ನಿರ್ದೇಶಕ ಶ್ರೀನಿವಾಸ ರಾಜು ಥ್ರಿಲ್ಲರ್ ಕಥೆಗಳನ್ನು ತಮ್ಮದೇ ಶೈಲಿಯಲ್ಲಿ ಹೇಳುವಲ್ಲಿ ಎತ್ತಿದ ಕೈ. ಅದಕ್ಕೆ ಸಾಕ್ಷಿಯಾಗಿ ಅವರ ಈ ಹಿಂದಿನ ಸಿನಿಮಾಗಳಿವೆ. ಈ ಬಾರಿ “ಹುಬ್ಬಳ್ಳಿ ಡಾಬಾ’ ಚಿತ್ರದಲ್ಲಿ ಒಂದು ಮರ್ಡರ್ ಮಿಸ್ಟ್ರಿಯನ್ನು ರೋಚಕವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ “ಹುಬ್ಬಳ್ಳಿ ಡಾಬಾ’ ಒಂದು ಸಸ್ಪೆನ್ಸ್ -ಥ್ರಿಲ್ಲರ್ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗಬಹುದು.
ಮುಖ್ಯವಾಗಿ ಈ ಸಿನಿಮಾ ಎರಡು ಟ್ರ್ಯಾಕ್ ಗಳಲ್ಲಿ ಸಾಗುತ್ತದೆ. ಒಂದು “ದಂಡುಪಾಳ್ಯ’ ಗ್ಯಾಂಗ್, ಮತ್ತೂಂದು ನಿಗೂಢವಾಗಿ ಕೊಲೆಯಾಗುವ ಮಹಿಳೆ… ಈ ಎರಡೂ ಟ್ರ್ಯಾಕ್ ಅನ್ನು ಯಾವುದೇ ಗೊಂದಲವಿಲ್ಲದಂತೆ ಕಟ್ಟಿಕೊಡುವಲ್ಲಿ ನಿರ್ದೇಶಕ ಶ್ರೀನಿವಾಸ ರಾಜು ಯಶಸ್ವಿಯಾಗಿದ್ದಾರೆ.
ಮೊದಲೇ ಹೇಳಿದಂತೆ ಇದು ಮರ್ಡರ್ ಮಿಸ್ಟ್ರಿ ಸಿನಿಮಾವಾದ್ದರಿಂದ ಚಿತ್ರದಲ್ಲೊಂದಷ್ಟು ರಕ್ತದ ವಾಸನೆ ಇದೆ. ಅದರಾಚೆರ ಒಂದು ಥ್ರಿಲ್ಲರ್ ಸಿನಿಮಾಕ್ಕಿರಬೇಕಾದ ಎಲ್ಲಾ ಗುಣಗಳೊಂದಿಗೆ “ಹುಬ್ಬಳ್ಳಿ ಡಾಬಾ’ ಸಾಗುತ್ತದೆ. ಮುಖ್ಯವಾಗಿ ಇಲ್ಲಿ ಒಂದು ಕೊಲೆಯ ಜಾಡು ಹಿಡಿದು ಸಾಗುವ ಪೊಲೀಸ್ ಆಫೀಸರ್ ಒಂದು ಕಡೆಯಾದರೆ, ದಂಡುಪಾಳ್ಯ ತಂಡದ ಸ್ಕೆಚ್ ಮತ್ತೂಂದು ಕಡೆ… ಈ ಎರಡೂ ಅಂಶಗಳು ಒಂದು ಹಂತದಲ್ಲಿ ಸಂಧಿಸುತ್ತವೆ. ಅದು ಹೇಗೆ ಎಂಬ ಕುತೂಹಲಕ್ಕೆ ಉತ್ತರ “ಹುಬ್ಬಳ್ಳಿ ಡಾಬಾ’.
ಇಡೀ ಸಿನಿಮಾದ ಹೈಲೈಟ್ ಎಂದರೆ ರವಿಶಂಕರ್. ಪೊಲೀಸ್ ಆಫೀಸರ್ ಆಗಿ ರವಿಶಂಕರ್ ಇಡೀ ಸಿನಿಮಾವನ್ನು ಹೊತ್ತುಕೊಂಡು ಮುಂದೆ ಸಾಗಿದ್ದಾರೆ. ಅವರ ಹಾವ-ಭಾವ, ಖಡಕ್ ಡೈಲಾಗ್… ಎಲ್ಲವೂ ಈ ಸಿನಿಮಾದ ಪ್ಲಸ್. ಉಳಿದಂತೆ ಪೂಜಾ ಗಾಂಧಿ, ಮುನಿಯವರನ್ನೊಳಗೊಂಡ “ದಂಡುಪಾಳ್ಯ ಗ್ಯಾಂಗ್’ ಚಿತ್ರಕ್ಕೆ ಟ್ವಿಸ್ಟ್ ಕೊಟ್ಟಿದೆ. ನವೀನ್ ಚಂದ್ರ, ಅನನ್ಯಾ, ದಿವ್ಯ ಪಿಳ್ಳೆ„ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಆರ್‌ಪಿ