Advertisement

Hubli; ನಾನಾಸಾಹೇಬ ಪ್ರತಿಷ್ಠಾನದಿಂದ 164 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ

11:12 AM Feb 04, 2024 | Team Udayavani |

ಹುಬ್ಬಳ್ಳಿ: ಮಹಾರಾಷ್ಟ್ರದ ನಾನಾಸಾಹೇಬ ಪ್ರತಿಷ್ಠಾನದಿಂದ ಹುಬ್ಬಳ್ಳಿಯ ಸುಮಾರು 164 ಸ್ಥಳಗಳಲ್ಲಿ 15,000 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

Advertisement

ಮಹಾರಾಷ್ಟ್ರದ ವಿವಿಧ ಭಾಗಗಳಿಂದ ನಾಲ್ಕು ವಿಶೇಷ ರೈಲು, ಬಸ್ಸುಗಳು, ಸ್ವಂತ ವಾಹನಗಳಲ್ಲಿ ಆಗಮಿಸಿದ ನಾನಾ ಸಾಹೇಬ ಪ್ರತಿಷ್ಠಾನದ ಸ್ವಯಂಸೇವಕರು ರವಿವಾರ ಬೆಳಗ್ಗೆ 6:30 ಗಂಟೆಯಿಂದಲೇ ಸ್ವಚ್ಛತಾ ಕಾರ್ಯ ಆರಂಭಿಸಿದರು.

ವಿವಿಧ ಬಡಾವಣೆ, ಕೆರೆಗಳು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು, ಪೊಲೀಸ್ ಠಾಣೆಗಳು, ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಹಾಪೌರ ವೀಣಾ ಬರದ್ವಾಡ, ಉಪ ಮಹಾಪೌರ ಸತೀಶ ಹಾನಗಲ್ಲ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಇಲ್ಲಿನ ಜನತಾ ಬಜಾರ ಪ್ರದೇಶದಲ್ಲಿ ಕಸಗೂಡಿಸುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದರು.

Advertisement

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛತಾ ಅಭಿಯಾನದ ಪರಿಕಲ್ಪನೆಗೆ ಬಲತುಂಬುವ ಕಾರ್ಯ ಇದಾಗಿದೆ. ನಾನಾ ಸಾಹೇಬ ಪ್ರತಿಷ್ಠಾನ ಕೈಗೊಂಡಿರುವ ಸ್ವಚ್ಛತಾ ಅಭಿಯಾನದಲ್ಲಿ ಮಹಾರಾಷ್ಟ್ರದಿಂದ ಸ್ವಯಂ ಸೇವಕರು ಪಾಲ್ಗೊಳ್ಳಲು ಅನುಕೂಲವಾಗುವಂತೆ ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತನಾಡಿ ನಾಲ್ಕು ವಿಶೇಷ ರೈಲುಗಳ ವ್ಯವಸ್ಥೆ ಮಾಡಿಸಿದ್ದಾಗಿ ಸಚಿವರು ತಿಳಿಸಿದರು.

ಧಾರವಾಡದಲ್ಲಿಯೂ ಇಂತಹ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳುವಂತೆ ನಾನಾ ಸಾಹೇಬ ಪ್ರತಿಷ್ಠಾನಕ್ಕೆ ಮನವಿ ಮಾಡಿದ್ದಾಗಿ ಸಚಿವ ಜೋಶಿ ತಿಳಿಸಿದರು.

ನಾನಾ ಸಾಹೇಬ ಪ್ರತಿಷ್ಠಾನ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ಸಲಕರಣೆಗಳು ಹಾಗೂ ಸುಮಾರು 80ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next