Advertisement

ಗಲಭೆಗೆ ರಾಜಕೀಯ ಬಣ್ಣ; ಹುಬ್ಬಳ್ಳಿ ಘಟನೆ: ಕಾಂಗ್ರೆಸ್‌-ಬಿಜೆಪಿ ನಾಯಕರ ವಾಕ್ಸಮರ

12:43 AM Apr 20, 2022 | Team Udayavani |

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದ ವಿವಾದಾತ್ಮಕ ಪೋಸ್ಟ್‌ ವಿಚಾರವಾಗಿ ಹಳೇ ಹುಬ್ಬಳ್ಳಿಯಲ್ಲಿ ನಡೆದ ದಾಂಧಲೆ ಈಗ ರಾಜಕೀಯ ಸ್ವರೂಪ ಪಡೆದಿದ್ದು, ಆರೋಪ -ಪ್ರತ್ಯಾರೋಪಗಳ ಜಂಗೀಕುಸ್ತಿಯ ಕಣವಾಗಿದೆ.

Advertisement

ಕಾಂಗ್ರೆಸ್‌ -ಬಿಜೆಪಿ ನಾಯಕರು ಪರಸ್ಪರ ಟೀಕಾಪ್ರಹಾರದಲ್ಲಿ ತೊಡಗಿದ್ದಾರೆ. ಘಟನೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಅಸ್ತ್ರವಾಗುವ ಲಕ್ಷಣಗಳು ಕಂಡುಬರುತ್ತಿವೆ.

ದಾಂಧಲೆ ಆಕಸ್ಮಿಕ ಅಥವಾ ಸಣ್ಣ ಪ್ರಮಾಣದ್ದು ಅಲ್ಲ. ಇದು ಪೂರ್ವ ನಿಯೋಜಿತ ಎನಿಸುತ್ತದೆ. ಮುಖ್ಯವಾಗಿ ಹಳೇ ಹುಬ್ಬಳ್ಳಿ – ಕಸಬಾಪೇಟೆ ಪೊಲೀಸ್‌ ಠಾಣೆಗಳನ್ನು ಗುರಿಯಾಗಿಸಿ ದಾಂಧಲೆ ನಡೆಸಲು ಯೋಜಿಸಲಾಗಿತ್ತು. ದೊಡ್ಡ ಅನಾ ಹುತ ಸೃಷ್ಟಿಸುವ ಹುನ್ನಾರ ಇತ್ತು ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.

ಇದೊಂದು ಕೋಮುಭಾವನೆ ಕೆರಳಿಸುವ ಕೃತ್ಯ, ಬಿಜೆಪಿ ಬೆಂಬಲಿಗರೇ ಮಾಡುತ್ತಿದ್ದಾರೆ. ಸಾಮಾ ಜಿಕ ಜಾಲ ತಾಣದಲ್ಲಿ ವಿವಾದಾತ್ಮಕ ಪೋಸ್ಟ್‌ ಮಾಡಿದ ಯುವಕ ಬಿಜೆಪಿ ಬೆಂಬಲಿಗ. ಆಡಳಿತಾ ರೂಢ ಬಿಜೆಪಿಯು ಕೋಮು ಸೌಹಾರ್ದ ಕೆಡಿಸುವುದಕ್ಕಾಗಿ ಹಲವು ರೀತಿಯಲ್ಲಿ ಕುಮ್ಮಕ್ಕು ನೀಡುತ್ತಿದೆ. ಅಲ್ಪಸಂಖ್ಯಾಕರಲ್ಲಿ ಭಯದ ವಾತಾ ವರಣ ಸೃಷ್ಟಿಸುವ ಶಕ್ತಿಗಳನ್ನು ಬೆಂಬಲಿಸುತ್ತಿದೆ ಎಂಬುದು ಕಾಂಗ್ರೆಸ್‌ ನಾಯಕರ ಆರೋಪವಾಗಿದೆ.

ಆರೋಪ-ಪ್ರತ್ಯಾರೋಪ
ಹುಬ್ಬಳ್ಳಿ ಘಟನೆಗೆ ಪ್ರಮುಖ ಕಾರಣ ವಿವಾದಾತ್ಮಕ ಪೋಸ್ಟ್‌. ಇದು ಸೌಹಾರ್ದ ಕೆಡಿಸುವ ಕಾರ್ಯ. ಇಂಥದ್ದಕ್ಕೆ ಬಿಜೆಪಿಯ ಕುಮ್ಮಕ್ಕು ಇರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದರು. ಮತ್ತೂಂದೆಡೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರು ಪ್ರಕರಣ ಸಂಬಂಧ ಬಂಧಿತರಾದವರಲ್ಲಿ ಅಮಾಯಕರೂ ಇದ್ದಾರೆ ಎಂದಿದ್ದರು.

Advertisement

ಬಿಜೆಪಿ ಪ್ರತ್ಯಾರೋಪ
ದಾಂಧಲೆಗೆ ಕಾಂಗ್ರೆಸ್‌ನ ಸ್ಥಳೀಯ ಕೆಲವು ಮುಖಂಡರೇ ಕಾರಣ. ಕಾಂಗ್ರೆಸ್‌ ಜಿಲ್ಲಾ ಧ್ಯಕ್ಷರೇ ಘಟನೆಯ ಮುಂಚೂಣಿ ಯಲ್ಲಿ ನಿಂತಿರುವುದು ನೋಡಿದರೆ ಘಟನೆಗೆ ಯಾರ ಕುಮ್ಮಕ್ಕು ಇದೆ ಎಂಬುದು ಸ್ಪಷ್ಟ ವಾಗುತ್ತದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇರವಾಗಿ ಆರೋಪ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪಕ್ಷದ ಜಿಲ್ಲಾಧ್ಯಕ್ಷರು ಘಟನೆಗೆ ಪ್ರಚೋದನೆ ನೀಡಿಲ್ಲ. ಬದಲಾಗಿ ಪ್ರತಿಭಟನಕಾರರ ಮನವೊಲಿಸಲು ಹೋಗಿದ್ದರು ಎಂಬ ಸಮಜಾಯಿಷಿ ನೀಡಿದ್ದಾರೆ. ಪ್ರಕರಣದಲ್ಲಿ ಅವರ ತಪ್ಪು ಇದ್ದರೆ ಕ್ರಮ ಕೈಗೊಳ್ಳಿ ಎಂದಿದ್ದಾರೆ.

ಹೀಗಾಗಿ ಒಟ್ಟಾರೆ ಪ್ರಕರಣ ಈಗ ರಾಜಕೀಯ ಮೇಲಾಟಕ್ಕೆ ವೇದಿಕೆಯಂತಾಗಿದ್ದು, ಬೆಂಗಳೂರು, ಶಿವಮೊಗ್ಗದಲ್ಲಿ ನಡೆದ ವಿವಾದಾತ್ಮಕ ಘಟನೆಗಳ ಅನಂತರ ಹಳೇ ಹುಬ್ಬಳ್ಳಿ ಘಟನೆಯೂ ರಾಜಕೀಯ ಅಸ್ತ್ರವಾಗಿ ಬಳಕೆಯಾಗತೊಡಗಿದೆ. ಆರೋಪ- ಪ್ರತ್ಯಾರೋಪಗಳು, ವಾಗ್ಧಾಳಿಗಳು ಮುಂದುವರಿದಿವೆ.

ಗಲಭೆ ವೇಳೆ ದೇಶವಿರೋಧಿ ಘೋಷಣೆ?
ಹಳೇ ಹುಬ್ಬಳ್ಳಿ ಗಲಭೆ ವೇಳೆ ಯುವಕರ ಗುಂಪು “ಆರೆಸ್ಸೆಸ್‌ ಮುರ್ದಾಬಾದ್‌, ಐಎಸ್‌ಐ ಜಿಂದಾಬಾದ್‌, ನಹೀ ಚೋಡೆಂಗೆ ನಹೀ ಚೋಡೆಂಗೆ’ ಮತ್ತಿತರ ದೇಶ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೋ ವೈರಲ್‌ ಆಗಿದೆ. ಇನ್ನೊಂದೆಡೆ ಪ್ರಕರಣದಲ್ಲಿ ಬಂಧಿತರಾಗಿ ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದ ಎಲ್ಲ 103 ಜನರನ್ನು ಮಂಗಳವಾರ ಪ್ರತ್ಯೇಕ ಮೂರು ವಾಹನಗಳಲ್ಲಿ ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಮಾಸ್ಟರ್‌ ಮೈಂಡ್‌ ಮೌಲ್ವಿ ಪರಾರಿ?
ಹಳೇ ಹುಬ್ಬಳ್ಳಿ ಗಲಭೆಯ ಮಾಸ್ಟರ್‌ ಮೈಂಡ್‌ ಮಂಟೂರ ರಸ್ತೆ ಮಿಲ್ಲತ್‌ ನಗರದ ಮೌಲ್ವಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಈತ ಪೊಲೀಸ್‌ ಕಮಿಷನರ್‌ ಕಾರು ಏರಿ ಠಾಣೆ ಎದುರು ಸೇರಿದ್ದ ಯುವಕರ ಗುಂಪನ್ನು ಪ್ರತಿಭಟಿಸುವಂತೆ ಪ್ರಚೋದಿಸಿದ್ದ. ಅಲ್ಲದೆ ಗಲಭೆಗೆ ಮಸಲತ್ತು ನಡೆಸಿದ್ದ ಎನ್ನಲಾಗುತ್ತಿದೆ. ಗಲಭೆಗೆ ಪ್ರಮುಖ ಕಾರಣರಾದ 15-20 ಜನರಲ್ಲಿ ಇದುವರೆಗೆ ನಾಲ್ಕು ಪುಂಡರನ್ನು ಮಾತ್ರ ಬಂಧಿಸಿದ್ದು, ಮೌಲ್ವಿ ಸಹಿತ ಇನ್ನಿಬ್ಬರು ಹೈದರಾಬಾದ್‌ನತ್ತ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಗಲಭೆ ಸಂಬಂಧ ಮಂಗಳವಾರ 5 ಸೇರಿ ಒಟ್ಟು 12 ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ. ಒಟ್ಟು 115 ಜನರನ್ನು ಬಂಧಿಸಲಾಗಿದೆ.

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಯಾವ ಅಮಾಯಕನ ಬಂಧನವೂ ಆಗಿಲ್ಲ. ಸಾಕ್ಷಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗು ತ್ತಿದೆ. ನಾನು ಮೃದು ಅಲ್ಲ, ಖಡಕ್‌ ಸಿಎಂ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next