ಹುಬ್ಬಳ್ಳಿ: ಸ್ಕೇಟಿಂಗ್ ಧರಿಸಿ ಮೂರು ರಿಂಗ್ ಗಳನ್ನು ಶರೀರಕ್ಕೆ ಹಾಕಿಕೊಂಡು, ಅವುಗಳನ್ನು ತಿರುಗಿಸುತ್ತ ಕೇವಲ 23.35 ಸೆಕೆಂಡ್ ಗಳಲ್ಲಿ 100 ಮೀಟರ್ ದೂರ ಕ್ರಮಿಸುವ ಮೂಲಕ ಇಲ್ಲಿನ 10 ವರ್ಷದ ಬಾಲಕಿಯೊಬ್ಬಳು ಗಿನ್ನಿಸ್ ದಾಖಲೆ ಯತ್ನ ಕೈಗೊಂಡಿದ್ದಾಳೆ.
ಹತ್ತು ವರ್ಷದ ಸ್ತುತಿ ಕುಲಕರ್ಣಿ ಈ ಸಾಧನೆ ಮಾಡಿದ ಬಾಲಕಿ.
ಇಲ್ಲಿನ ಶಿರೂರು ಪಾರ್ಕ್ ಮುಖ್ಯ ರಸ್ತೆಯಲ್ಲಿ ಹುಲ್ಲಾಹುಪ್ ಸ್ಕೇಟಿಂಗ್ ನೊಂದಿಗೆ ಸ್ತುತಿ ಕುಲಕರ್ಣಿ ಓಡಿದ್ದಾಳೆ.
ಇದೇ ರೀತಿಯ ಓಟವನ್ನು ಆಸ್ಟ್ರೇಲಿಯಾದ ಲೇಡಿಮಾರ್ವಾ ಅವರು 27 ಸೆಕೆಂಡ್ ಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರು.
ಇದೀಗ ಸ್ತುತಿ ಕುಲಕರ್ಣಿ ಕೇವಲ 23.35 ಸೆಕೆಂಡ್ ಗಳಲ್ಲಿ ಕ್ರಮಿಸುವ ಮೂಲಕ ಹೊಸ ದಾಖಲೆ ಬರೆದಿದ್ದು, ಇದು ಗಿನ್ನಿಸ್ ದಾಖಲೆಯಾಗುವ ವಿಶ್ವಾಸವಿದೆ ಎನ್ನುವುದು ಸ್ತುತಿ ತರಬೇತುದಾರ ಅಕ್ಷಯ ಸೂರ್ಯವಂಶಿ ಅವರ ಅನಿಸಿಕೆ.