Advertisement

ಹಾಳುಕೊಂಪೆಯಾದ ಬಸ್‌ ನಿಲ್ದಾಣ : ಕಸದ ರಾಶಿ, ಮುಳ್ಳುಕಂಟಿ, ಮೂತ್ರದ ಘಾಟು

02:34 PM Jan 23, 2022 | Team Udayavani |

ಹುಬ್ಬಳ್ಳಿ: ಎಲ್ಲೆಂದರಲ್ಲಿ ಕಸದ ರಾಶಿ, ಬೆಳೆದು ನಿಂತ ಮುಳ್ಳುಕಂಟಿ, ಆವರಣದಕ್ಕೆ ಕಾಲಿಟ್ಟರೆ ಸಾಕು ಮೂಗಿಗೆ ರಾಚುವ ಮೂತ್ರ ವಿಸರ್ಜನೆ ಘಾಟು, ಸ್ವತ್ಛತೆಗೆ ಅದೆಷ್ಟೋ ಮೈಲು ದೂರದಲ್ಲಿದೆ ಎಂಬ ಭಾವನೆ..

Advertisement

ಇದು ಗೋಕುಲ ರಸ್ತೆಯಲ್ಲಿನ ಕೇಂದ್ರ ಬಸ್‌ ನಿಲ್ದಾಣದ ಚಿತ್ರಣ. ನಿಲ್ದಾಣ ವ್ಯಾಪ್ತಿಯಲ್ಲಿ ವಿಶಾಲ ಜಾಗವಿದೆ. ಆದರೆ ಅರ್ಧದಷ್ಟು ಜಾಗ ಗಿಡಗಂಟಿಗಳಿಂದ ತುಂಬಿದೆ. ಮೂತ್ರ ವಿಸರ್ಜನೆ, ಬಯಲು ಬಹಿರ್ದೆಸೆಗೆ ಬಳಕೆಯಾಗುತ್ತಿದೆ. ಕೇವಲ ಸಾರ್ವಜನಿಕರಷ್ಟೇ ಅಲ್ಲದೆ ಸಾರಿಗೆ ಸಿಬ್ಬಂದಿ ಸಹ ಬಯಲಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದು ಕಂಡುಬರುತ್ತದೆ. ಆವರಣದಲ್ಲಿ ಅಲ್ಲಲ್ಲಿ ಕಸದ ರಾಶಿ, ಕಂಡ ಕಂಡ ಕಡೆ ಗುಟಕಾ, ಎಲೆ-ಅಡಿಕೆ ತಿಂದು ಉಗಿದ ಕಲೆ ರಾಚುತ್ತವೆ.

ಗೋಕುಲ ರಸ್ತೆಯಲ್ಲಿ ನಿರ್ಮಾಣಗೊಂಡ ಹೊಸ ಬಸ್‌ ನಿಲ್ದಾಣ ಕೆಲ ವರ್ಷಗಳವರೆಗೆ ಇದ್ದೂ ಇಲ್ಲದ ಸ್ಥಿತಿಗೆ ತಲುಪಿತ್ತು. ಬಸ್‌ಗಳ ಹೆಚ್ಚಿನ ಸಂಚಾರ-ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ರಾತ್ರಿಯಾದರೆ ಅನೈತಿಕ ಕಾರ್ಯಗಳಿಗೆ ಬಳಕೆಯಾಗುತ್ತಿತ್ತು. ನಂತರದಲ್ಲಿ ಕೆಲವೊಂದು ರೂಟ್‌ಗಳ ಬಸ್‌ಗಳನ್ನು ಹೊಸ ಬಸ್‌ ನಿಲ್ದಾಣದಿಂದಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗಿತ್ತು.
ಹಳೇ ಬಸ್‌ ನಿಲ್ದಾಣ ಪುನರ್‌ ನಿರ್ಮಾಣ ಹಿನ್ನೆಲೆಯಲ್ಲಿ ಬಹುತೇಕ ಬಸ್‌ಗಳನ್ನು ಗೋಕುಲ ರಸ್ತೆಯ ಬಸ್‌ ನಿಲ್ದಾಣಕ್ಕೆ, ಇನ್ನು ಕೆಲವು ಬಸ್‌ಗಳನ್ನು ಹೊಸೂರಿನಲ್ಲಿ ನಿರ್ಮಾಣಗೊಂಡ
ಪ್ರಾದೇಶಿಕ ಬಸ್‌ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣದಿಂದ ಬಸ್‌ಗಳ ಓಡಾಟ ಸಂಖ್ಯೆ ಹೆಚ್ಚಳವಾಗಿದೆಯಾದರೂ, ಸ್ವತ್ಛತೆ-ಸೌಲಭ್ಯಗಳ ಕೊರತೆ
ಎದ್ದು ಕಾಣುತ್ತಿದೆ.

ಹೆಸರಿಗಷ್ಟೇ ಉಚಿತ
ಬಸ್‌ ನಿಲ್ದಾಣಗಳಲ್ಲಿ ಮೂತ್ರ ವಿಸರ್ಜನೆ ಉಚಿತವಾಗಿದ್ದರೂ ಗುತ್ತಿಗೆ ಪಡೆದವರು ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಮೂತ್ರ ವಿಸರ್ಜನೆಗೆ 2 ರಿಂದ 3 ರೂ.
ಹಾಗೂ ಶೌಚಾಲಯಕ್ಕೆ ಹೊದರೆ 10 ರೂ. ನೀಡಬೇಕಾಗಿದೆ. ರಾತ್ರಿ ವೇಳೆ ಮಹಿಳೆಯರು ಶೌಚಾಲಯ ಕಡೆ ಹೋಗದಂತ ಸ್ಥಿತಿ ಇದೆ ಎಂಬ ಆರೋಪ ಅನೇಕರದ್ದಾಗಿದೆ.

ಬಾಟಲಿ ನೀರೇ ಅನಿವಾರ್ಯ
ಎರಡು ಬದಿಯಲ್ಲಿ ಕುಡಿಯುವ ನೀರು ಎಂದು ನಾಮಫಲಕಗಳು ರಾರಾಜಿಸುತ್ತವೆ, ಆದರೆ ಅದನ್ನು ನಂಬಿಕೊಂಡು ಹೋದವರಿಗೆ ದೇವರೆ ಗತಿ. ಎರಡೂ ಕುಡಿಯುವ ನೀರಿನ ಕಟ್ಟೆಗಳು ಹಾಳಾಗಿದ್ದು, ಇಲಾಖೆಯಿಂದಲೇ ಅವೆರಡಕ್ಕೆ ಯಾರೂ ಹೋಗದಂತೆ ತಡೆಗೋಡೆ ನಿರ್ಮಿಸಲಾಗಿದೆ. ಹೊರ ಭಾಗದಲ್ಲಿರುವ ನೀರಿನ ಅರವಟಿಗೆಗಳು ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಎರಡು ಬದಿಯಲ್ಲಿ ಒಂದೊಂದು ನೀರಿನ ಅರವಟಿಗೆ ಇದ್ದು, ಅವು ಕೂಡಾ ಸರಿಯಾದ ಸ್ವತ್ಛತೆ ಇಲ್ಲದೆ ಆಗಮಿಸುವ ಪ್ರಯಾಣಿಕರು ಅನಿರ್ವಾಯವಾಗಿ ಬಾಟಲಿ ನೀರಿಗೆ ಮೊರೆ ಹೋಗುವಂತಾಗಿದೆ.

Advertisement

ಸದ್ಬಳಕೆಯಾಗದ ಖಾಲಿ ಜಾಗ
ನಿಲ್ದಾಣದ ಒಳಭಾಗ ಸಾಕಷ್ಟು ಖಾಲಿ ಜಾಗ ಬಿಟ್ಟಿದ್ದು, ಯಾರು ಅವಿತುಕೊಂಡು ಕುಳಿತರೂ ಗೊತ್ತಾಗದ ರೀತಿಯಲ್ಲಿ ಗಿಡಗಂಟಿಗಳು ಬೆಳೆದಿವೆ. ರಾತ್ರಿ ವೇಳೆ ಪ್ರಯಾಣಿಕರು
ಹೆದರುವಂತಾಗಿದೆ. ಆರಂಭದಲ್ಲಿ ನಿಲ್ದಾಣದ ಮುಂಭಾಗದಲ್ಲಿ ಉದ್ಯಾನವನ ಸಹ ನಿರ್ಮಾಣ ಮಾಡಲಾಗಿತ್ತು. ದಿನಕಳೆದಂತೆ ಎಲ್ಲವೂ ಕೂಡಾ ಹಾಳಾಗುತ್ತಿದ್ದು, ತ್ಯಾಜ್ಯ ಎಸೆಯುವ ತಾಣವಾಗತೊಡಗಿದೆ.

ಕಳೆದ ಬಾರಿ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿದಾಗ ಈ ವಿಷಯಗಳು ನಮ್ಮ ಗಮನಕ್ಕೆ ಬಂದಿಲ್ಲ. ಇದೀಗ ಡಿಸಿ ಬದಲಾವಣೆಯಾಗಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ
ಸಭೆ ನಡೆಸಿ ಪ್ರಯಾಣಿಕರ ಅನುಕೂಲಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆ ಜೊತೆಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಹೊಸ ಬಸ್‌ ನಿಲ್ದಾಣದ ಸ್ವತ್ಛತೆಗೆ ಕೂಡಲೇ ಆದ್ಯತೆ
ನೀಡಲಾಗುವುದು.
– ಗುರುದತ್ತ ಹೆಗಡೆ, ಎಂ.ಡಿ. ವಾಕರಸಾ ಸಂಸ್ಥೆ ಹುಬ್ಬಳ್ಳಿ

ಪರ ಊರುಗಳಿಗೆ ರಾತ್ರಿ ತೆರಳುವ ಹಾಗೂ ಆಗಮಿಸುವ ಸಮಯದಲ್ಲಿ ನಿಲ್ದಾಣದ ಸ್ಥಿತಿ ನೋಡಿ ಭಯವಾಗುತ್ತದೆ. ಕುಟುಂಬದೊಂದಿಗೆ ಆಗಮಿಸಿದರೆ ಪರಿಸ್ಥಿತಿ ಹೇಳತೀರದು. ಮೂತ್ರ ವಿಸರ್ಜನೆಗೆ ಹೋದರೆ ಶುಲ್ಕ ವಸೂಲಿ ಮಾಡುತ್ತಾರೆ, ಉಚಿತ ಎಂದರೆ ಹೊರ ಹೋಗಿ ಎಂದು ದಬಾಯಿಸುತ್ತಾರೆ.
– ಸುರೇಶ ವಾಲಿ, ಖಾಸಗಿ ಕಂಪನಿ ಸೇಲ್ಸ್ ಮ್ಯಾನೇಜರ್‌

Advertisement

Udayavani is now on Telegram. Click here to join our channel and stay updated with the latest news.

Next