Advertisement

“ಮಕ್ಕಳನ್ನು ಉತ್ತಮ ಕಲಾವಿದರನ್ನಾಗಿ ರೂಪಿಸಿ”

02:10 PM Sep 22, 2021 | Team Udayavani |

ಹುಬ್ಬಳ್ಳಿ: ಬದುಕನ್ನು ಕಲೆಯಿಂದಲೇ ಕಟ್ಟಿಕೊಳ್ಳುವ ನಿಟ್ಟಿನಲ್ಲಿಕಲಾವಿದರು ತಮ್ಮ ಮಕ್ಕಳನ್ನು ಅತ್ಯುತ್ತಮ ಕಲಾವಿದರನ್ನಾಗಿ ರೂಪಿಸಲುಮುಂದಾಗಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆಪದ್ಮಶ್ರೀ ಬಿ.ಮಂಜಮ್ಮ ಜೋಗತಿ ಹೇಳಿದರು.

Advertisement

ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಕಲಘಟಗಿ ತಾಲೂಕಿನಸೂರಶೆಟ್ಟಿಕೊಪ್ಪ ಗ್ರಾಮದ ಬನಶಂಕರಿದೇವಿ ಸಭಾಭವನದಲ್ಲಿಮಾರುತಿ ಕರಡಿ ಸಂಘ, ಜಾನಪದ ಕಲಾವಿದರ ಬಳಗ ಆಯೋಜಿಸಿದ್ದ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿನ ಕಲಾವಿದರು ತಮ್ಮ ಮಕ್ಕಳನ್ನು ಕಲಾವಿದರನ್ನಾಗಿರೂಪಿಸಲು ಮುಂದಾಗಬೇಕು. ಕರಡಿ ಮಜಲು, ಜಗ್ಗಲಿಗೆ ನುಡಿಸುವಕಲಾವಿದರು ಮುಂದಿನ ದಿನಗಳಲ್ಲಿ ಕರ್ನಾಟಕ ಜಾನಪದ ಅಕಾಡೆಮಿಅಧ್ಯಕ್ಷರಾಗಬೇಕೆಂಬುದು ನನ್ನ ಬಯಕೆ ಎಂದರು.ಜಾನಪದ ಅಕಾಡೆಮಿ ಸದಸ್ಯ ಸಂಚಾಲಕ ಶಂಕರ ಅರ್ಕಸಾಲಿಮಾತನಾಡಿ, ಅಕಾಡೆಮಿ ಗ್ರಾಮೀಣ ಭಾಗದ ಪ್ರತಿಭೆಗಳನ್ನುಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್‌ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ,ನಾಟಕ ಅಕಾಡೆಮಿ ಸದಸ್ಯ ಶಿವಣ್ಣ ಅದರಗುಂಚಿ, ಹಿರಿಯ ಜಾನಪದಕಲಾವಿದ ಸಾಂಬಯ್ಯ ಹಿರೇಮಠ, ಮಾತನಾಡಿದರು. ಲಡ್ಡು ಮುತ್ಯಾಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಒಂಬತ್ತು ಜನ ಹಿರಿಯ ಜಾನಪದಕಲಾವಿದರನ್ನು ಸನ್ಮಾನಿಸಲಾಯಿತು. ಕರ್ನಾಟಕ ಜಾನಪದವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ|ವಿಜಯಲಕ್ಷ್ಮೀಗೇಟಿಯವರು ಉಪನ್ಯಾಸ ನೀಡಿದರು.ಕುಬೇರಗೌಡ ಮುರಳ್ಳಿ ಹಾಗೂ ತಂಡದವರಿಂದ ಕರಡಿಮಜಲು, ಈಶ್ವರಪ್ಪ ಕೂಬಿಹಾಳ ಹಾಗೂ ತಂಡದವರಿಂದ ಜಗ್ಗಲಿಗೆ,ಗದಿಗಯ್ಯ ಹಿರೇಮಠ ಹಾಗೂ ತಂಡದವರಿಂದ ಜೋಗತಿ ನೃತ್ಯಪ್ರದರ್ಶನಗೊಂಡವು.

Advertisement

ಗ್ರಾಪಂ ಅಧ್ಯಕ್ಷ ಸಂತೋಷ ಕುಮಾರ ಹೊಸಮನಿ, ಉಪಾಧ್ಯಕ್ಷೆಶಾಂತವ್ವ ಭಜಂತ್ರಿ ಮುಖಂಡರಾದ ಗದಿಗೆಪ್ಪ ಕಳ್ಳಿಮನಿ, ಗಂಗಯ್ಯಹಿರೇಮಠ, ಕಲಾವಿದರಾದ ಎಂ.ಆರ್‌. ತೋಟಂಗಟಿ, ಕೆ.ಕೊಟ್ರೇಶ,ಮಹಾರುದ್ರಪ್ಪ ಇಟಗಿ, ಫಕ್ಕೀರೇಶ ಕೊಂಡಾಯಿ, ಬಸವರಾಜಶಿಗ್ಗಾಂವಿ, ಗೋಪಾಲ ಯಂಕಪ್ಪನವರ ಇನ್ನಿತರರು ಪಾಲ್ಗೊಂಡಿದ್ದರು.

ಅಕಾಡೆಮಿ ಅಧ್ಯಕ್ಷರನ್ನು ಎತ್ತಿನ ಬಂಡಿಯಲ್ಲಿ ವಿವಿಧ ವಾದ್ಯ,ಗೊಂಬೆಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಕರ್ನಾಟಕಜಾನಪದ ವಿವಿ ಸಹಾಯಕ ಪ್ರಾಧ್ಯಾಪಕ ಶರೀಫ್‌ ಮಾಕಪ್ಪನವರನಿರೂಪಿಸಿದರು

 

Advertisement

Udayavani is now on Telegram. Click here to join our channel and stay updated with the latest news.

Next