥ ರಾಮಿ ಅಬ್‌ದೆಲ್ ರೆಹಮಾನ್ ತಿಳಿಸಿದ್ದಾರೆ.
ಸಿರಿಯದ ರಾಜಧಾನಿಯಿಂದ 25 ಕಿ.ಮೀ. ಆಗ್ನೇಯದಲ್ಲಿ ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
‘ಸ್ಫೋಟ ನಡೆದಿದೆ; ಆದರೆ ಅದು ವಿಮಾನ ನಿಲ್ದಾಣದ ಆವರಣದ ಒಳಗಲ್ಲ’ ಎಂದು ಬ್ರಿಟನ್ ಮೂಲಕದ ವಿಚಕ್ಷಣ ಸಮೂಹವು ಹೇಳಿದೆ. ಸ್ಫೋಟದ ಕಾರಣವೇನೆಂದು ಗೊತ್ತಾಗಿಲ್ಲ; ಆದರೆ ಬೆಂಕಿಯು ಭಾರೀ ಎತ್ತರಕ್ಕೆ ಏರಿರುವುದು ಕಂಡು ಬಂದಿದೆ ಎಂದು ಅಬ್‌ದೆಲ್ ರೆಹಮಾನ್ ಹೇಳಿದರು.
2011ರ ಬಳಿಕದಲ್ಲಿ ಸರಕಾರಿ ವಿರೋಧಿ ವ್ಯಾಪಕ ಪ್ರತಿಭಟನೆಯ ಸಿರಿಯ ಸಂಘರ್ಷಕ್ಕೆ ಈ ತನಕ 3,20,000 ಜನರು ಬಲಿಯಾಗಿದ್ದಾರೆ.