ಹುಬ್ಬಳ್ಳಿ: ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಕಿಮ್ಸ್ ನ ಡಾ. ನಾರಾಯಣ ಹೆಬಸೂರು ಹಾಗೂ ನಿರ್ವಹಣಾ ಮೇಲ್ವಿಚಾರಕ ಶ್ರೀನಿವಾಸ ಬಳ್ಳಾರಿ ಕೋವೀಶೀಲ್ಡ್ ಲಸಿಕೆ ಪಡೆದರು.
ಶನಿವಾರ ಇಲ್ಲಿನ ಕಿಮ್ಸ್ ಆಡಳಿತ ಭವನದಲ್ಲಿ ಏರ್ಪಡಿಸಿದ್ದ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಲಸಿಕೆ ಪಡೆದರು.
ಲಸಿಕೆ ಪಡೆದ ಇಬ್ಬರನ್ನು ಅರ್ಧ ಗಂಟೆ ಪತ್ಯೇಕ ನಿಗಾ ಕೊಠಡಿಯಲ್ಲಿ ಇರಿಸಲಾಗಿತ್ತು. ನಂತರ ಇಬ್ಬರೂ ಆರೋಗ್ಯವಾಗಿ ತಮ್ಮ ಕಾರ್ಯಗಳಿಗೆ ತೆರಳಿದರು. ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ಕಿಮ್ಸ್ ನ 100 ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದ್ದು, ಪ್ರತಿಯೊಬ್ಬರು ಲಸಿಕೆ ಪಡೆದು ಆರೋಗ್ಯ ಹೊಂದಬೇಕು ಎಂದು ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ಬಡವರಿಗೂ ಕೈಗೆಟುಕುವ ದರದಲ್ಲಿ ವ್ಯಾಕ್ಸಿನ್ ಲಭ್ಯ: ಕೆ.ಎಸ್.ಈಶ್ವರಪ್ಪ