Advertisement

ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಅತ್ಯುತ್ತಮ ನಿರ್ವಹಣೆಯ ಹಿರಿಮೆಯ ಗರಿ

03:34 PM Apr 17, 2017 | |

ಹುಬ್ಬಳ್ಳಿ: ನೈಋತ್ಯ ರೈಲ್ವೆಯಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಅತ್ಯುತ್ತಮ ನಿರ್ವಹಣೆ ಹೊಂದಿದ ಪ್ರಮುಖ ನಿಲ್ದಾಣವಾಗಿ ಗುರುತಿಸಿಕೊಂಡಿದೆ. 2016-17ನೇ ಸಾಲಿನಲ್ಲಿ ರೈಲ್ವೆ ಬಳಕೆದಾರರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಆಧುನೀಕರಣದ ಭಾಗವಾಗಿ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ.2/3 ಮತ್ತು 4/5ರಲ್ಲಿ ಮೇಲು ದಿಕ್ಕಿನಂತೆ ಪ್ರತ್ಯೇಕವಾಗಿ ಎರಡು ಎಸ್ಕಲೇಟರ್ಗಳನ್ನು ಅಳವಡಿಸಲಾಗಿದೆ.

Advertisement

ಜನಸಂದಣಿ ಕಡಿಮೆ ಮಾಡಲು ಹಾಗೂ ಕೊನೆ ನಿಮಿಷದಲ್ಲಿ ಕಾಯ್ದಿರಿಸದ ಟಿಕೆಟ್‌ ಖರೀದಿಸಲು ಪ್ರಯಾಣಿಕರಿಗೆ ಅನುಕೂಲ ಮಾಡಲು ಹೊಸ ಪಿಆರ್‌ ಎಸ್‌ ಕಚೇರಿಯನ್ನು ನಿಲ್ದಾಣದ ಕಟ್ಟಡದ ಕೆಳಂತಸ್ತಿನ ಅಂಗಣಕ್ಕೆ ಸ್ಥಳಾಂತರಿಸಲಾಗಿದೆ. ಜೊತೆಗೆ ಜನಸಂದಣಿ ಕಡಿಮೆ ಮಾಡಲು ಮತ್ತು ಬಜೆಟ್‌ ಘೋಷಣೆಯಂತೆ ಆಪರೇಷನ್‌ 5 ಮಿನಿಟ್ಸ್‌ ಅನುಸರಿಸಲಾಗಿದೆ. 

ನಾಣ್ಯ ಕಾರ್ಯಾಚರಣೆಯ ಟಿಕೆಟ್‌ ವಿತರಿಸುವ ಯಂತ್ರಗಳು (ಸಿಒಟಿವಿಎಂ) ಹಾಗೂ ನಾಲ್ಕು ಸ್ವಯಂ ಚಾಲಿತ ಟಿಕೆಟ್‌ ವಿತರಿಸುವ ಯಂತ್ರಗಳನ್ನು (ಆಟಿವಿಎಂ) ಪ್ರಯಾಣಿಕರಿಗೆ ಕಾಯ್ದಿರಿಸದ ಟಿಕೆಟ್‌ ತ್ವರಿತ ಲಭ್ಯತೆಗಾಗಿ ಒದಗಿಸಲಾಗಿದೆ. ನವೀನತೆಯ ಡಿಜಿಟಲ್ ಇಂಡಿಯಾ ಅಂಗವಾಗಿ ಅಂಡ್ರಾಯ್ಡ ಹೊಂದಿದ ಮೊಬೈಲ್‌ಗ‌ಳಿಗೆ ವೈ-ಫೈ ಉಚಿತ ಸಂಪರ್ಕವನ್ನು ಪ್ರಯಾಣಿಕರಿಗೆ ಒದಗಿಸಲಾಗಿದೆ.

ಪ್ಲಾಟ್‌ ಫಾರ್ಮ್ ನಂ.1ರಲ್ಲಿ ಧಾರವಾಡ ಮಾರ್ಗ ಕಡೆಗೆ 48 ಮೀಟರ್‌ ಹಾಗೂ ಗದಗ ಕಡೆಗೆ ಸುರಂಗ ಬಳಿ 28 ಮೀಟರ್‌ವರೆಗೆ ಹೆಚ್ಚುವರಿಯಾಗಿ ಕವರ್‌ ಹಾಕಲಾಗಿದೆ. ಈ ವೇದಿಕೆಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ. ನಿಲ್ದಾಣವನ್ನು ಸೌಂದರ್ಯದೊಂದಿಗೆ ಅಭಿವೃದ್ಧಿ ಪಡಿಸಲು ಭಿತ್ತಿಚಿತ್ರಗಳನ್ನು ನಿಲ್ದಾಣದ ಕಟ್ಟಡದ ಮುಂದೆ ಕಡಿಮೆ ಪರಿಚಲನೆಯ ಪ್ರದೇಶದಲ್ಲಿ ಒದಗಿಸಲಾಗಿದೆ. ನಿಲ್ದಾಣದ ಆವರಣವನ್ನು ಸುಂದರಗೊಳಿಸಲಾಗುತ್ತಿದೆ.

ಸ್ವತ್ಛ  ಭಾರತ ಅಭಿಮಾನ ಮೂಲಕ ಸಸಿಗಳನ್ನು ನೆಡಲಾಗಿದೆ.  ಸ್ವತ್ಛ ಭಾರತ ಅಂಗವಾಗಿ ಪ್ಲಾಟ್‌ಫಾರ್ಮ್ ನಂ.4ರಲ್ಲಿ ಅಂದಾಜು 1.71 ಕೋಟಿ ರೂ. ವೆಚ್ಚದಲ್ಲಿ ನೆಲಹಾಸಿಗೆ ಸಿಮೆಂಟ್‌ ಕಾಂಕ್ರೀಟ್‌ ಮಾಡಲಾಗಿದೆ. ಪ್ಲಾಟ್‌ಫಾರ್ಮ್ ನಂ.5 ರಲ್ಲಿ ಸಿಮೆಂಟ್‌ ಕಾಂಕ್ರೀಟ್‌ ನೆಲಹಾಸು ಕಾಮಗಾರಿ ಪ್ರಗತಿಯಲ್ಲಿದೆ. ನಿರೀಕ್ಷಣಾ ಪಟ್ಟಿಯಲ್ಲಿರುವ /ಆರ್‌ಎಸಿ ಪ್ರಯಾಣಿಕರ ಅನುಕೂಲಕ್ಕಾಗಿ ಪ್ಲಾಟ್‌ಫಾರ್ಮ್ ನಂ.1ರ ಮುಖ್ಯ ದ್ವಾರದಲ್ಲಿ ಡಿಜಿಟಲ್ ಪ್ರದರ್ಶನ ಪಟ್ಟಿ ಒದಗಿಸಲಾಗಿದೆ.

Advertisement

ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಶುದ್ಧೀಕರಿಸಿದ ನೀರು ಒದಗಿಸುವ ನಿಟ್ಟಿನಲ್ಲಿ ಪ್ಲಾಟ್‌ಫಾರ್ಮ್ ನಂ.1ರಲ್ಲಿ 1, 2/3ರಲ್ಲಿ 2, 4/5ರಲ್ಲಿ 2 ನೀರು ಮಾರಾಟ ಯಂತ್ರಗಳನ್ನು ಅಳವಡಿಸಲಾಗಿದೆ. ಜೊತೆಗೆ ಅಖೀಲ ಭಾರತೀಯ ಶ್ರೀ ರಾಜೇಂದ್ರ ಜೈನ ನವ ಯುವಕ ಪರಿಷದ್‌ನಿಂದ ಕುಡಿಯುವ ನೀರಿನ ಕೇಂದ್ರ ಸ್ಥಾಪಿಸಲಾಗಿದೆ. 

ರೈಲ್ವೆ ಬಜೆಟ್‌ನಲ್ಲಿ ಘೋಷಣೆಯಾದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಮಹಿಳೆಯರ ವಿಶ್ರಾಂತಿ ಕೊಠಡಿ, ಅಪರ್‌ ಕ್ಲಾಸ್‌ ಮತ್ತು ಸ್ಲಿàಪರ್‌ ಕ್ಲಾಸ್‌ ವಿಶ್ರಾಂತಿ ಕೊಠಡಿಗಳಲ್ಲಿ ಶಿಶುಗಳ ರಕ್ಷಣೆ ಕಾರ್ನರ್‌ (ಬೇಬಿ ಕೇರ್‌) ಲಭ್ಯವಿದೆ. ಬೆಳಗಾವಿಯ ಸಾಮಾಜಿಕ ಸಂಸ್ಥೆ, ಧಾರವಾಡದ ಡೈಯಾಸಿಸ್‌ ಸಾಮಾಜಿಕ ಸೇವಾ ಸೊಸೈಟಿಯು ಪ್ಲಾಟ್‌ಫಾರ್ಮ್ ನಂ.1ರಲ್ಲಿ ಮಕ್ಕಳ ರಕ್ಷಣಾ ಘಟಕವನ್ನು 24/7 ಟೋಲ್‌ μÅà ಸಂಖ್ಯೆ 1098ರೊಂದಿಗೆ ಆರಂಭಿಸಿದೆ.

ಪ್ಲಾಟ್‌ಫಾರ್ಮ್ ನಂ.1ರಲ್ಲಿ ಶೌಚಾಲಯ (ಗದಗ ಕಡೆಗೆ), ಹೊಸ ಪಿಆರ್‌ಎಸ್‌ ಮತ್ತು ಪಾರ್ಸಲ್‌ ಕಚೇರಿ ಒದಗಿಸಲಾಗಿದೆ. ಪ್ಲಾಟ್‌ಫಾರ್ಮ್ ನಂ.1ರಲ್ಲಿ ಕ್ಲಾಕ್‌ ರೂಮ್‌ ಸೌಲಭ್ಯ ಹಾಗೂ ಪುಸ್ತಕ ಮಳಿಗೆ ಮರು ಸ್ಥಾಪಿಸಲಾಗಿದೆ. ಹಿರಿಯ ನಾಗರಿಕರು ಮತ್ತು ವಿಶೇಷ ಅಂಗವಿಕಲರಿಗಾಗಿ ಬ್ಯಾಟರಿ ಚಾಲಿತ ದೋಣಿ ಕಾರುಗಳ ಕಾರ್ಯಾಚರಣೆಯನ್ನು ಶೀಘ್ರ ಕಾರ್ಯ ನಿರ್ವಹಿಸಲಿವೆ. ಗದಗ ರಸ್ತೆ ಕಡೆಯಿಂದ ನಿಲ್ದಾಣಕ್ಕೆ ಆಗಮಿಸಲು ಎರಡನೇ ಪ್ರವೇಶ ದ್ವಾರ ನಿರ್ಮಿಸಲು ಯೋಜಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next