Advertisement

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

03:42 PM Sep 18, 2024 | Team Udayavani |

ಜಗತ್ತಿನ ಅತೀ ದೊಡ್ಡ ರೈಲ್ವೆ ನೆಟ್ವರ್ಕ್‌ ಹೊಂದಿರುವ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಜನರ ಜೀವನಾಡಿಯಾಗಿದೆ. ಇದರಲ್ಲಿ ಅತೀ ಹೆಚ್ಚು ರೈಲು ನಿಲ್ದಾಣ ಹೊಂದಿರುವುದು, ಭಯಾನಕ ರೈಲು ನಿಲ್ದಾಣಗಳು, ಕಿರಿದಾದ ರೈಲು ನಿಲ್ದಾಣಗಳು ಹೀಗೆ ನಾನಾ ರೀತಿಗಳಿವೆ. ಆದರೆ ನಿಮಗೆ ಹುಬ್ಬೇರಿಸುವಂತೆ ಮಾಡುವ, ತಮಾಷೆಯ ಕೆಲವು ರೈಲು ನಿಲ್ದಾಣಗಳ ಹೆಸರನ್ನು ನಿಮಗೆ ಪರಿಚಯಿಸುತ್ತೇವೆ…

Advertisement

ಕೆಲವು ಹೆಸರುಗಳೇ ಹಾಗೇ ಅದು ಯಾವುದೇ ಭಾಷೆಯದ್ದೇ ಆಗಿರಲಿ…ಅದು ಜನಸಾಮಾನ್ಯರಿಗೂ ಥಟ್ಟನೆ ಅರ್ಥವಾಗಿ ಬಿಡುತ್ತದೆ. ಜಾರ್ಖಂಡ್‌ ನ ಹಝಾರಿಬಾಗ್‌ ಜಿಲ್ಲೆಯಲ್ಲಿನ ರೈಲ್ವೆ ನಿಲ್ದಾಣದ ಹೆಸರು….ದಾರು (Daru) ನಿಲ್ದಾಣ! ಇಲ್ಲಿನ ಸ್ಥಳೀಯ ಗ್ರಾಮವೊಂದರ ಹೆಸರು ದಾರು…ಅದಕ್ಕಾಗಿ ಈ ನಿಲ್ದಾಣಕ್ಕೂ ಅದೇ ಹೆಸರು ಇಡಲಾಗಿದೆಯಂತೆ!

Bap Railway ಸ್ಟೇಷನ್:‌

ರಾಜಸ್ಥಾನದ ಜೋಧ್‌ ಪುರ್‌ ನಲ್ಲಿ “ಬಾಪ್‌” ಹೆಸರಿನ ರೈಲ್ವೆ ನಿಲ್ದಾಣವಿದೆ. ಹಿಂದಿಯಲ್ಲಿ ಬಾಪ್‌ ಅಂದರೆ ಅಪ್ಪ ಅಂತ ಅರ್ಥ. ಕುತೂಹಲದ ವಿಚಾರವೆಂದರೆ ಈ ನಿಲ್ದಾಣದ ಹೆಸರು ಬಾಪ್‌ ಅಂತ ಇದ್ದರೂ ಕೂಡಾ ಎಷ್ಟೋ ರೈಲುಗಳು ಇಲ್ಲಿ ನಿಲ್ಲಿಸುವುದು ಇಲ್ವಂತೆ!

Advertisement

Sali Railway ಸ್ಟೇಷನ್:‌

ಜೋಧ್‌ ಪುರ್‌ ನ ವಾಯುವ್ಯ ರೈಲ್ವೆಯ ವಲಯದ ಡುಡ್ಡು ಎಂಬಲ್ಲಿ “ಸಾಲಿ” (Sali) ಎಂಬ ಹೆಸರಿನ ರೈಲ್ವೆ ನಿಲ್ದಾಣವಿದೆ. ಹಿಂದಿಯಲ್ಲಿ ನಾದಿನಿ(ಪತ್ನಿಯ ತಂಗಿ)ಗೆ ಸಾಲಿ ಎಂದು ಕರೆಯುತ್ತಾರೆ. ಅದಕ್ಕೆ ಹೊಂದಿಕೆ ಎಂಬಂತೆ ಸಮೀಪದಲ್ಲೇ ಜೀಜಾ ಹೆಸರಿನ ರೈಲು ನಿಲ್ದಾಣವಿದೆ. ಜೀಜಾ(Jija) ಅಂದರೆ ಸಹೋದರಿಯ ಗಂಡ(ಭಾವ)! ಎಂಬುದಾಗಿದೆ.

ಸಿಂಗಾಪುರ್‌ ರೈಲ್ವೆ ನಿಲ್ದಾಣ:

ಈ ಸಿಂಗಾಪುರ್‌ ರೈಲ್ವೆ ನಿಲ್ದಾಣಕ್ಕೆ ತೆರಳಲು ಯಾವುದೇ ವೀಸಾದ ಅಗತ್ಯವಿಲ್ಲ. ಈ ನಿಲ್ದಾಣವೇನು ಜನಪ್ರಿಯ ನಗರದಲ್ಲಿ ಇಲ್ಲ. ಇದು ಒಡಿಶಾದ ರಾಯಗಢ್‌ ನಲ್ಲಿದೆ. ಇಲ್ಲಿನ ಸಿಂಗಾಪುರ್‌ ರೋಡ್‌ ರೈಲ್ವೆ ಜಂಕ್ಷನ್‌ ನಲ್ಲಿ ದೇಶದ ಹಲವು ಭಾಗಗಳನ್ನು ಸಂಪರ್ಕಿಸುವ ರೈಲ್ವೆ ಮಾರ್ಗ ಹೊಂದಿರುವುದಾಗಿ ವರದಿ ತಿಳಿಸಿದೆ.

ದಿವಾನ(Diwana):

ಹರ್ಯಾಣದ ಪಾಣಿಪತ್‌ ನಲ್ಲಿರುವ ಈ ರೈಲ್ವೆ ನಿಲ್ದಾಣದ ಹೆಸರು “ದಿವಾನ”( Diwana). ಇಲ್ಲಿ ದಿನಂಪತ್ರಿ ಎರಡು ಫ್ಲ್ಯಾಟ್ ಫಾರಂಗಳಲ್ಲಿ ಅಂದಾಜು ಪ್ರತಿದಿನ 16 ರೈಲುಗಳು ಇಲ್ಲಿ ನಿಲುಗಡೆಯಾಗುತ್ತದೆ. ಈ ರೈಲ್ವೆ ನಿಲ್ದಾಣದ ಹೆಸರು ನಿಮಗೆ ನಗು ತರಿಸುತ್ತೆ.

ಕಾಲಾ ಬಕರಾ!

ಪಂಜಾಬ್‌ ನ ಜಲಂಧರ್‌ ಸಮೀಪದ ಗ್ರಾಮವೊಂದರಲ್ಲಿ ಕಾಲಾ ಬಕರಾ ಎಂಬ ಹೆಸರಿನ ರೈಲ್ವೆ ನಿಲ್ದಾಣವಿದೆ. (ಕಪ್ಪು ಆಡು). ಒಂದು ವೇಳೆ  ನೀವು ಯಾವತ್ತಾದರೂ ಈ ನಿಲ್ದಾಣಕ್ಕೆ ಭೇಟಿ ಕೊಟ್ಟರೆ ತುಂಬಾ ಗೌರವಯುತವಾಗಿ ನಿಲ್ದಾಣದ ಹೆಸರು ಕರೆಯಿರಿ…ಕಾಲಾ ಬಕರಾ ಅಂತ!

Kutta Railway Station:

ಕು(ತ್ತಾ)ಟ್ಟ ಹೆಸರಿನ ರೈಲ್ವೆ ನಿಲ್ದಾಣ ಕರ್ನಾಟಕದ ಮಡಿಕೇರಿಯ ಗಡಿಭಾಗದಲ್ಲಿರುವ ಹಳ್ಳಿಯಲ್ಲಿದೆ. ಇದೊಂದು ಪ್ರಕೃತಿ ಸೌಂದರ್ಯ ಹೊಂದಿರುವ ಹಳ್ಳಿ. ಇಲ್ಲಿಂದ  ಕೇರಳದ ತಲಶ್ಚೇರಿ ರೈಲ್ವೆ ನಿಲ್ದಾಣ 106 ಕಿಲೋ ಮೀಟರ್‌ ದೂರದಲ್ಲಿದ್ದು, ಮೈಸೂರು ಜಂಕ್ಷನ್‌ ರೈಲ್ವೆ ನಿಲ್ದಾಣ 120 ಕಿಲೋ ಮೀಟರ್‌ ದೂರದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next