Advertisement

ಯುವಕರಲ್ಲಿ ಆರೋಗ್ಯ ಜಾಗೃತಿಗಾಗಿ ಮಹಾರನ್‌

12:20 PM Feb 14, 2019 | Team Udayavani |

ಹುಬ್ಬಳ್ಳಿ: ಮುಂದಿನ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆಯಬೇಕು ಹಾಗೂ ಯುವಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕು ಎನ್ನುವ ಕಾರಣಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ “ಮಹಾರನ್‌’ ಹಮ್ಮಿಕೊಂಡಿದ್ದೇವೆ ಎಂದು ಕುಮಾರ ಮಲ್ಲಪ್ಪ ನೀರಗುಂದ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾವುದೇ ಪಕ್ಷ, ಸಂಘಟನೆಗೂ ಸೇರಿದವರಲ್ಲ. ಕೇವಲ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳು, ದೇಶದ ಪ್ರಗತಿಯ ದೃಷ್ಟಿಯಿಂದ ಮೋದಿಯವರು ಪ್ರಧಾನಿ ಆಗಬೇಕು ಎನ್ನುವ ಕಾರಣಕ್ಕೆ ಈ ಓಟ ಕೈಗೊಂಡಿದ್ದೇವೆ. ಇಂದಿನ ಯುವಕರಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ವಿವಿಧ ರೋಗಗಳಿಂದ ನರಳುತ್ತಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮಹಾರನ್‌ಗೆ ಸುಮಾರು 35-40 ಲಕ್ಷ ರೂ. ಖರ್ಚಾಗಬಹುದು ಎನ್ನುವ ನಿರೀಕ್ಷೆಯಿದೆ. ಯಾರಿಂದಲೂ ಇದಕ್ಕಾಗಿ ಹಣ ನಿರೀಕ್ಷಿಸದೆ ಸ್ವಂತ ಖರ್ಚಿನಲ್ಲಿ ಮಾಡುತ್ತಿದ್ದೇವೆ. ಚಾಲಕ ಸೇರಿದಂತೆ 6 ಜನರ ತಂಡವಿದ್ದು, ದಂಪತಿಗಳಿಬ್ಬರು ಮಾತ್ರ ಓಡುತ್ತಿದ್ದೇವೆ. ಮೂಲತಃ ಕೊಡಗಿನವರಾದರೂ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದೇವೆ. 2014ರಲ್ಲಿ ಮಹಾರನ್‌ ಮಾಡುಬೇಕು ಎನ್ನುವ ಪ್ರಯತ್ನಕ್ಕೆ ಮುಂದಾಗಿದ್ದೇವು. ಹಲವು ಕಾರಣಗಳಿಂದ ಇದು ಯಶಸ್ವಿಯಾಗಿರಲಿಲ್ಲ. ಹೀಗಾಗಿ 2016ರಿಂದ ನಿತ್ಯವೂ ದೈಹಿಕ ಕಸರತ್ತು ನಡೆಸಿದ್ದೇವೆ ಎಂದು ವಿವರಿಸಿದರು.

ರೂಪಾ ಕುಮಾರ ಮಾತನಾಡಿ, ದೇಶದ ಜನರಿಂದ ಹಣ ಸಂಗ್ರಹಿಸಿ ಸೈನಿಕರ ಕಲ್ಯಾಣ
ನಿಧಿಗೆ ನೀಡಬೇಕು ಎನ್ನುವ ಮಹತ್ವದ ಉದ್ದೇಶ ಹೊಂದಿದ್ದೇವೆ. ಇದೀಗ ಕನ್ಯಾಕುಮಾರಿಯಿಂದ ಇಲ್ಲಿಯವರೆಗೆ ಸುಮಾರು 54 ಸಾವಿರ ರೂ. ಸೈನಿಕರ ಕಲ್ಯಾಣ ನಿಧಿಗೆ ಹಣ ನೀಡಿದ್ದಾರೆ. ಕಾಶ್ಮೀರದವರೆಗೂ ಈ ಹಣ ಸಂಗ್ರಹಿಸಿ ಪ್ರಧಾನಿ ಮೋದಿ ಮೂಲಕ ಕಲ್ಯಾಣ ನಿಧಿಗೆ ನೀಡಲಾಗುವುದು. ಜ.26ರಿಂದ ಆರಂಭವಾಗಿರುವ ಈ ಓಟ ಏಪ್ರಿಲ್‌ 10ರಂದು ಕಾಶ್ಮೀರ ತಲುಪುವ ನಿರೀಕ್ಷೆಯಿತ್ತು. ನಿತ್ಯ 60 ಕಿ.ಮೀ. ಬದಲು 80 ಕಿ.ಮೀ. ಕ್ರಮಿಸುತ್ತಿರುವುದರಿಂದ ಏ.1ರಂದು ಕಾಶ್ಮೀರ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿದರು. ಟೀಂ ಮೋದಿ ಜಿಲ್ಲಾ ಸಂಚಾಲಕ ಸುಭಾಸಸಿಂಗ್‌ ಜಮಾದಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next