Advertisement
ಧಾರವಾಡ: ಒಂದರಲ್ಲಿ ಅಣ್ಣ ಸೋತರೂ, ಎರಡರಲ್ಲಿ ಗೆಲ್ಲಲೇಬೇಕು. ಮೂರರಲ್ಲಿ ಧಣಿ ಗೆದ್ದರೆ, ನಾಲ್ಕರಲ್ಲಿ ವಿ.ಕೆ.ಬಾಸ್‌ಗೆ ಪ್ರಚಂಡ ಗೆಲುವು. ಆಗ ಸೋತಿದ್ದಕ್ಕೆ ಈಗ ಗೆಲುವು, ಈಗ ಸೋತಿದ್ದಕ್ಕೆ ಮುಂದೆ ಕೌಂಟರ್. ಇಲ್ಲೇನಿದ್ದರೂ ಮಕ್ಕಿ ಕಾ ಮಕ್ಕಿ.
Related Articles
Advertisement
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಈ ವಾರ್ಡಿನಲ್ಲಿ ಬಿಜೆಪಿ ಅತ್ಯಧಿಕ ಮತಗಳನ್ನು ಪಡೆದುಕೊಂಡಿತ್ತು. ಇದು ಶಾಸಕ ಅಮೃತ ದೇಸಾಯಿ ಅವರಿಗೆ ವರದಾನವಾದರೆ, ವಿನಯ್ ಅವರ ಹಿನ್ನಡೆಗೆ ಕಾರಣವಾಗಿತ್ತು. ಇದೀಗ ವಿನಯ್ ಪಡೆ ಮತ್ತೆ ಇಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಂಡಿದೆ. ಮತ್ತೆ ಗೆದ್ದ ಜೋಶಿ ಭಂಟ (3ನೇ ವಾರ್ಡ್): ನಿರೀಕ್ಷೆಯಂತೆಯೇ ಇಲ್ಲಿ ಈರೇಶ ಅಂಚಟಗೇರಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದು ವಿಶೇಷ. ಕಳೆದ ಬಾರಿ ಪಾಲಿಕೆ ಚುನಾವಣೆಯಲ್ಲಿ ಅಂಚಟಗೇರಿ ಅವರ ತಾಯಿ ಮಹಾನಂದ ಅವರು ಅತ್ಯಲ್ಪ ಮತಗಳ ಅಂತರದಿಂದ ಸೋಲುಂಡಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಹೂಗಾರ ಅವರಿಗಿಂತಲೂ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಈರೇಶ ಜಯಗಳಿಸಿದ್ದಾರೆ. 2013ರಲ್ಲಿ ಸೋತ ಮೇಲೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸದಾ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದ ಈರೇಶ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಚ್ಚುಮೆಚ್ಚಿನ ಯುವ ನಾಯಕ. ಹೀಗಾಗಿಯೇ ಅವರನ್ನು ಈಗಾಗಲೇ ಪ್ರಸಿದ್ಧ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಅಧ್ಯಕ್ಷರನ್ನಾಗಿ ಜೋಶಿ ಅವರೇ ನೇಮಿಸಿದ್ದಾರೆ. ಇದೀಗ ಮೇಯರ್‌ಗಿರಿ ಅವರಿಗೆ ಲಭಿಸುವುದು ಬಹುತೇಕ ಖಚಿತವಾಗಿದೆ.
ಕಮಲ ತೆಕ್ಕೆಯಿಂದ “ಕೈ’ ವಶ (4ನೇ ವಾರ್ಡ್): ಕಳೆದ ಬಾರಿ ಕಮಲ ಅರಳಿದ್ದ ಈ ವಾರ್ಡ್‌ಅನ್ನು ಮತ್ತೆ ಕೈ ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ರಾಜಶೇಖರ ಕಮತಿ ಆಯ್ಕೆಯಾಗಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಅಪ್ಪಟ ಶಿಷ್ಯ. ಅಷ್ಟೇಯಲ್ಲ, ಕಮಲಾಪುರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಲಿಂಗಾಯತ ಸಮುದಾಯ ಇವರ ಬೆನ್ನಿಗೆ ನಿಂತಿದ್ದರಿಂದ ಬಿಜೆಪಿ ಅಭ್ಯರ್ಥಿ ಬಸವರಾಜ ಪಳ್ಳೋಟಿ ಅವರಿಗಿಂತಲೂ 900 ಮತಗಳ ಅಂತರದಿಂದ ಗೆಲುವು ಸಾಧಿಸಲು ಅನುಕೂಲವಾಯಿತು. ಇಲ್ಲಿ ಜೆಡಿಎಸ್ ಮುಸ್ತಾಕ್ ಅಹ್ಮದ 619 ಮತಗಳನ್ನು ಪಡೆದುಕೊಂಡಿದ್ದಾರೆ.
ಕೈ ಸೋತಲ್ಲಿ ಕಮಲ, ಕಮಲ ಸೊರಗಿದಲ್ಲಿ ಕೈ: (5-6ನೇ ವಾರ್ಡ್): 5ನೇ ವಾರ್ಡ್‌ನಲ್ಲಿ ಕಮಲ ಅರಳಿ ಕೈ ಸೋತರೆ, 6ನೇ ವಾರ್ಡ್‌ನಲ್ಲಿ ಕೈ ಸೋತು ಕಮಲ ಅರಳಿದೆ. 5ನೇ ವಾರ್ಡ್‌ನಲ್ಲಿ ನಿತೀನ್ ಇಂಡಿ ಕಾಂಗ್ರೆಸ್ ಅಭ್ಯರ್ಥಿ ಶಿವಪ್ಪ ಚೆನ್ನಗೌಡರ ವಿರುದ್ಧ ಗೆದ್ದರೆ, 6ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ನ ದಿಲಾÒದ್ ಬೇಗಂ ನದಾಫ್ ಬಿಜೆಪಿಯ ಭೀಮವ್ವಾ ಮಾಳಿ ವಿರುದ್ಧ ಗೆಲುವು ಸಾಧಿಸಿದ್ದಾರೆ.