ಈಗಾಗಲೇ “ದಂಡುಪಾಳ್ಯ’, “ಶಿವಂ’ ಚಿತ್ರಗಳನ್ನು ಮಾಡಿರುವ ನಿರ್ದೇಶಕ ಶ್ರೀನಿವಾಸರಾಜು ಈಗ “ಹುಬ್ಬಳ್ಳಿ ಡಾಬಾ’ ಎಂಬ ಸಿನಿಮಾ ಮಾಡಿದ್ದಾರೆ.
ಮರ್ಡರ್ ಮಿಸ್ಟರಿ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರ ನ.11 ರಂದು ತೆರೆಕಾಣುತ್ತಿದೆ. ಚಿತ್ರ ಬಿಡುಗಡೆಯ ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಲಾಂಚ್ ಮಾಡಿದೆ ಚಿತ್ರತಂಡ. “ಭದ್ರಾ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ಪ್ರೇಮ್ ಕುಮಾರ್, ಅಖಿಲೇಶ್ ರೆಡ್ಡಿ, ಸುಬ್ಬ ರೆಡ್ಡಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಶ್ರೀನಿವಾಸರಾಜು ಕಥೆ, ಚಿತ್ರ ಕಥೆ ಬರೆದು ನಿರ್ದೇಶಿಸಿದ್ದಾರೆ.
ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ, “ಹುಬ್ಬಳ್ಳಿ ಡಾಬಾ ಒಂದು ಮರ್ಡರ್ ಮಿಸ್ಟರಿ ಕಥೆ. ಕೊರೊನಾ ಸಮಯದಲ್ಲಿ ನಿರ್ಬಂಧನೆಗಳು ಸಾಕಷ್ಟು ಇದ್ದವು, ಆ ಸಮಯದಲ್ಲಿ ಕೇವಲ 2 ಲೊಕೇಷನ್ ಬಳಸಿ, ಒಂದು ಮನೆ, ಇನ್ನೊಂದು ಡಾಬಾದಲ್ಲಿ ಚಿತ್ರೀಕರಿಸಿದ ಚಿತ್ರ ಇದು. ಈ ಸಿನಿಮಾ ಮೂರು ಭಾವನೆಗಳ ಸುತ್ತ ಸಾಗುತ್ತದೆ. ಲವ್, ರಿವೇಂಜ್ ಸುತ್ತ ಈ ಸಿನಿಮಾ ಸಾಗುತ್ತದೆ. ಚಿತ್ರ ತೆಲುಗು, ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಕ್ಲೈಮ್ಯಾಕ್ಸ್ ಭಿನ್ನವಾಗಿ ಮೂಡಿಬಂದಿದೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ 15 ನಿಮಿಷ ದಂಡುಪಾಳ್ಯದ ಪಾತ್ರಗಳು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
ನಟ ರವಿಶಂಕರ್ ಮಾತನಾಡಿ, “ಈ ಚಿತ್ರದಲ್ಲಿ ನಾನು ಚಲಪತಿ ಎನ್ನುವ ಪೊಲೀಸ್ ಇನ್ಸಪೆಕ್ಟರ್ ಪಾತ್ರ ನಿರ್ವ ಹಿ ಸಿದ್ದೇನೆ. ಇದು ಒಂದು ಮಾಸ್ ಚಿತ್ರವಾಗಿದೆ. ಇಂದಿನ ಯುತ್‌ಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ’ ಎಂದರು. ನವೀನ್ ಚಂದ್ರ , ದಿವ್ಯ ಪಿಳ್ಳೆ„ ಅನನ್ಯ , ರವಿಶಂಕರ್, ರಾಜಾ ರವೀಂದರ್, ಅಯ್ಯಪ್ಪ ಶರ್ಮ, ನಾಗಾ ಬಾಬು, ಪೃಥ್ವಿ, ಪೂಜಾ ಗಾಂಧಿ, ರವಿ ಕಾಳೆ, ಪೆಟ್ರೋಲ್ ಪ್ರಸನ್ನ, ಡ್ಯಾನಿ ಕುಟ್ಟಪ್ಪ, ಮುನಿರಾಜು, ಜೈದೇವ್ ಮೋಹನ್ ಮತ್ತಿತರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.