Advertisement

Hubballi: ಗರ್ಭಕೋಶ ಗಡ್ಡೆ ಕರಗಿಸಲು ಪಂಚಗವ್ಯ ಚಿಕಿತ್ಸೆಯಲ್ಲಿದೆ ಮದ್ದು

05:57 PM Oct 25, 2023 | Team Udayavani |

ಹುಬ್ಬಳ್ಳಿ: ಕ್ಯಾನ್ಸರ್‌ ರೂಪ ತಾಳಬಹುದಾದ ಗರ್ಭಕೋಶ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ನಡೆಸಿ ತೆಗೆಯುವ ಬದಲು ಪಂಚಗವ್ಯ-ಮರ್ಮ ಚಿಕಿತ್ಸೆ ಹಾಗೂ ಅರೋಮಾ ಥೆರಪಿ ಮೂಲಕ ವಾಸಿ ಮಾಡಬಹುದು.

Advertisement

ಹೀಗೆಂದವರು ನಗರದ ಪಾರಂಪರಿಕ ಗವ್ಯಸಿದ್ಧ ವೈದ್ಯೆ ಎನ್‌.ಎಸ್‌.ಸವಿತಾ. “ಉದಯವಾಣಿ’ ಜತೆ ಮಾತ ನಾ ಡಿದ ಅವರು ಹೇಳಿದ್ದಿಷ್ಟು: ಬದಲಾದ ಜೀವನಶೈಲಿ, ಆಹಾರ ಪದ್ಧತಿ ಇನ್ನಿತರ ಕಾರಣಗಳಿಂದಾಗಿ ಸಣ್ಣ ವಯಸ್ಸಿನ ಮಹಿಳೆಯರಲ್ಲಿಯೂ ಈ ಸಮಸ್ಯೆ ಎದುರಾಗುತ್ತಿದೆ. ಗರ್ಭಕೋಶ ಗಡ್ಡೆ ಎಂದ ಕೂಡಲೇ ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ , ಅದನ್ನು ಮೀರಿದ್ದರೆ ಗರ್ಭಕೋಶವನ್ನೇ ತೆಗೆದು ಹಾಕುವುದು ಸದ್ಯದ ವೈದ್ಯ ಪದ್ಧತಿಯಲ್ಲಿದೆ. ಆದರೆ, ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಪಂಚಗವ್ಯ ಇನ್ನಿತರ ಗಿಡಮೂಲಿಕೆ ಔಷಧಗಳಿಂದ ವಾಸಿ ಪಡಿಸಬಹುದಾಗಿದೆ.

ಪಂಚಗವ್ಯ ಚಿಕಿತ್ಸೆ ಎಂದರೆ ವಿಶೇಷ ಚಿಕಿತ್ಸೆ ಏನು ಅಲ್ಲ. ಪಂಚಗವ್ಯ ಎಂಬ ಹೆಸರು ಸೂಚಿಸಿದಂತೆಯೇ ದೇಸಿ ಹಸುವಿನ ಉತ್ಪನ್ನಗಳನ್ನು ಬಳಸಿ ತಯಾರಿಸಿದ ಔಷಧವಾಗಿದೆ. ಪಂಚಗವ್ಯದ ಜತೆಗೆ ಕೆಲ ಗಿಡಮೂಲಿಕೆಗಳನ್ನು ಸೇರಿ ಮಾತ್ರೆ
ರೂಪದಲ್ಲಿ ಔಷಧ ತಯಾರಿಸಲಾಗುತ್ತದೆ.

ಗರ್ಭಕೋಶ ಗಡ್ಡೆ ಸಮಸ್ಯೆ ಇದ್ದವರು ಈ ವಟಿ(ಮಾತ್ರೆ) ತೆಗೆದುಕೊಳ್ಳುವುದರ ಜತೆಗೆ ಪಥ್ಯೆಯನ್ನು ಕಟ್ಟುನಿಟ್ಟಾಗಿ
ಪಾಲಿಸಬೇಕಾಗಿದೆ. ಮುಖ್ಯವಾಗಿ ಮೈದಾ ಉತ್ಪನ್ನಗಳು, ಜಂಕ್‌ಫುಡ್‌ ಸೇರಿದಂತೆ ನಾವು ಸೂಚಿಸುವ ಆಹಾರ, ತರಕಾರಿ, ಹಣ್ಣು, ಇನ್ನಿತರ ಕೆಲ ಪದಾರ್ಥಗಳನ್ನು ಬಿಡಬೇಕಾಗುತ್ತದೆ. ಹೇಳಿಕೊಟ್ಟ ಯೋಗದ ಆಸನಗಳನ್ನು ನಿಯಮಿತವಾಗಿ ಮಾಡಿದರೆ ಖಂಡಿತಾ ಗರ್ಭಕೋಶದ ಗಡ್ಡೆ ಶಸ್ತ್ರಚಿಕಿತ್ಸೆ ಇಲ್ಲದೆಯೇ ವಾಸಿ ಮಾಡಬಹುದಾಗಿದೆ.

ಸುಮಾರು ಮೂರು ವರ್ಷಗಳಿಂದ ಗರ್ಭಕೋಶದ ಗಡ್ಡೆ ಸಂಕಷ್ಟ ಅನುಭವಿಸುತ್ತಿದ್ದ ಮಹಿಳೆಯೊಬ್ಬರು ರಕ್ತಸ್ರಾವ,
ಹೊಟ್ಟೆನೋವಿನಿಂದ ಬಳಲುತ್ತಿದ್ದರು. ತಪಾ ಸಣೆ ನಡೆಸಿದಾಗ ಸುಮಾರು ಏಳು ಸೆಂಟಿ ಮೀಟರ್‌ ಗಾತ್ರದ ಗಡ್ಡೆ ಇರುವುದು
ತಿಳಿಯಿತು. ನಾಡಿ ಪರೀಕ್ಷೆ ಕೈಗೊಂಡ ನಂತರ ಪಂಚಗವ್ಯ ಚಿಕಿತ್ಸೆ ಆರಂಭಿಸಲಾಯಿತು. ಕಟ್ಟುನಿಟ್ಟು ಪಥ್ಯೆ ಮಾಡುವಂತೆ
ಸೂಚಿಸಿದೆ. ಯೋಗಾಸನ ಬಗ್ಗೆ ಹೇಳಿಕೊಟ್ಟಿದ್ದೆ. ಚಿಕಿತ್ಸೆಗೆ ಸ್ಪಂದಿಸಿದರು. ಪೂರ್ಣ ಪ್ರಮಾಣದಲ್ಲಿ ಗಡ್ಡೆ ಕರಗಿತು. ಇದೇ ರೀತಿ ಹಲವು ಮಹಿಳೆಯರಿಗೆ ನೀಡಿದ ಚಿಕಿತ್ಸೆಯಲ್ಲೂ ಉತ್ತಮ ಫಲಿತಾಂಶ ಬಂದಿದೆ.

Advertisement

ರಾಷ್ಟ್ರ ಮಟ್ಟದ ಪ್ರಶಸ್ತಿ: ಪಂಚಗವ್ಯ ಚಿಕಿತ್ಸೆಯಡಿ ಗರ್ಭಕೋಶದ ಗಡ್ಡೆಯನ್ನು ವಾಸಿ ಮಾಡಿದ್ದರ ಹಿನ್ನೆಲೆಯಲ್ಲಿ ಕಾಂಚಿಪುರಂನ “ಪಂಚಗವ್ಯ ವಿದ್ಯಾಪೀಠಂ’ 2022ರಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಪಾರಂಪರಿಕ ವೈದ್ಯೆ ಎಂಬ ಹೆಮ್ಮೆ ನನಗಿದೆ. ಇದೀಗ ಬುದ್ಧಿಮಾಂದ್ಯ ಮಕ್ಕಳ ಮೇಲೆ ಪಂಚಗವ್ಯ ಚಿಕಿತ್ಸೆ ಪ್ರಯೋಗ ನಡೆಸಿದ್ದೇನೆ. ಫ‌ಲಿತಾಂಶ ಇನ್ನಷ್ಟೇ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next