Advertisement

Hubli; ಸಿಎಂ-ಡಿಸಿಎಂ ವಿಚಾರ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ: ಆರ್.ಬಿ ತಿಮ್ಮಾಪುರ

04:36 PM Jul 07, 2024 | Team Udayavani |

ಹುಬ್ಬಳ್ಳಿ: ಮಾಧ್ಯಮಗಳಲ್ಲೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಚರ್ಚೆ ಮಾಡುತ್ತಿದ್ದಾರೆ. ಇದು ಹಾದಿ ಬೀದಿಯಲ್ಲಿ ಚರ್ಚೆ ಆಗುವ ವಿಷಯವಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ಸ್ಥಾನ ವಿಚಾರವಾಗಿ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಇದಕ್ಕಾಗಿಯೇ ಒಂದು ರೂಪುರೇಷೆ ಇದೆ.‌ ಪಕ್ಷದ ಹೈಕಮಾಂಡ್, ಸಿಎಲ್‌ಪಿ ಇದೆ ಎಂದರು.

ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆ ಆಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ದುರ್ಬಳಕೆ ಆಗುತ್ತಿಲ್ಲ. ವಾಸ್ತವಿಕತೆ ನೋಡಬೇಕು. ಲೋಕೋಪಯೋಗಿ ರಸ್ತೆ ಹೇಗೆ ಆಗಿವೆ ಎಂದು ಪ್ರಶ್ನಿಸಿದರು.

ಹಿಂದುಳಿದ ಜನಾಂಗಕ್ಕೆ ಸಹಾಯ ಮಾಡುವ ಪ್ರವೃತ್ತಿ ಮುಖ್ಯಮಂತ್ರಿಗಳಲ್ಲಿ ಇದೆ. ಯಾವುದೇ ರೀತಿಯ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಿಲ್ಲ.‌ಸಿಎಂ ಅವರೇ ತಂದ ಕಾನೂನು ಹೆಚ್ಚಿಗೆ ಅನುದಾನ ಕೊಡುತ್ತಾ ಇದ್ದಾರೆ. ಇದರಲ್ಲಿ ಹುಳುಕು ನೋಡುತ್ತಾ ಇದ್ದಾರೆ ಎಂದರು.

ಅಬಕಾರಿ ಇಲಾಖೆಯಲ್ಲಿ ಬಾರ್ ವ್ಯಾಪಾರಸ್ಥರಿಗಾಗಿ ವ್ಯಾಪಾರ ಸ್ನೇಹಿ ಅದಾಲತ್ ಆರಂಭ ವಿಚಾರವಾಗಿ, ಇದು ಬಹಳ ದಿನಗಳಿಂದ ಇಲಾಖೆಯಲ್ಲಿ ಇದ್ದ ವಿಚಾರ. ನಮ್ಮ ಇಲಾಖೆಯಲ್ಲಿ ಇದು ಆಗಬೇಕಾಗಿದೆ. ಗೋವಾದಲ್ಲಿ ಲಿಕ್ಕರ್ ಬಹಳ ಕಡಿಮೆ ದರದಲ್ಲಿ ಸಿಗುತ್ತದೆ. ಅಲ್ಲಿ ಯಾವುದೇ ತೆರಿಗೆ ಇಲ್ಲ. ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಸ್ಪಿರಿಟ್ ಹೋಗುತ್ತದೆ. ಅದನ್ನು ಮೊದಲು ತಡೆಗಟ್ಟಬೇಕು.‌ ನಮ್ಮ ರಾಜ್ಯದ ಲಿಕ್ಕರ್ ಚೆನ್ನಾಗಿದೆ. ಬೇರೆ ರಾಜ್ಯದ ಕಳಪೆ ಲಿಕ್ಕರ್ ನಮ್ಮ ರಾಜ್ಯಕ್ಕೆ ಬರಬಾರದು. ಅದಕ್ಕೆ ಮೊದಲು ಕಡಿವಾಣ ಹಾಕಬೇಕು ಎಂದರು.

Advertisement

ಮದ್ಯ ದರ ಏರಿಕೆ ವಿಚಾರವಾಗಿ ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಊಹಾಪೋಹಗಳ ಬೇಡ. ಎಂಎಸ್ಐಎಲ್‌ ಗಳಿಗೆ ಯಾವುದೇ ಪರವಾನಿಗೆ ಕೊಡಲ್ಲ. ಇನ್ನು ಮುಂದೆಯೂ ಕೊಡುವುದಿಲ್ಲ.‌ ನಮ್ಮ ಸರ್ಕಾರ ಈ ಕುರಿತು ಏನೋ ಒಂದು ಚಿಂತನೆ ಮಾಡುತ್ತಾ ಇದೆ.‌ ಇದು ನಮ್ಮ ಸರ್ಕಾರದ ನಿರ್ಧಾರ ಸಹ ಆಗಿದೆ. ಬಾರ್ ಅಂಗಡಿಗೆ ತೊಂದರೆ ಆಗುತ್ತದೆ ಎಂಬುದಲ್ಲ ಎಂದರು.

ಮುಡಾ ಹಗರಣ ಸಿಬಿಐ ತನಿಖೆಗೆ ಕೊಡಬೇಕೆನ್ನುವ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಬಿಜೆಪಿಯರಿಗೆ ಏನು ಕೆಲಸವಿದೆ. ಸುಳ್ಳನ್ನೇ ಸತ್ಯ ಮಾಡುವುದೇ ಅವರ ಕೆಲಸ. ಅದು ಮುಖ್ಯಮಂತ್ರಿ ಘನತೆಗೆ ಧಕ್ಕೆ ತರುವ ವಿಚಾರವಾಗಿದೆ. ಯಾವುದೇ ಹಗರಣ ಆಗಿಲ್ಲ.‌ ಅವರ ಸರ್ಕಾರ ಇದ್ದಾಗಲೇ ಮಾಡಿದ್ದು ಎಂದರು.

ಕೇಂದ್ರವು ರಾಜ್ಯಕ್ಕೆ ಐದು ಕೆಜಿ ಅಕ್ಕಿ ಕೊಡಬೇಕೆನ್ನುವ ವಿಚಾರ ಪ್ರಸ್ತಾಪ ಆಗುತ್ತಾ ಇದೆ.‌ ಅದಕ್ಕೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೊಡಬೇಕು. ಅವರಿಗೆ ಕೇವಲ ಹಿಂದುತ್ವ, ಜಾತಿ-ಧರ್ಮ ವಿವಾದ ಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ಮುಖ್ಯ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next