Advertisement

ಎಪಿಎಂಸಿ ಆದಾಯ ಭಾರೀ ಕುಸಿತ

03:55 PM Oct 18, 2020 | Suhan S |

ಕೊಪ್ಪಳ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಹಲವು ಮಹತ್ವದ ಬದಲಾವಣೆಗಳನ್ನು ತಂದಿದೆ. ಇದರಿಂದ ಎಪಿಎಂಸಿ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಮಾರುಕಟ್ಟೆ ಶುಲ್ಕ ಸಂಗ್ರಹದಲ್ಲೂಭಾರಿ ಇಳಿಮುಖವಾಗಿದೆ. ಹೀಗಾದರೆ ಎಪಿಎಂಸಿ ಆಡಳಿತನಡೆಸೋದೇ ಕಷ್ಟವೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದೆ ಆಡಳಿತ ವರ್ಗ.

Advertisement

ಹೌದು.. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳುಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಸೇರಿದಂತೆ ಹಲವುಕಾಯ್ದೆಗಳ ತಿದ್ದುಪಡಿ ಮಾಡಿವೆ. ಇದಾದ ಎರಡೇತಿಂಗಳಲ್ಲಿ ಎಪಿಎಂಸಿಗಳಿಗೆ ಆದಾಯ ಸಂಗ್ರಹದಲ್ಲಿಭಾರಿ ಇಳಿಮುಖವಾಗಿದೆ. ಹಾಗಾಗಿ ಎಪಿಎಂಸಿಗಳುಚಡಪಡಿಸುವಂತಾಗಿದೆ.ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ರಾಜ್ಯದ ಎಲ್ಲಎಪಿಎಂಸಿಗಳಲ್ಲಿ ಮಾರುಕಟ್ಟೆ ಶುಲ್ಕವನ್ನು 1.50 ರೂ. ಸಂಗ್ರಹ ಮಾಡಲಾಗುತ್ತಿತ್ತು. ಆದರೆ ಸರ್ಕಾರ ಆಗಸ್ಟ್‌ ತಿಂಗಳಲ್ಲಿಯೇ ಕಾಯ್ದೆಗೆ ತಿದ್ದುಪಡಿ ತರಲುಸುಗ್ರೀವಾಜ್ಞೆ ಜಾರಿ ಮಾಡಿದ್ದರಿಂದ ಅಂದಿನಿಂದಲೇ ಮಾರುಕಟ್ಟೆಯ ಶುಲ್ಕ 1.50 ರೂ. ಬದಲು, ಕೇವಲ 35 ಪೈಸೆ ಸಂಗ್ರಹಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಇದರಿಂದಾಗಿ ಎಪಿಎಂಸಿಯಲ್ಲಿ ಆದಾಯ ಕುಸಿತವಾಗಿದೆ.

ಉದಾಹರಣೆಗೆ ಕಾಯ್ದೆ ತಿದ್ದುಪಡಿಗೂ ಮುನ್ನಕೊಪ್ಪಳ ಎಪಿಎಂಸಿಯು ವರ್ತಕರು, ವ್ಯಾಪಾರಸ್ಥರು, ಟ್ರೇಡಿಂಗ್‌ ಕಂಪನಿಗಳಲ್ಲಿನಡೆಸುವ ಉತ್ಪನ್ನಗಳವಹಿವಾಟಿನ ಮೇಲೆ 1.50 ರೂ. ಮಾರುಕಟ್ಟೆ ಶುಲ್ಕ ಸಂಗ್ರಹ ಮಾಡುತ್ತಿದ್ದವು. ಹಾಗಾಗಿ ವಾರ್ಷಿಕವಾಗಿ 3 ರಿಂದ 4 ಕೋಟಿ ರೂ. ಶುಲ್ಕ ಸಂಗ್ರಹವಾಗುತ್ತಿತ್ತು. ಅದೇ ಹಣದಲ್ಲಿಯೇ ಸರ್ಕಾರಕ್ಕೆ ಆವರ್ತ ನಿಧಿ , ಎಪಿಎಂಸಿ ಬೋರ್ಡ್‌, ಕೃಷಿ ವಿವಿ, ನೌಕರರ ವೇತನದ ವೆಚ್ಚವು ಸೇರಿದಂತೆ ಇತರೆ ವಿಭಾಗಕ್ಕೆ ಬಳಕೆ ಮಾಡಿಉಳಿಕೆ ಹಣವನ್ನು ರಾಜ್ಯ ಸರ್ಕಾರಕ್ಕೆ ಕೊಡುತ್ತಿತ್ತು. ಆದರೆ ಕಾಯ್ದೆಗೆ ಸುಗ್ರೀವಾಜ್ಞೆ ಜಾರಿ ಬಳಿಕ 35 ಪೈಸೆ ದರ ನಿಗದಿಯಾಗಿದ್ದರಿಂದ ಎಪಿಎಂಸಿ ಆದಾಯದಲ್ಲಿ ಮೂರುಪಟ್ಟು ಇಳಿಕೆಯಾಗಿದೆ.

ಕಳೆದ ವರ್ಷ ಕೊಪ್ಪಳ ಎಪಿಎಂಸಿಗೆ ಸರ್ಕಾರವು 4,09,00,000 ಆದಾಯ ಸಂಗ್ರಹದ ಗುರಿ ನಿಗದಿಪಡಿಸಿತ್ತು. ಎಪಿಎಂಸಿಯು 3,73,34,954 ರೂ. ಸಂಗ್ರಹಿಸಿತ್ತು. ಪ್ರಸಕ್ತ ವರ್ಷದ ಆಗಸ್ಟ್‌ನಿಂದ ಮಾರುಕಟ್ಟೆ ಶುಲ್ಕ 35 ಪೈಸೆ ಲೆಕ್ಕದಲ್ಲಿ 3,57,306 ರೂ., ಸೆಪ್ಟೆಂಬರ್‌ನಲ್ಲಿ 4,00,412 ಸಂಗ್ರಹಿಸಿದೆ. ಈ 35 ಪೈಸೆಯಲ್ಲಿ ಆವರ್ತ ನಿಧಿ ಗೆ ಶೇ.0.15, ಎಪಿಎಂಸಿ ಬೋರ್ಡ್‌ಗೆ ಶೇ.0.04, ಎಪಿಎಂಸಿ ಆಡಳಿತ ವೆಚ್ಚಕ್ಕೆ ಶೇ.0.14, ರೆಮ್ಸ್‌ ಸಂಸ್ಥೆಗೆ ಶೇ.0.02ಹಣವನ್ನು ಹಂಚಿಕೆ ಮಾಡಬೇಕು. ಅಂದರೆ ಎಪಿಎಂಸಿನಿರ್ವಹಣೆಗೆ ಪಕ್ಕಾ ಶೇ.0.14 ಅಷ್ಟು ಹಣವನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು. ಇಷ್ಟು ಹಣದಲ್ಲಿ ಹೇಗೆತಾನೇ ಎಪಿಎಂಸಿ ಆಡಳಿತ ನಿರ್ವಹಣೆ ಮಾಡಲುಸಾಧ್ಯ ಎನ್ನುತ್ತಿದೆ ಆಡಳಿತ ವರ್ಗ. 35 ಪೈಸೆಯಂತೆ ಶುಲ್ಕ ಸಂಗ್ರಹಿಸಿದರೆ ವಾರ್ಷಿಕ 1 ಕೋಟಿ ರೂ. ಸಂಗ್ರಹವಾಗುವುದು ಅನುಮಾನ. ಒಟ್ಟಿನಲ್ಲಿ ಕಾಯ್ದೆ ತಿದ್ದುಪಡಿ ಬಳಿಕ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ. ಇದರಿಂದ ಎಪಿಎಂಸಿ ನಿರ್ವಹಣೆ ವೆಚ್ಚಕ್ಕೆ ಎಪಿಎಂಸಿಗಳು ನರಳಾಡುವಂತಾಗಿದೆ. ಇನ್ನು ಎಪಿಎಂಸಿಯಲ್ಲಿ ಕಳೆದ 20 ವರ್ಷಗಳಿಂದ ಹೊರ ಗುತ್ತಿಗೆ ಕೆಲಸ ಮಾಡುತ್ತಿದ್ದ 20 ಜನರ ಪೈಕಿ 10 ಜನರನ್ನು ಕೆಲಸದಿಂದ ತೆಗೆಯಲಾಗಿದೆ ಎಂದೆನ್ನುತ್ತಿದೆ ಎಪಿಎಂಸಿ ಆಡಳಿತ ಮಂಡಳಿ.

ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬಳಿಕ ಎಲ್ಲ ಎಪಿಎಂಸಿಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇದರಿಂದ ನಮ್ಮ ಆದಾಯಕ್ಕೆ ಕುತ್ತು ಬಂದಿದೆ. ಮಾರುಕಟ್ಟೆ ಶುಲ್ಕ 1.50 ರೂ. ಬದಲು, 35 ಪೈಸೆ ಸಂಗ್ರಹಿಸುವಂತೆ ಸರ್ಕಾರ ಆದೇಶ ಮಾಡಿದೆ. ಇದರಿಂದ ನಾವು ಆಡಳಿತ ನಿರ್ವಹಣೆ ಮಾಡುವುದೇ ಕಷ್ಟವಾಗುತ್ತಿದೆ. ಆರ್ಥಿಕ ತೊಂದರೆಯಿಂದ ಕೆಲಸಗಾರರನ್ನು ತೆಗೆದಿದ್ದೇವೆ. -ನಾಗರಾಜ ಚಳ್ಳೂಳ್ಳಿ, ಕೊಪ್ಪಳ ಎಪಿಎಂಸಿ ಅಧ್ಯಕ್ಷ

Advertisement

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next