Advertisement
ದೇಶದ ಮೊದಲ “ವಂದೇ ಮೆಟ್ರೋ’ ಉದ್ಘಾಟನೆಅಹ್ಮದಾಬಾದ್: 2 ನಗರಗಳ ನಡುವೆ ಸಂಚರಿಸಲಿರುವ ದೇಶದ ಮೊದಲ “ವಂದೇ ಮೆಟ್ರೋ’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಲಿದ್ದಾರೆ. ಅಹ್ಮದಾಬಾದ್-ಭುಜ್ ನಡುವಿನ 365 ಕಿ.ಮೀ.ದೂರವನ್ನು ಹೊಸ ರೈಲು 5 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಲಿದೆ. ಪ್ರತೀ ಗಂಟೆಗೆ ರೈಲು ಗರಿಷ್ಠ 110 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಹೊಸ ವ್ಯವಸ್ಥೆ 2 ನಗರಗಳ ನಡುವಿನ ಸಂಚಾರದಲ್ಲಿ ಭಾರೀ ಬದಲಾವಣೆ ತರಲಿದೆ. ವಂದೇ ಭಾರತ್ಗಿಂತ ಕೆಲವು ವ್ಯವಸ್ಥೆಗಳು ಹೊಸ ರೈಲಿನಲ್ಲಿ ಉತ್ತಮವಾಗಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.